Free Shipping Charge on Orders above ₹300

Shop Now

Tamilunadinalli Mahatma Sale -15%
Rs. 935.00Rs. 1,100.00
Vendor: BEETLE BOOK SHOP
Type: PRINTED BOOKS
Availability: 10 left in stock

ತಮಿಳುನಾಡಿನಲ್ಲಿ
ಮಹಾತ್ಮ
ಮೂಲ: ಎ ರಾಮಸಾಮಿ
ಅನುವಾದ: ಸಿರಿಮನೆ ನಾಗರಾಜ್ ಮತ್ತು ಎಂ.ಎಸ್ ಪ್ರಕಾಶ್

ತಮ್ಮ ವಕೀಲಿ ವೃತ್ತಿಯ ಕೆಲಸಕ್ಕಾಗಿ 1893ರ ಮೇ ತಿಂಗಳ 24ರಂದು ದಕ್ಷಿಣ ಆಫ್ರಿಕಾಗೆ ಬಂದ ಗಾಂಧೀಜಿ ಮುಂದೆ 19 ಜುಲೈ 1914ರ ವರೆಗೆ, 21 ವರ್ಷಗಳಷ್ಟು ಧೀರ್ಘಕಾಲ, ಅಲ್ಲೇ ಇರಬೇಕಾಯಿತು. ಅಲ್ಲಿ ಅವರು ಕಂಡ ಮತ್ತು ಅನುಭವಿಸಿದ ಘಟನೆಗಳು ಅವರ ಜೀವನ ದೃಷ್ಟಿ, ರಾಜಕೀಯ ಹೋರಾಟ ಮತ್ತು ಸತ್ಯಾನ್ವೇಷಣೆಯ ಮಾರ್ಗಗಳನ್ನು ಬೆಳೆಸಿಕೊಳ್ಳಲು ನೆರವಾಯಿತು. ಇವೆಲ್ಲದರ ಒಟ್ಟಾರೆ ಫಲವೇ ಭಾರತದಲ್ಲಿ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಸ್ವಾತಂತ್ರ್ಯ ಸಂಗ್ರಾಮ.

ದಕ್ಷಿಣ ಆಫ್ರಿಕಾದಲ್ಲಿ ಅವರು ನಡೆಸಿದ ಹೋರಾಟದಲ್ಲಿ ಅವರ ಜತೆ ಇದ್ದವರಲ್ಲಿ ತಮಿಳರ ಪಾತ್ರ ದೊಡ್ಡದು. ತಮಿಳರ ಜತೆಗಿನ ಒಡನಾಟ ಮತ್ತು ತಮಿಳುನಾಡಿನಲ್ಲಿ ಗಾಂಧೀಜಿ ಮಾಡಿದ ಪ್ರವಾಸಗಳನ್ನು ಅದರ ಎಲ್ಲ ವಿವರಗಳೊಂದಿಗೆ ಈ ಪುಸ್ತಕ ದಾಖಲಿಸುತ್ತದೆ. ಅಲ್ಲಿ ಗಾಂಧೀಜಿ ಇಟ್ಟ ಪ್ರತಿ ಹೆಜ್ಜೆ, ಕಳೆದ ಪ್ರತಿ ಘಳಿಗೆಯನ್ನೂ ಬಿಟ್ಟೂ ಬಿಡದಂತೆ ಲೇಖಕ ಎ.ರಾಮಸ್ವಾಮಿ ಇಲ್ಲಿ ತೆರೆದಿಟ್ಟಿದ್ದಾರೆ. ಆ ಮೂಲಕ ತಮಿಳು ಜನರ ಮೇಲೆ ಗಾಂಧೀಜಿಯ ಪ್ರಭಾವ ಮತ್ತು ಅವರ ಜತೆ ಗಾಂಧೀಜಿ ಬೆಳೆಸಿಕೊಂಡ ಸ್ನೇಹ, ಕಳೆದ ಕ್ಷಣಗಳು ಈ ಕೃತಿಯ ಪ್ರತಿ ಪುಟದಲ್ಲೂ ವ್ಯಕ್ತವಾಗುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ದಕ್ಷಿಣ ಭಾರತದ, ಅದರಲ್ಲೂ ತಮಿಳರ, ಕೊಡುಗೆಯನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕ ಒಂದು ಅಮೂಲ್ಯ ದಾಖಲೆ. ಹೀಗಾಗಿ ಇತಿಹಾಸದಲ್ಲಿ ಕುತೂಹಲ ಇರುವ ಸಾಮಾನ್ಯ ಜನರಿಂದ ಹಿಡಿದು, ಸ್ವಾತಂತ್ರ್ಯ ಸಂಗ್ರಾಮವನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು, ಬಯಸುವವರಿಗೆ
ಇದೊಂದು ಅಮೂಲ್ಯ ಸಂಗ್ರಹ.

Guaranteed safe checkout

Tamilunadinalli Mahatma
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading