Your cart is empty now.
ಇಮ್ಮಡಿ ಪುಲಕೇಶಿ,
ಅವನು ಈ ಭೂಭಾಗ ಕಂಡ ಅಪ್ರತಿಮ ಯುದ್ಧಾಳು. ನೌಕಾ ಸೇನೆಯನ್ನು ಯಶಸ್ವಿಯಾಗಿ ಮುನ್ನೆಡೆಸಿ ವಿದೇಶಿ ಆಕ್ರಮಣವನ್ನು ಗೆದ್ದ ಹಿರಿಮೆ ಅವನದು. ವಿದೇಶಿ ಯಾತ್ರಾರ್ಥಿಗಳು ಮತ್ತು ಸಾಮ್ರಾಟರ ದೂತರು ಅವನ ಸ್ನೇಹಕ್ಕಾಗಿ ಆಗಮಿಸಿದ್ದರು. ಸಂಪೂರ್ಣ ದಕ್ಷಿಣವನ್ನೆಲ್ಲ ಗೆದ್ದ ಮತ್ತು ದಕ್ಷಿಣಾ ಪಥೇಶ್ವರನೆಂದು ಬಿರುದಾಂಕಿತನಾದ ಮೊಟ್ಟ ಮೊದಲ ಮತ್ತು ಕೊನೆಯ ಮಹಾ ಸೇನಾನಿ ಅವನು. ಅವನು ಗೆದ್ದ ಯುದ್ಧಗಳು ಕೇವಲ ರಣಾಂಗಣ ಸಾಹಸವಲ್ಲ ದಾಖಲಿಸಬಲ್ಲ ಚರಿತ್ರೆಯಾಗಬೇಕಾದ ಅತಿ ದೊಡ್ಡ ದಂಡಯಾತ್ರೆಗಳು, ಪೂರ್ತಿ ಭರತ ಖಂಡದಲ್ಲಿ ಅವನಂಥ ಅಪ್ರತಿಮ ನೇರ ಯುದ್ಧರಂಗಕ್ಕಿಳಿದು ಗೆಲ್ಲುತ್ತಿದ್ದ ಸೇನಾನಿ ಬರಲೇ ಇಲ್ಲ. ಅಖಂಡ ಎರಡು ದಶಕಗಳ ಕಾಲ ಸಂಪೂರ್ಣ ದಕ್ಷಿಣ ಭಾರತವನ್ನಾಳಿದ್ದಲ್ಲದೇ ಜಗತ್ತಿನ ಮೊದಲ ಐದು ಮಹಾಯುದ್ಧದಲ್ಲಿ ಒಂದಾದ ರೇವಾ ನದಿ ತೀರದ ಯುದ್ಧವನ್ನೂ ಗೆದ್ದ ದಾಖಲೆ ಅವನೊಬ್ಬನದ್ದೇ. ಶಿಲ್ಪ ಕಲೆ, ಲಲಿತಕಲೆ ಮತ್ತು ಗುರುಕುಲಗಳಿಗೆ ನ್ಯಾಯ ಒದಗಿಸಿದ, ಎದುರಾಳಿಗಳೇ ಇಲ್ಲದಂತೆ ಜನಾನುರಾಗಿ ಆಡಳಿತ ನಡೆಸಿದ ಅವನಿಗೆ ಮುಳುವಾಗಿದ್ದು ಅವನ ಒಳ್ಳೆಯತನಗಳೆ.
ಅವನೇ ಚಾಲುಕ್ಯರ ಅಪ್ರತಿಮ ಸೇನಾನಿ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.