ಭಾರತದ ಅರ್ಥವ್ಯವಸ್ಥೆಯ ಅಸಮಾನತೆಯ ವಿರಾಟ್ ಸ್ವರೂಪ ತಿಳಿದುಕೊಳ್ಳಬೇಕೆ?
ನವ ಉದಾರವಾದ ಪ್ರತಿಪಾದಿಸಿದ್ದು ಏನು? ಅದು ಅಸಮಾನತೆಯ ಹಳ್ಳವನ್ನು ದೊಡ್ಡ ಕಣಿವೆ ಮಾಡಿದ್ದು ಹೇಗೆ?
ಆರ್ಥಿಕ ವ್ಯವಸ್ಥೆ ರೂಪಿಸುವುದರಲ್ಲಿ ಸರ್ಕಾರದ ಪಾತ್ರ ಏನು?
ಹೀಗೆ
ಐದು ಹತ್ತು ಟ್ರಿಲಿಯನ್ ಡಾಲರ್ ಎಕಾನಮಿ ಎಂದು ಕೊಚ್ಚಿಕೊಳ್ಳುವ ಈ ದಿನಗಳಲ್ಲಿ, ಅದು ಯಾರ ಹಿತವನ್ನು ಕಾಯುತ್ತಿದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳಬೇಕಲ್ಲವೇ?
ಬನ್ನಿ, ಚಂದ್ರ ಪೂಜಾರಿ ಅವರ ಈ ಕಿರುಹೊತ್ತಿಗೆಯನ್ನು ಓದಿ ಮತ್ತು ಓದಿಸಿ.. ಹೌದು ಇದನ್ನು ಗೆಳೆಯ ಗೆಳತಿಯರಿಗೆ, ಸ್ಟೂಡೆಂಟ್ಸ್ ಗೆ ಹೆಚ್ಚೆಚ್ಚು ಓದಿಸುವುದು ಮುಖ್ಯ. ಜಗತ್ತಿನ ಹಲವೆಡೆಗಳಲ್ಲಿ ಆರ್ಥಿಕ ಅಸಮಾನತೆ ಚುನಾವಣಾ ವಿಷಯವಾಗಿದೆ. ಆದರೆ ಭಾರತದಲ್ಲಿ?? ಯಾವ ಪಕ್ಷಗಳೂ ಅದರ ಬಗ್ಗೆ ಕಾಳಜಿಯುತವಾಗಿ ಮಾತಾಡುತ್ತಿಲ್ಲ...
ಅಸಮಾನತೆಯ ಆಯಾಮಗಳು ಸಾಮಾನ್ಯರ ಮಾತು ತಿಳಿವಳಿಕೆ ಮತ್ತು ಚಿಂತನೆಯ ಭಾಗ ಆಗಬೇಕಿರುವುದು ಇಂದಿನ ತುರ್ತು ಅಗತ್ಯ.. ಈ ನಿಟ್ಟಿನಲ್ಲಿ ಚಂದ್ರ ಪೂಜಾರಿ ಅವರು ಬರೆದಿರುವ 'ಟ್ರಿಲಿಯನ್ ಡಾಲರ್ ಎಕಾನಮಿಯ ಒಳಹೊರಗೆ - ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ' ಒಂದು ಚಿಮ್ಮು ಹಲಗೆಯಾಗಬಲ್ಲದು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.