Free Shipping Above ₹500 | COD available

Streevadi Sahitya Vimarshe Mattu Kannada Sahitya Sandharbha Sale -20%
Rs. 239.00Rs. 299.00
Vendor: BEETLE BOOK SHOP
Type: PRINTED BOOKS
Availability: 97 left in stock

ಸ್ತ್ರೀವಾದವು ವ್ಯವಸ್ಥೆಯನ್ನು ಎದುರಿಸಿ ನಿಲ್ಲಬೇಕೆಂದರೆ ತನ್ನದೇ ಆದ ರಾಜಕಾರಣವನ್ನು ರೂಪಿಸಿಕೊಳ್ಳುವುದು ಅಗತ್ಯವೇ ಆಗುತ್ತದೆ. ಇದರ ಪೂರ್ವಭಾವೀ ಸಿದ್ಧತೆಯಾಗಿ ಅದು, ಪಿತೃಪ್ರಧಾನತೆಯ ಕಾರ್ಯಾಚರಣೆಯನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ಎಲ್ಲ ಎಳೆಗಳಲ್ಲೂ, ಅದು ನಡೆಸುವ ಲೈಂಗಿಕತಾ ರಾಜಕಾರಣದ ಕುರುಹುಗಳನ್ನು ಗುರುತಿಸಬಹುದು ಎಂಬುದು ಸ್ತ್ರೀವಾದವು ಮಂಡಿಸುವ ಒಂದು ಮುಖ್ಯ ಪ್ರಮೇಯ. ವಿವಿಧ ಜ್ಞಾನವಲಯಗಳು, ಸಾಹಿತ್ಯ ಮತ್ತು ಕಲೆ, ಕ್ರೀಡೆಯೇ ಮೊದಲಾಗಿ ಮನರಂಜನೆಯ ಹಲವು ಚಟುವಟಿಕೆಗಳು, ಮತ್ತು ಸಮೂಹ ಮಾಧ್ಯಮಗಳು ಇವೆಲ್ಲದರಲ್ಲೂ ಈ ಕುರುಹುಗಳನ್ನು ಕಾಣಬಹುದು.

     ಸ್ತ್ರೀವಾದವು ತನ್ನ ಇಂಥಾ ಒಂದು ಶೋಧಕ್ಕೆ ಒದಗುವ ಒಂದು ಆಕರವಾಗಿ ಸಾಹಿತ್ಯದ ಅಧ್ಯಯನಕ್ಕೆ ತೊಡಗುತ್ತದೆ. ಹಾಗಾಗಿ ಸ್ತ್ರೀವಾದೀ ಸಾಹಿತ್ಯ ವಿಮರ್ಶೆ ಎಂಬುದು ನೇರವಾಗಿ ಸಾಹಿತ್ಯವನ್ನು ಕುರಿತ ಚರ್ಚೆಯೇ ಆಗಿರುವುದಿಲ್ಲ. ಬದಲಿಗೆ ಈ ವ್ಯವಸ್ಥೆಯ ಉತ್ಪನ್ನವೇ ಆದ ಸಾಹಿತ್ಯ ಪಠ್ಯವು ಪಿತೃಪ್ರಧಾನ ಚಿಂತನೆ ಮತ್ತು ಆಶಯಗಳನ್ನು ಸಮರ್ಥಿಸಿ ಸ್ಥಿರೀಕರಿಸುತ್ತದೆ ಎಂಬ ವಾಸ್ತವವನ್ನು ಬಹಿರಂಗ ಪಡಿಸುವ ಒಂದು ಶೈಕ್ಷಣಿಕ ಚಟುವಟಿಕೆ ಆಗುತ್ತದೆ. ಸ್ತ್ರೀವಾದೀ ಚಿಂತನೆಗಳಿಗೆ ಸಾಹಿತ್ಯ ಪಠ್ಯಗಳು, ಸಾಕ್ಷಿಗಳಾಗಿ ನಿಲ್ಲುತ್ತವೆ.

     ಇಂಥಾ ಸಾಕ್ಷಿಗಳನ್ನು ಶೋಧಿಸಲು ಸ್ತ್ರೀವಾದೀ ಸಾಹಿತ್ಯ ವಿಮರ್ಶೆಯು, ಸಾಂಪ್ರದಾಯಿಕ ಸಾಹಿತ್ಯ ವಿಮರ್ಶೆಯ ಹಾದಿಗಿಂತಲೂ ಭಿನ್ನವಾದ ತಾತ್ವಿಕತೆಯನ್ನು ರೂಪಿಸಿಕೊಳ್ಳುತ್ತಿದೆ. ಈ ತಾತ್ವಿಕತೆಯು ಒಂದೇ ಹಂತದಲ್ಲಿ ಸಿದ್ಧಗೊಳ್ಳಲಿಲ್ಲ. ಈ ತಾತ್ವಿಕತೆಯ ಚಾರಿತ್ರಿಕ ಬೆಳವಣಿಗೆಯನ್ನು ಗಮನಿಸುವ ಅಗತ್ಯವಿದೆ. ಏಕೆಂದರೆ, ಅದು ಕಾಲಾನುಕ್ರಮದಲ್ಲಿ ಮತ್ತೆ ಮತ್ತೆ ಪರಿಷ್ಕರಣೆಗೆ ಒಳಗಾಗುತ್ತಾ, ವ್ಯವಸ್ಥೆಯಲ್ಲಿನ ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವ ಹಾದಿಯನ್ನು ಕಂಡುಕೊಳ್ಳುತ್ತಿದೆ. ಈ ಹಾದಿಯಲ್ಲಿ ಅದು ಕ್ರಮೇಣವಾಗಿ ವಿಕಾಸಗೊಳ್ಳುತ್ತಾ ಇಂದಿಗೆ ಸಾಕಷ್ಟು ಸಮಗ್ರವಾಗಿ ಬೆಳೆದು ನಿಂತಿದೆ. ಪಿತೃಪ್ರಧಾನ ಸಮಾಜದಲ್ಲಿನ ಲೈಂಗಿಕತಾ ರಾಜಕಾರಣದ ಸ್ವರೂಪವನ್ನು ಗ್ರಹಿಸುವಲ್ಲಿನ ಒಂದು ಉಪಯುಕ್ತ ಸಾಧನವಾಗಿ ಒದಗುವ ಸಾಮರ್ಥ್ಯದ್ದಾಗಿದೆ.

Guaranteed safe checkout

Streevadi Sahitya Vimarshe Mattu Kannada Sahitya Sandharbha
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.