ನೋಡಿ, ನಿಮ್ಮ ಹುಬ್ಬುಗಳು ಮೇಲೆದ್ದವಲ್ಲವೇ, ಮನಸ್ಸಿನಲ್ಲಿ ಗೊಂದಲವು ತುಂಬಿಕೊಂಡಿತಲ್ಲವೇ? ಮಾನವ ವಿಜಯದ, ಅಸಾಮಾನ್ಯ ಸಾಮರ್ಥ್ಯದ ಕತೆಗಳು ಬೇಕು ಆದರೆ ಈ ಬಗೆಯ ಫ್ಯಾಂಟಸಿಯಲ್ಲ ಎಂದು ನಿಮ್ಮ ಮನಸ್ಸು ಆಗಲೇ ಚೀರುತ್ತಿರಬಹುದು. ಈ ಕಾರಣಕ್ಕೇನೇ ನಾನು ಇದನ್ನು ಯಾರಿಗೂ ಹೇಳಿರಲಿಲ್ಲ. ಕತೆ ಪ್ರಾರಂಭಿಸುವ ಮುನ್ನವೇ ನೀವು ನಿಮ್ಮ ತೀರ್ಮಾನಕ್ಕೆ ಬಂದು ಕತೆಯ ಪರಿಸಮಾಪ್ತಿ ಮಾಡಿಬಿಡುತ್ತೀರಿ. ದಯವಿಟ್ಟು ಕಾಯಿರಿ. ನಿಮ್ಮ ಕನಸಿನಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ಈ ಗ್ರಹದ ಯಾವ ಜೀವಿಯ ಕನಸಿನಲ್ಲೂ ಕಾಣಿಸುವುದಿಲ್ಲ ಎಂದು ನಿಮ್ಮದಷ್ಟೇ ಅನುಭವವನ್ನು ಸಾರ್ವತ್ರಿಕಗೊಳಿಸಲು ಯಾರು ನಿಮಗೆ ಅಧಿಕಾರ ಕೊಟ್ಟರು?
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.