Your cart is empty now.
100ಕ್ಕೂ ಹೆಚ್ಚು ಪುಸ್ತಕಗಳ ಜನಪ್ರಿಯ ಲೇಖಕ, ಅಂಕಣಕಾರ, ನಿವೃತ್ತ ಡಿ.ಜಿ.ಪಿ ಡಾ. ಡಿ.ವಿ.ಗುರುಪ್ರಸಾದ್ ಕಳೆದ ಎಂಟು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗುವ ಅಭ್ಯರ್ಥಿಗಳಿಗೆ ವೈಯಕ್ತಿಕ ಮಾರ್ಗದರ್ಶನವನ್ನು ಮಾಡುತ್ತಾ ಬಂದಿದ್ದು, 'ಬಿ.ಎಸ್.ಸಿ ಫೇಲ್, ಐಪಿಎಸ್ ಪಾಸ್', 'ಯು.ಪಿ.ಎಸ್.ಸಿ ಸಂದರ್ಶನಗಳನ್ನು ಎದುರಿಸುವುದು ಹೇಗೆ?' 'ನೀವೊಮ್ಮೆ ಫೇಲ್ ಆಗಲೇಬೇಕು' ಮುಂತಾದ ಜನಪ್ರಿಯ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಮಾರ್ಗದರ್ಶನವನ್ನು ಪಡೆದಿರುವ 50ಕ್ಕೂ ಹೆಚ್ಚು ಜನರು ಐ.ಎ.ಎಸ್, ಐ.ಪಿ.ಎಸ್. ಹಾಗೂ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿಗಳಾಗಿದ್ದಾರೆ. 'ವಿಜಯ ಕರ್ನಾಟಕ' ಪತ್ರಿಕೆಯ ವಿ.ಕ ಮಿನಿ ಪುರವಣಿಯಲ್ಲಿ ಅವರು ಬರೆಯುತ್ತಿರುವ 'ಟಾರ್ಗೆಟ್ ವಿಜಯ' ಅಂಕಣ ಭಾರೀ ಜನಪ್ರಿಯತೆ ಗಳಿಸಿದ್ದು ಈ ಪುಸ್ತಕವು ಇದೇ ಅಂಕಣ ಲೇಖನಗಳ ಸಂಕಲನವಾಗಿದೆ. ಇದರಲ್ಲಿ ಎರಡು ಭಾಗಗಳಿದ್ದು ಮೊದಲನೆಯ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸುವ ಟಿಪ್ಸ್ ಗಳಿದ್ದು ಎರಡನೆಯ ಭಾಗದಲ್ಲಿ 'ಪ್ರಶೋತ್ತರಗಳಿವೆ. ಪ್ರತಿಯೊಬ್ಬ ಯುವಕ ಯುವತಿಯರಿಗೂ ಇದೊಂದು ಮಾರ್ಗದರ್ಶಕ ಕೈಪಿಡಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.