Your cart is empty now.
ಸವಾಶಿವ ಅವರದು ಸಣ್ಣಕತೆಯ ಪ್ರಕಾರಕ್ಕೆ ಇಡಿಯಾಗಿ ತನ್ನನ್ನು ತೊಡಗಿಸಿಕೊಂಡ ಪ್ರತಿಭೆ. ಸರೀಕರಾದ ಅನಂತಮೂರ್ತಿ, ಚಿತ್ತಾಲ, ದೇಸಾಯಿ, ಲಂಕೇಶ, ತೇಜಸ್ವಿ ಮೊದಲಾದವರೆಲ್ಲ ಪ್ರಮುಖವಾಗಿ ಸಣ್ಣಕಥಾ ಪ್ರಕಾರದಲ್ಲಿ ಕೃಷಿ ಮಾಡಿದ್ದರೂ ಬೇರೆ ಬೇರೆ ಪ್ರಕಾರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಸದಾಶಿವ ಮಾತ್ರ ಸಣ್ಣಕಥಾ ಪ್ರಕಾರಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಬಹುಶಃ ಈ ಕಾರಣದಿಂದಲೇ ಇರಬೇಕು. ಸದಾಶಿವರಲ್ಲಿ ನಾವು ಈ ಪ್ರಕಾರಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ಪ್ರಯೋಗಗಳನ್ನು ಕಾಣುತ್ತೇವೆ. ಸದಾಶಿವರ ಕಥಾಸಾಹಿತ್ಯದ ಅಧ್ಯಯನ ಒಂದು . ನೆರೆಯಲ್ಲಿ ಕನ್ನಡ ಸಣ್ಣಕತೆ ಕಂಡುಕೊಂಡ ಸಾಧ್ಯತೆಗಳ ಅಧ್ಯಯನವಾಗಿಯೂ ಮುಖ್ಯವಾಗುತ್ತದೆ. ಕತೆಯನ್ನು ರೂಪಕವಾಗಿ, ಸಂವಾದವಾಗಿ, ಕಾವ್ಯಕ್ಕೆ ಹತ್ತಿರವೆಂಬಂತೆ. ಫ್ರಾಂಟಿಸಿಯಾಗಿ, ಪ್ರತಿಭಟನೆಯ ಸಾಧನವಾಗಿ, ಅನುಭವದ ವಿಶ್ಲೇಷಣೆಗೆ ತನ್ನನ್ನು ಸ್ಪಷ್ಟಪಡಿಸಿಕೊಳ್ಳುವ ಮಾಧ್ಯಮವಾಗಿ ಸದಾಶಿವ ಬಳಸಿಕೊಂಡಿದ್ದಾರೆ. ಕಥಾಪ್ರಪಂಚವನ್ನು ಅವರು ಚಿಂತಕನಾಗಿ, ಬಂಡಾಯಗಾರನಾಗಿ ಪ್ರವೇಶಿಸಿದ್ದಾರೆ. ಆ ಮೂಲಕ ಸಣ್ಣಕತೆಯ ಪ್ರಕಾರ ಪ್ರಕಾರಕ್ಕೆ ಅಧ್ಯಯನಯೋಗ್ಯವಾದ ಕೆಲವು ಮುಖ್ಯ ಕತೆಗಳನ್ನು ನೀಡಿದ್ದಾರೆ.
- ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.