Your cart is empty now.
ತಪ್ಪುತ್ತಿರುವ ಉಸಿರನ್ನು ನಿಯಂತ್ರಿಸಿಕೊಳ್ಳುತ್ತಾ "ಯಾರಣ್ಣಾ ಟೆಲಿಗ್ರಾಮು?” ಅಂದಳು. ಅದಕ್ಕೆ ಪೋಸ್ಟ್‌ಮ್ಯಾನ್ ರಂಗಣ್ಣ "ನಿಮ್ಮೂರಿಂದವ್ವಾ" ಎಂದಾಗ ರೇಣುಕಾಳ ಮೈ ಅಲ್ಲಾಡಿದಂತಾಗಿ ಗಂಟಲು ಕಟ್ಟಿಕೊಂಡಿತು. - ಅವ್ವನ ಟೆಲಿಗ್ರಾಂ
ಬಸಜ್ಜ ಮಾಡುವ ಮಣ್ಣಿನ ಕಾರ್ಯ ನೋಡಿದವರಿಗೆ "ಸತ್ ಮ್ಯಾಲೆ ಹಿಂಗ್ ನೋಡಿಕೆಂಡ್ರೆ, ಸಾಯಾಕ್ ಯಾಕ ಹೆದುದ್ದೇಕು?" ಎನ್ನಿಸುತ್ತಿತ್ತು. ಇದೇ ಹೆಮ್ಮೆಯಿಂದ ಕೆಲವರು ಅವನನ್ನು ನಮ್ ಕಾಲುದ್ ಸತ್ಯ ಹರಿಶ್ಚಂದ್ರ" ಎನ್ನುತ್ತಿದ್ದರು. - ಎಡೆ
ಆಯಣ್ಣ ಜೇಬಿನಿಂದ ಹತ್ತತ್ತು ರೂಪಾಯಿಯ ಎರಡು ಡೈರಿ ಮಿಲ್ಕ್ ಚಾಕ್ಲೀಟ್‌ಗಳನ್ನು ತೆಗೆದು ನನ್ನ ಕೈಯೊಳಗಿಟ್ಟು ಮುಖ ನೋಡಿದ. ಆಯಣ್ಣ ಚಾಕ್ಲೀಟ್‌ಗಳನ್ನು ಕೊಟ್ಟಿರದೇ ಇದ್ದಿದ್ದರೆ, ಏನು ಹೇಳುತ್ತಿದ್ದೆನೋ? ಗೊತ್ತಿಲ್ಲ. - ಡೈರಿ ಮಿಲ್ಕ್ ಚಾಕ್ಲೀಟು
"ಹುಡುಗಿ ಹೆಂಗಾನಾ ಇಲ್ಲಿಜಾ, ರೊಟ್ಟಿನ ರೌಂಡುಗ ಮಾಡಾಕ ಬರೇಕು. ಜೊತೆಗೆ ಬೆಂಡೀಕಾಯಿ ಚಟ್ಟಿಗೂಡ ಬರೇಕು. ಅಜಾ. ಹಂಗೇ ಅಜ್ಜಿಯಂಗ ಸಂಸಾರಾನೂ ಮಾಡೋಕು " ಎಂದ ವಿಜಯ್. -ರೊಟ್ಟಿ ಬೆಂಡಿಕಾಯಿ ಚಟ್ಟಿ
ಬಾಲ್ಯ-ಮನಸು-ದೇಹ-ಸಿನಿಮಾ ಎಲ್ಲವೂ ತಲೆಯ ಬೀಸೋ ಕಲ್ಲಿನಲ್ಲಿ ಪುಡಿ ಪುಡಿಯಾದವು. ಒಂದು ಸಿನಿಮಾ ಅವಶ್ಯಕತೆಗೂ ಮೀರಿ ಅವಳನ್ನು ಚಿಂತೆಗತ್ತಿಸಿದ್ದು ಇದೇ ಮೊದಲು. - ರಾಧಾ ಮೋಹನ
"ನಮ್ಮಪ್ಪ ಸತ್ತ. ತಗಳಿ ನಿಮ್ ದುಡ್ಡು ತಗಳ" ಎಂದು ರಾತ್ರಿ ಕನವರಿಸುತ್ತಿದ್ದ ಗಂಡನನ್ನು ತಿವಿದು ಎಬ್ಬಿಸಿದ ಮಂಗ್ಟವ್ವ. "ಹೂ ನಿನ್ನ ಬಾಯಾಗ ಮಣ್ಣಾಕ, ಏನಾಗೆತೆ ನಿನೀಗೆ?" ಎಂದು ಉಗಿದು ಮಲಗಿದಳು. - ಹಲಗೆ ಬಡಿತ
“ಉಡ ಅಂದ್ರೆ ಅದ್ರಷ್ಟುಕ್ಕ ಅದೇ ಕಣ್ಣಿಗೆ ಬೀಳೇಕು, ಹುಡಿಕೆಂಡ್ ಹೋದ್ರೆ ಉಡ ಸಿಗಲ್ಲ" ಎಂಬ ತಾನು ಕಂಡುಕೊಂಡ ಸತ್ಯವನ್ನು ತನಗೆ ತಾನೇ ಹೇಳಿಕೊಂಡ ದುರುಗಪ್ಪ, - ಉಡ
ಕಿರಣ ಮಾತಾಡುವ ಮೊದಲೇ ಶೇಖರ, “ಯಾರಿಗೂ ಹೇಳ್ವಾಡಲೇ, ಇನ್ಮಾಲೆ ಹಿಂಗ ಮಾಡಲ್ಲ. ನಿನೀಗೆ ಹತ್ರುಪಾಯಿ ಕೊಡ್ತೀನಿ" ಎಂದ. ಕಿರಣ ಏನೂ ಮಾತಾಡಲಿಲ್ಲ. - ಗುಟ್ಟು
ಊರೆಂದರೆ ಬರೀ ನೆಲವಲ್ಲ, ಊರೆಂದರೆ ಮಂದಿ ಕೂಡ ಎಂಬುದು ಹನುಮಜ್ಜನಿಗೆ ಅರ್ಥವಾಗಿ ಕೆಂಪು ಬಸ್ಸು ಹತ್ತಿ ಬೆಂಗಳೂರನ್ನು ಸೇರಿಕೊಂಡ. - ಹನುಮಜ್ಜನ ಸಿನಿಮಾಕತೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.