Your cart is empty now.
ಜಾತಿಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡಾಗ ಸ್ವಂತಕುಲದಲ್ಲಿ ಮದುವೆಯಾಗುವಿಕೆ, ಇಲ್ಲವೇ ಬೇರೆ ಜಾತಿಯ ಮದುವೆಯ ಬಹಿಷ್ಕಾರ ಇವೆರಡೂ ಜಾತಿಯ ಏಕೈಕ ಸಾರವೆಂದು ಗೊತ್ತಾಗುತ್ತದೆ. ಆದರೆ ಕೆಲವರು ಅಮೂರ್ತವಾದ ಮಾನವಕುಲಶಾಸ್ತ್ರದ ಆಧಾರದಿಂದ ಇದನ್ನು ಒಪ್ಪದಿರಬಹುದು. ಕಾರಣವೆಂದರೆ, ಜಾತಿಯ ಸಮಸ್ಯೆಯೇ ಹುಟ್ಟಲು ಅವಕಾಶ ಕೊಡದಂತಹ ಸ್ವಂತಕುಲ ಮದುವೆಯಾಗುವ ಸಮೂಹಗಳಿವೆ. ಇದು ಪರಿಯಿದ್ದರೂ ಇರಬಹುದು. ವಾಸ್ತವ ಸಂಗತಿಯೆಂದರೆ. ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಿದ್ದು ಒಬ್ಬರಿಗೊಬ್ಬರಿಗೆ ವ್ಯವಹಾರಿಕವಾದ ಅಗತ್ಯವೂ ಇಲ್ಲದ, ಸಾಂಸ್ಕೃತಿಕವಾಗಿ ವೈವಿಧ್ಯಮಯವಾದ ಗುಣಲಕ್ಷಣಗಳಿರುವ, ಸ್ವಂತಕುಲ ಮದುವೆಗಳನ್ನು ನಡೆಸುವ ಸಮಾಜಗಳಿವೆ. ಸಂಯುಕ್ತ ಸಂಸ್ಥಾನಗಳಲ್ಲಿರುವ ನೀಗ್ರೂಗಳು, ಬಿಳಿಯರು ಮತ್ತು ಅಮೇರಿಕನ್ ಇಂಡಿಯನ್ಸ್ ಎಂಬ ಹೆಸರಿನಿಂದ ಕರೆಯಲಾಗುವ ವಿವಿಧ ಬುಡಕಟ್ಟು ಗುಂಪುಗಳ ದೃಷ್ಟಾಂತಗಳು ಈ ಹೇಳಿಕೆಗೆ ಬಲವಾದ ಸಾಕ್ಷಿಗಳಾಗಿ ನಿಲ್ಲುತ್ತವೆ. ಆದರೆ ಇಂಡಿಯಾದಲ್ಲಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆಯಾದ್ದರಿಂದ ನಾವು ಇಂಥ ವಿಷಯಗಳನ್ನು ಗೊಂದಲ ಮಾಡಿಕೊಳ್ಳಬಾರದು. ಈಗಾಗಲೇ ತಿಳಿಸಿರುವಂತೆ ಇಂಡಿಯಾದ ಜನರು ಒಟ್ಟಾರೆಯಾಗಿ ಒಂದೇ ಬಗೆಯವರು, ನಿಶ್ಚಿತವಾದ ವಲಯಗಳಿಗೆ ಹೊಂದಿಕೊಂಡಿರುವ ಭಾರತದ ಅನೇಕ ಜನಾಂಗಗಳು ಬಹುಮಟ್ಟಿಗೆ ಒಬ್ಬರೊಳಗೊಬ್ಬರು ಸೇರಿಹೋಗಿ, ಸಾಂಸ್ಕೃತಿಕ ಏಕರೂಪತೆಯನ್ನು ಹೊಂದಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.