Your cart is empty now.
ಬ್ರಾಹ್ಮಣರ ನಡುವೆ ಗುರುಹಿರಿಯರ ಕಣ್ಮಣಿಯಾಗಿ ಬೆಳೆದ ಹುಡುಗ ಅಷ್ಟೆಲ್ಲ ಪ್ರೀತಿ, ಗಮನ, ಸವಲತ್ತುಗಳ ನಡುವೆಯೂ ತಾನೇಕೆ ಒಂಟಿ ಅನ್ನುವ ಹುಡುಕಾಟಕ್ಕೆ ಬೀಳುತ್ತಾನೆ. ಅಷ್ಟೆಲ್ಲ ವೇದ ಪಠಣ, ಹೋಮ ಹವನ, ಜಪ ತಪಗಳ ನಂತರವೂ ತನ್ನಲ್ಲಿ ಸಂತಸದ ಒರತೆ ಯಾಕೆ ಚಿಮ್ಮುತ್ತಿಲ್ಲ ಅನ್ನುವ ಪ್ರಶ್ನೆ ಅವನದ್ದು.
ಈ ಹುಡುಕಾಟದ, ಈ ಪ್ರಶ್ನೆಯ ಜಾಡು ಹಿಡಿದು
ಹೊರಟವನಿಗೆ ಗೋವಿಂದ ಜೊತೆಯಾಗುವನು. ಇಬ್ಬರೂ ಸಮಣರ ಕರ್ಮಠ ಸಾಧನೆ ನಡೆಸಿ, ಅದರಲ್ಲಿ ಸ್ವಾರಸ್ಯ ಕಾಣದೆ ಹಾದಿ ಬದಸಿಸುತ್ತಾರೆ. ಗೋವಿಂದ
ಬುದ್ಧನಲ್ಲೇ ತನ್ನ ಗುರಿ ಕಂಡುಕೊಂಡರೆ, ಸಿದ್ಧಾರ್ಥ ಬುದ್ಧನ ಕಾಣ್ಣಿ ನನ್ನದಾಗಲು ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಹೊತ್ತು ಮುಂದೆ ಸಾಗುತ್ತಾನೆ.
ಬುದ್ಧನನ್ನು ಬಿಟ್ಟು ಹೊರಡುವ ಸಿದ್ಧಾರ್ಥ ಸೇರುವುದು ಕಮಲಾ ಎಂಬ ವೇಶ್ಯೆಯ ತೋಳುಗಳನ್ನು, ಕಾಮಸ್ವಾಮಿ ಎಂಬ ವರ್ತಕನ ಬಳಿ ಅವನ
ಮುಂದಿನ ಬದುಕು, ಕಲಿಕೆ. ಅವೆಲ್ಲ ಸಾಕಾಗಿ ಹೊರಟವನು ಅಂಬಿಗನ ಗುಡಿಸಲು ಸೇರುತ್ತಾನೆ. ಅಂಬಿಗನ ಸಂಗಡ, ಹೊಳೆ ನೀಡುವ ಹೊಳಹುಗಳಲ್ಲಿ
ಬದುಕು ಕಲಿಯುತ್ತಾನೆ. ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾನೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.