Your cart is empty now.
ಪ್ರಸ್ತುತ, ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರವು ಸಾಧಿಸಿರುವ ಎಲ್ಲಾ ಪ್ರಗತಿಯೊಂದಿಗೆ, ಇನ್ನೂ ಕೂಡ ಕಡಿಮೆ ಪರಿಶೋಧನೆ ಮತ್ತು ಕಡಿಮೆ ಆಧ್ಯತೆ ಪಡೆದಿರುವ ಭಾಗವೊಂದಿದೆ. ಅವೆಂದರೆ, ಅಂಗಗಳ ಆಂತರಿಕ ಕಾರ್ಯ ಚಟುವಟಿಕೆಗಳ ಸಮಗ್ರ ಒಳನೋಟ. ೨೧ ನೇ ಶತಮಾನದಲ್ಲಿ ಕೂಡ ನಮಗೆ ಸ್ಪಷ್ಟತೆ ಸಿಗದ ಈ ಅಂಶವನ್ನು ಅರ್ಥಮಾಡಿಕೊಳ್ಳಲು ಮನೋವಿಜ್ಞಾನವು ಪ್ರಯತ್ನಿಸುತ್ತಿದೆ. ವ್ಯಕ್ತಿಯ ಮನಸ್ಸಿನ ಅನೇಕ ಅಸ್ವಸ್ಥತೆಗಳು, ಅವನ ದೈನಂದಿನ ಚಟುವಟಿ-ಕೆಗಳಲ್ಲಿ ಹಸ್ತಕ್ಷೇಪ ಮಾಡಬಹುದು ಅಥವಾ ಹಸ್ತಕ್ಷೇಪ ಮಾಡದಿರಲೂ ಬಹುದು. ಇವು, ನಿರುಪದ್ರವ ಸ್ಥಿತಿಯಿಂದ ಆರಂಭಗೊಂಡು, ತೀವ್ರ ರೂಪ ಪಡೆಯಲೂ ಬಹುದು. ಅಲ್ಲದೆ, ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ವಿದ್ಯಮಾನವು, ಶಿಕ್ಷಣ ವ್ಯವಸ್ಥೆ ಅಥವಾ ಉದ್ಯೋಗ ಸ್ಥಳದ ಪರಿಸರದಿಂದ ಹಿಡಿದು, - ಮಾರ್ಕೆಟಿಂಗ್ ಅಥವಾ ದತ್ತಾಂಶ ಪ್ರಸ್ತುತಿಯವರೆಗೆ, ವ್ಯಕ್ತಿಯ ಜೀವನದ ಬಹುತೇಕ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ, ಪ್ರೊಫೆಸರ್ ಬಸವಣ್ಣ ಅವರು, ಮನೋವಿಜ್ಞಾನದ ಪರಿಕಲ್ಪನೆಯನ್ನು ಪರಿಚಯಿಸಿ, ತನ್ನ ಯೌವನ ಕಾಲದಲ್ಲಿಯೇ ಈ ವಿಷಯದ ಮೇಲೆ ಅಪಾರ ಪಾಂಡಿತ್ಯ ಸಾಧಿಸಿದವರು. ಪ್ರಸಕ್ತ, ಅಧ್ಯಾಪನ ವೃತ್ತಿಯಿಂದ ನಿವೃತ್ತರಾಗಿರುವ ಅವರು, ಭಾರತದಲ್ಲಿ ಮನೋವಿಜ್ಞಾನವನ್ನು ಹರಡಲು ತನ್ನ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನವು ಇಡೀ ಸಮಾಜಕ್ಕೆ ಲಭ್ಯವಾಗಲೆಂದು ಸ್ಥಳೀಯ ಭಾಷೆಯಲ್ಲಿ ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಕೇವಲ ಔಷಧಿಗಳನ್ನು ಬಳಸುವ ಮೂಲಕ ಮಾತ್ರ ಮಾನಸಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುತ್ತಿರುವ ವರ್ತಮಾನ ಕಾಲದ ಸ್ಥಿತಿಯನ್ನು ಅವರು ನಿಷ್ಠುರವಾಗಿ ವಿರೋಧಿಸುತ್ತಾರೆ. ಏಕೆಂದರೆ, ವ್ಯಕ್ತಿಯು ವಿಭಿನ್ನ ಕಾರಣಗಳಿಂದ ಸ್ವಾಧೀನಪಡಿಸಿಕೊಂಡ ಮಾನಸಿಕ ಅಸ್ವಸ್ಥತೆಯ ಮೂಲವನ್ನು, ಔಷಧಿ ಮಾತ್ರ ಪರಿಹರಿಸುವುದಿಲ್ಲ. ವೈದ್ಯರು, ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳದೆ. ರೋಗಲಕ್ಷಣಗಳನ್ನು ಹತ್ತಿಕ್ಕುವ ಸಲುವಾಗಿ ಔಷಧಿಗಳನ್ನು ಸೂಚಿಸುತ್ತಾರೆ. ಎನ್ನುವುದು ಅವರ ಅಭಿಪ್ರಾಯ. ಈ ನಿಟ್ಟಿನಲ್ಲಿ, ಅವರು ಹಲವಾರು ವರ್ಷಗಳಿಂದ ಮನೋವಿಜ್ಞಾನದ ತತ್ವಶಾಸ್ತ್ರ ಮತ್ತು ಈ ಕ್ಷೇತ್ರದಲ್ಲಿ ಮೂಲಾಧಾರ ಕೃತಿಗಳ ಬಗ್ಗೆ ಮಾಹಿತಿಯನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದರ ಮೂಲಕ ಸಾರ್ವಜನಿಕರಿಗೆ, ಮನಸ್ಸಿನ ಬಗ್ಗೆ ಸೂಕ್ತ ಮಾಹಿತಿ ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ, 'ಲೂಸಿಫರ್ ಎಫೆಕ್ಟ್'. 'ಈಡಿಪಸ್ ಕಾಂಪ್ಲೆಕ್ಸ್' ಮತ್ತು ಅವರ ಆತ್ಮಚರಿತ್ರೆಯೂ ಸೇರಿವೆ. ಇವು, ಮನಃಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತವೆ.
ಆರ್. ಸೂರ್ಯವಂಶಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.