Your cart is empty now.
ಕರ್ನಾಟಕದ ಶೌರ್ಯದ ಅಸ್ಮಿತೆಯಾಗಿರುವ ಕಿತ್ತೂರು ಚನ್ನಮ್ಮಳ ಇತಿಹಾಸವು ತೀರ ಹತ್ತಿರವಾಗಿದ್ದರೂ ಅದು ಅನೇಕ ನಿಗೂಢತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಚನ್ನಮ್ಮಳ ಅಥವಾ ಕಿತ್ತೂರು ಇತಿಹಾಸದ ಅನೇಕ ಮಹತ್ವದ ಪುಟಗಳು ಕಳೆದು ಹೋಗಿವೆ ಅಥವಾ ಆ ಕಾಲದ ಘಟನಾವಳಿಗಳ ಬಗ್ಗೆ ಇತಿಹಾಸವು, ಮೌನ ತಾಳಿದೆ. ರಾಣಿ ಚನ್ನಮ್ಮ ಮತ್ತು ಕಿತ್ತೂರಿನ ಇತಿಹಾಸದ ಬಗ್ಗೆ ತಳಮಟ್ಟದ ಅಧ್ಯಯನವನ್ನು ಕೈಕೊಂಡ ಡಾ. ಸರಜೂ ಕಾಟ್ಕರ್ರವರ ಸಿದ್ಧ ಲೇಖನಿಯಿಂದ 'ವೀರರಾಣಿ ಕಿತ್ತೂರು ಚೆನ್ನಮ್ಮ The brave and valiant Queen of Kitturu' ಕೃತಿಯು ರೂಪುಗೊಂಡಿದೆ. ಇಲ್ಲಿ ವಿವರಿಸಲಾಗಿರುವ ಅನೇಕ ಘಟನೆಗಳು ಮತ್ತು ಸಂಗತಿಗಳು ಈ ಹಿಂದೆ ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಡಾ. ಸರಜೂ ಕಾಟ್ಕರ್ರವರ ಅಧ್ಯಯನ ಅನೇಕ ಸಂಶೋಧನೆಗಳಿಗೆ ದಾರಿ ಮಾಡಿ ಕೊಡುವಂತಿದೆ. ಚನ್ನಮ್ಮ ವೀರಳಾಗಿದ್ದಳು; ಶೂರಳಾಗಿದ್ದಳು; ಸ್ವಾಭಿಮಾನಿ ಯಾಗಿದ್ದಳು. ಇಂಗ್ಲಿಷರು ಹಾಕಿದ ಕರಾರುಗಳಿಗೆ ಒಪ್ಪಿ ಕೊಂಡಿದ್ದರೆ ಕಿತ್ತೂರಿನ ರಾಣಿಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ಅವಳು ಓಲಾಡಬಹುದಾಗಿತ್ತು. ಆದರೆ ಆಕೆ ಸ್ವಾಭಿಮಾನದ ಹಾದಿಯನ್ನು ಆಯ್ಕೆ ಮಾಡಿಕೊಂಡು ಕನ್ನಡಿಗರ ವೀರತೆ ಯನ್ನು ಜಗತ್ತಿಗೆ ತೋರಿಸಿಕೊಟ್ಟಳು. ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿರುವಂತೆ ರಾಣಿ ಚನ್ನಮ್ಮಳು ಕರ್ನಾಟಕದ ಶೌರ್ಯದ ಅಸ್ಮಿತೆಯಾಗಿದ್ದಾಳೆ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.