Your cart is empty now.
ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು. ಇಲ್ಲಿನ ರೈತರ ಮತ್ತು ತಳಸಮುದಾಯದ ಅಜ್ಞಾನ, ಶೋಷಣೆ ಮತ್ತು ದಯನೀಯ ಬದುಕಿಗೆ ಬ್ರಿಟಿಷರಷ್ಟೇ ಅಲ್ಲ, ಸ್ಥಳೀಯ ಕುಲೀನರೂ ಕಾರಣವೆಂಬುದು ಅರಿವಿಗೆ ಬರುತ್ತಲೇ ಗಾಂಧೀಜಿಯವರ ಮನೋಭೂಮಿಕೆ ಬದಲಾಯಿತು. ಬ್ರಿಟಿಷ ರೊಂದಿಗೆ ಮುಖಾಮುಖಿ ಆಗಲೆಂದು ಬಂದ ಮಹಾತ್ಮನ ಆದ್ಯತೆಯೇ ಬದಲಾಯಿತು. ರಾಜಕೀಯ ಸ್ವಾತಂತ್ರ್ಯಕ್ಕೆ ಹೋರಾಡುವಷ್ಟೇ ತನ್ಮಯತೆ ಜನಸಾಮಾನ್ಯರನ್ನು ಅವರಿದ್ದ ಕತ್ತಲ ಕೂಪದಿಂದ ಮೇಲೆತ್ತಲಿಕ್ಕೂ ಬೇಕೆಂಬುದು ಅವರ ಅರಿವಿಗೆ ಬಂತು. ಅದು ಅವರ ಮುಂದಿನ ೩೦ ವರ್ಷಗಳ ನಡೆಯನ್ನು ರೂಪಿಸಿತು. ಅಂಥ ಹೊಸ ಗಾಂಧೀಜಿಯ ಉದಯಕ್ಕೆ ಕಾರಣವಾದ ಚಂಪಾರಣ್ಯ ಸತ್ಯಾಗ್ರಹದ ವಿಸ್ತ್ರತ ಚಿತ್ರಣವನ್ನು ಡಾ. ಎನ್. ಜಗದೀಶ ಕೊಪ್ಪ ಅವರು ಇಲ್ಲಿ ಬಿಡಿಸಿಟ್ಟಿದ್ದಾರೆ. ಈಗಾಗಲೇ ಗಾಂಧೀಜಿಯವರ ಬಗ್ಗೆ ಆರು ಕೃತಿಗಳನ್ನು ರಚಿಸಿದ ಇವರು ಈ ಕೃತಿಯ ಮೂಲಕ ಮಹಾತ್ಮನನ್ನು ನಮಗೆ ಇನ್ನಷ್ಟು ಹತ್ತಿರಕ್ಕೆ ತಂದಿದ್ದಾರೆ. ಗಾಂಧೀಜಿಯನ್ನು ಹೀಯಾಳಿಸುವವರನ್ನು 'ಮಾನಸಿಕ ಅಸ್ವಸ್ಥರು' ಎಂದು ಸಾತ್ವಿಕ ಕೋಪದಿಂದ ಹೀಗಳೆಯುತ್ತಲೇ ಲೇಖಕರು ನೀಲಿ ತೋಟದಲ್ಲಿ ಗಾಂಧೀಜಿಯೆಂಬ ಹೂ ಅರಳಿದ ಪರಿಯನ್ನು ಇಂದಿನ ಯುವ ಪೀಳಿಗೆಗೆ ತೋರಿಸಲು ತೋಳೇರಿಸಿದ್ದಾರೆ. ನಾಗೇಶ ಹೆಗಡೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.