ಹಿರಿಯರ ಉದ್ದೇಶಗಳು, ಆಲೋಚನೆಗಳು ಮತ್ತು ಕಾರ್ಯಗಳು ಮಕ್ಕಳ ಹೃದಯಗಳಿಂದ ಸೆರೆಹಿಡಿಯಲ್ಪಡುತ್ತವೆ. ಮಕ್ಕಳು ಬೋಧನೆಗಳನ್ನು ತ್ವರಿತವಾಗಿ ಮತ್ತು ನಿಷ್ಠೆಯಿಂದ ಗಮನಿಸುತ್ತಾರೆ, ಕಲಿಯುತ್ತಾರೆ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಹಾಗೆಯೇ, ಹಿರಿಯರಿಗೆ ಮಕ್ಕಳನ್ನು ಚೆನ್ನಾಗಿ ಬೆಳೆಸುವುದು ಮಾತ್ರವಲ್ಲದೆ, ಅವರು ಸಂತೃಪ್ತ ಜೀವನವನ್ನು ನಡೆಸುವ ರೀತಿಯಲ್ಲಿ ಅವರನ್ನು ಪೋಷಿಸುವ ಮತ್ತು ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ದ ವಿಜ್ಡಮ್ ಬ್ರಿಜ್ನಲ್ಲಿ ದಾಜಿಯವರು ನಿಮಗೆ ಹಾಗು ಓದುಗರಿಗೆ, ನಿಮ್ಮ ಮಕ್ಕಳು ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸ್ಫೂರ್ತಿ ನೀಡುವ ಜೀವನವನ್ನು ನಡೆಸುವ ಸಲುವಾಗಿ ಮಾರ್ಗದರ್ಶನ ನೀಡಲು ಒಂಬತ್ತು ನಿಯಮಗಳನ್ನು ನೀಡುತ್ತಾರೆ. ಈ ನಿಯಮಗಳು ತಾಯ್ತಂದೆಯರು, ಭಾವೀ ತಾಯ್ತಂದೆಯರು, ಅಜ್ಜ-ಅಜ್ಜಿಯರು ಮತ್ತು ಆರೈಕೆದಾರರಿಗೆ ತೃಪ್ತಿದಾಯಕ ಹಾಗು ಸಂತೋಷದ ಜೀವನವನ್ನು ರಚಿಸಲು ಪ್ರಮುಖ ಮಾರ್ಗದರ್ಶಕಗಳಾಗಿವೆ. ಈ ನಿಯಮಗಳು ನಿಮ್ಮ ಮಕ್ಕಳ ಜೀವನವನ್ನು ಸಮೃದ್ಧಗೊಳಿಸಲು ಮತ್ತು ಜವಾಬ್ದಾರಿಯುತ ಹದಿಹರೆಯದವರನ್ನು ಬೆಳೆಸಲು ನಿಮಗೆ ನೆರವಾಗುವುದಲ್ಲದೆ, ನಿಮ್ಮ ಕುಟುಂಬದಲ್ಲಿ ಸ್ಫೂರ್ತಿದಾಯಕ ಜೀವನವನ್ನು ನಡೆಸಲು ಮತ್ತು ಚೇತರಿಕೆಯ ಸಂಬಂಧಗಳನ್ನು ಹೊಂದಲು ದಾರಿ ಮಾಡಿಕೊಡುತ್ತವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.