Your cart is empty now.
'ದುಃಖ ಆರದ ನೆಲದಲ್ಲಿ' ಇದು ನಮ್ಮ ಸುಬ್ಬಣ್ಣ ಬರೆದ ಅನುಭವಗಳ ಗದ್ಯ ಬರಹ ಅಂದರೆ ಅದು ಆತ್ಮವಂಚನೆಯ ಮಾತಾಗುತ್ತದೆ. ಇಂಡಿಯಾದ ಸಾಮಾಜಿಕ ಸಾಂಸ್ಕೃತಿಕ ಪರಿಸ್ಥಿತಿ ಹೇಗಿದೆ ಅಂದರೆ: ಸ್ಟುಪಿಡ್ ಆದ ಜಡ ಮನಸ್ಸಿಗೆ ಸತ್ಯ ಗೊತ್ತಿದೆ. ಅದು ಸತ್ಯವನ್ನು ದಿನಾ ನೋಡುತ್ತಿದೆ. ಆದರೆ ಸುಳ್ಳನ್ನು ನಂಬುತ್ತದೆ. ಇದು ಚಾತುರ್ವಣ್ರ ನೀತಿಯಲ್ಲಿ ಮೇಲರಿಮೆಯ ಅಹಂಕಾರ ಮೂಲದ ಮನೋದೃಷ್ಟಿ. ಆದ್ದರಿಂದಲೇ ಈ ದೇಶದಲ್ಲಿ ಆರದ ಗಾಯದಂತೆ ಚಾತುರ್ವಣ್ರ ಇಂದಿಗೂ ಜೀವಂತವಾಗಿದೆ.
ಚಾತುರ್ವಣ್ರ ನೀತಿಯ ಮೂರ್ತ ಅಮೂರ್ತ ರೂಪದ ಕ್ರೌರ್ಯ ಹಿಂಸೆ ಶೋಷಣೆಗಳು ನಡೆಯುತ್ತಲೇ ಇವೆ. ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರಗಳಾಗಿ ಬೆತ್ತಲೆ ಥಳಿತಗಳಾಗಿ ಜೀವ ಬಲಿಗಳಾಗಿ ಮಕ್ಕಳ ಮೇಲಿನ ಕ್ರೂರ ಹಿಂಸೆ ಕ್ರೌರ್ಯಗಳಾಗಿ ಪುರುಷರ ಮೇಲಿನ ಅಟ್ರಾಸಿಟಿಗಳಾಗಿ ನಿತ್ಯ ಉರಿಯುವ ಸತ್ಯಘಟನೆಗಳಾಗಿವೆ. ಅಂಥ ಘಟನೆಗಳ ನೋವುಗಳಾಳದಲ್ಲಿ ಅದ್ದಿ ತೆಗೆದ ಅಕ್ಷರ ರೂಪದ ಅನುಭವ ಜಗತ್ತು ಈ ಬರಹ ಎಂದು ಹೇಳಿದರೆ ಅದು ಪೂರ್ಣ ಹೇಳಿದಂತಾಗುವುದಿಲ್ಲ. ಪೂರ್ಣತ್ವ ಇರುವುದು ಬದಲಾವಣೆಯಲ್ಲಿ. ಕ್ರಿಯೆ ಇಲ್ಲದ ಅರಿವು ಹೀನವಪ್ಪುದು. ಬದಲಾವಣೆಗೆ ಕಾರಣವಾಗದ 'ಶಿಕ್ಷಣ ಓದು' ಎರಡೂ ಸ್ಥಾವರ, ಜಡ. ಇಡೀ ಭಾರತೀಯ ಮನೋಲೋಕವನ್ನು ಬದಲಾವಣೆಗೆ ಒತ್ತಾಯಿಸುವ ನೋವಿನ ಬರಹ "ದುಃಖ ಆರದ ನೆಲದಲ್ಲಿ" ಮೂಡಿದ ನಮ್ಮ ಸುಬ್ಬುಹೊಲೆಯಾರ್ ಬರಹ. ಗದ್ಯಪದ್ಯಗಳ ಹಂಗು ಕಳಚಿದ ಅಂತಃಕರಣದ ಅನುಭಾವಿಕ ದನಿ.
-ಪ್ರೊ. ಎಸ್.ಜಿ.ಸಿದ್ಧರಾಮಯ್ಯ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.