Your cart is empty now.
ತನ್ನ ನಿಜವಾದ ಮುಖವನ್ನು ವ್ಯಕ್ತಿ ಎಂದೂ ಕಾಣಲಾರ. ಕಾಣುವ ಅಥವಾ ಕಾಣುತ್ತೇನೆಂದು ಭ್ರಮಿಸುವ ಹೊರಜಗತ್ತಾದರೂ ಎಷ್ಟೊಂದು ನಿಜ ಎನ್ನುವ ಪ್ರಶ್ನೆ ಏಳುತ್ತದೆ. ನೇರವಾಗಿ ನೋಡಿದಾಗ ನಮಗೆ ಎಲ್ಲವೂ ಚಪ್ಪಟೆಯಾಗಿ ತೋರುತ್ತವೆ. ಮೂರನೆಯ ಆಯಾಮ ಗೋಚರಿಸಬೇಕಾದರೆ ಕೋನದಲ್ಲಿ ನೋಡುವುದು ಅಗತ್ಯವಾಗುತ್ತದೆ. ಈ ಕವಿ ಅದನ್ನು ಮಾಡುತ್ತಾರೆ. ಆಗ ನೇರವನ್ನು ಮುರಿಯಬೇಕಾಗುತ್ತದೆ. ಇಲ್ಲೊಂದು ಪ್ರಕ್ಷೇಪವಿದೆ; ಪ್ರಕ್ಷೇಪ ವೆಂದರೆ ಕತೆಗೆ ಕಟ್ಟುಕತೆ ಸೇರಿಸುವುದು, ಇಂಟರ್ಪೊಲೇಶನ್, ಕತೆಯೇ ಕಟ್ಟುಕತೆಯಾಗಿರುತ್ತ ಅದಕ್ಕೆ ಸೇರಿಸುವುದನ್ನಷ್ಟೆ ಕಟ್ಟುಕತೆಯೆಂದಾಗ ಕತೆ ಆಥೆಂಟಿಕ್, ಕಟ್ಟುಕತೆ ಕಲ್ಪನೆ ಎಂಬ ಭ್ರಮೆ ಬರುತ್ತದೆ. ಇದು ಮುಖವನ್ನು ಕನ್ನಡಿಯೊಳಗಿನಿಂದ ನೋಡಿದ ಹಾಗೆ! ಅಥವಾ ಹಾಗೆ ಅಂದುಕೊಳ್ಳುವುದು, ಕಲ್ಪಿಸುವುದು. ಈ ಕವಿ ಇಂಥಾದ್ದನ್ನು ಕವಿತೆಗಳಲ್ಲಿ ಮಾಡುತ್ತಾರೆ. ಅವು 'ಕಟ್ಟುಕತೆ'ಗಳ ಒಂದು ಸೇತು ಇದ್ದ ಹಾಗೆ. ಒಂದರಿಂದ ಒಂದಕ್ಕೆ ನಾವು ಜಿಗಿಯಬೇಕು. ಎಲ್ಲೂ ಹೋಗುವುದಿಲ್ಲ ಎಲ್ಲೂ ವಿರಮಿಸುವುದಿಲ್ಲ. ಅರ್ಧಕ್ಕೆ ನಿಂತ ಸೇತುವಿನ ಹಾಗೆ. ಸೆಳವು ನೋಡುವುದಕ್ಕೆ ಮಾಡಿದ್ದು, ಅಥವಾ ನೆರೆಯಲ್ಲಿ ಸೆಳೆದುಕೊಂಡು ಹೋದ್ದು ಈ ನಿರುಪಾಯ' ಎಂಬ ಪದವನ್ನು ನಾನು ಶಶಿಯವರದೇ ಕವಿತೆಯೊಂದರಿಂದ ಎತ್ತಿಕೊಂಡದ್ದು.
ಕೆ. ವಿ. ತಿರುಮಲೇಶ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.