Your cart is empty now.
ಬದುಕಿನ ಪ್ರತಿ ಕ್ಷಣವೂ ಸಿಹಿಯಾಗಿಯೇ ಇರುವುದಿಲ್ಲ. ಆದರೆ ಕಹಿಯಲ್ಲೂ ಸಿಹಿಯನ್ನು ಹುಡುಕುವುದರಲ್ಲೇ ಜೀವವೂ, ಜೀವನವೂ ಅಡಗಿದೆ. ಪ್ರತಿ ಸೂರ್ಯೋದಯಕ್ಕೂ ಹೊಸ ಬದುಕಿನ ಉದಯವಾಗುತ್ತದೆ. ಆ ಒಂದು ದಿನದ ಪ್ರತಿ ಕ್ಷಣವನ್ನು ನವೋಲ್ಲಾಸದಿಂದ ಕಳೆಯಬೇಕು ಅಂದರೆ ಸೂರ್ತಿ ಎಲ್ಲಿಂದ ಬರುತ್ತದೆ? ಯಾರು ಚೈತನ್ಯ ಕೊಡುತ್ತಾರೆ ಅಂತೆಲ್ಲ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗೆ ಇರುವ ಧನಾತ್ಮಕ ಶಕ್ತಿಯನ್ನು ಪ್ರಚೋದಿಸಿಕೊಳ್ಳಬೇಕಷ್ಟೆ. ಸಣ್ಣ ಸಣ್ಣ ಸಂಭ್ರಮವೇ ಇಡೀ ದಿನವನ್ನು ನಿರಾಳವಾಗಿಸುತ್ತದೆ. ಮುಂಜಾವಿಗೆ ಅರಳಿದ ಹೂವಿನಲ್ಲೋ, ಪಕ್ಷಿಯ ಕೂಗಿನಲ್ಲೋ ಅಥವಾ ಇನ್ಯಾರದ್ದೋ ಮಾತು, ನಗುವಿಗೂ ನಿಮ್ಮನ್ನು ಖುಷಿಯಾಗಿ ಇಡುವ ಶಕ್ತಿ ಇದೆ ಅಂತಾದರೆ ಎದುರಾಗುವ ಯಾವ ಕ್ಷಣವನ್ನು ನಿರ್ಲಕ್ಷಿಸಬೇಡಿ, ಆಸ್ವಾದಿಸಿ ಎನ್ನುತ್ತವೆ ಹಲವರ ಬದುಕಿನಲ್ಲಿ ನಡೆದು ಹೋದ ದುರಂತ, ಯಾರದ್ದೋ ಹೋರಾಟ, ಮತ್ತೆಮತ್ತೆ ಸೋತು ಗೆದ್ದವರ ಈ ಕಥೆಗಳು.
'ಬರೆದು ಬದುಕು ಬದಲಿಸಿ' ಶೀರ್ಷಿಕೆಯಡಿ ವಿಜಯ ಕರ್ನಾಟಕ - ಸ್ನೇಹ ಬುಕ್ ಹೌಸ್ ಆಯೋಜಿಸಿದ್ದ ಯುಗಾದಿ ಲೇಖನ ಸ್ಪರ್ಧೆಗೆ ಬಂದ ಲೇಖನಗಳಲ್ಲಿ ಆಯ್ದ 25 ಲೇಖನಗಳ ಈ ಸಂಕಲನ ಓದಿದಾಕ್ಷಣ ನಿಮ್ಮ ಮನವೂ ಸಕಾರಾತ್ಮಕ ಭಾವದಿಂದ ಹೊಳಪುಗೊಳ್ಳದಿದ್ದರೆ ಹೇಳಿ...
-ಜಯಶ್ರೀ ಕಾಸರವಳ್ಳಿ,
-ಡಾ.ಭರತ್ ಚಂದ್ರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.