Your cart is empty now.
ಸಾಮಾಜಿಕ ಏರಿಳಿತಗಳ ಆ ಯುಗದಲ್ಲಿ ಕೇವಲ ಆಧ್ಯಾತ್ಮಿಕ ಶಕ್ತಿ ಈ ಎಲ್ಲ ಸವಾಲುಗಳನ್ನು ಎದುರಿಸಲು ಸಾಲದು ಎಂದು ಆದಿಶಂಕರಾಚಾರ್ಯರಿಗೆ ಮನದಟ್ಟಾಯಿತು. ಆದ್ದರಿಂದ ಅವರು ವೀರಯೋಧರನ್ನು ತಯಾರು ಮಾಡಿದರು. ಅವರಿಗೆ ತರಬೇತಿಯನ್ನು ಕೊಡಲು ನಿರ್ಮಿಸಿದ ಮಠಗಳೇ ಅಖಾಡಗಳು ಎಂದಾಯಿತು. ತರಬೇತಿ ಪಡೆದ ವೀರರ ಪಡೆ ವಿದೇಶಿ ಆಕ್ರಮಣಕಾರಿಗಳಿಂದ ಜನರನ್ನು ರಕ್ಷಿಸುವ ಕವಚವಾಯಿತು. ರಾಜ, ಮಹಾರಾಜರು ಸಹ ವಿದೇಶಿ ಆಕ್ರಮಣದ ಪರಿಸ್ಥಿತಿಯಲ್ಲಿ ಅವರ ಸಹಕಾರವನ್ನು ಪಡೆಯುತ್ತಿದ್ದರು. ಇತಿಹಾಸದಲ್ಲಿ ಇಂಥ ಗೌರವದ ಸ್ಥಾನ ನಾಗಾಸಾಧು ಯೋಧರದು. ಅವರು ತಮ್ಮ ಜೀವದ ಹಂಗು ತೊರೆದು ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಅಖಾಡಗಳು ಸೈನ್ಯದ ವೃತ್ತಿಯಿಂದ ದೂರವಾದವು ನಂತರದಲ್ಲಿ ನಾಗಸಾಧುಗಳು ಭಾರತೀಯ ಸಂಸ್ಕೃತಿ ಮತ್ತು ದರ್ಶನದ ಸನಾತನ ಮೌಲ್ಯಗಳನ್ನು ಅಧ್ಯಯನ ಅನುಪಾಲನೆ ಮಾಡುತ್ತಾ ಸಂಯಮ ಜೀವನವನ್ನು ನಡೆಸುವ ವ್ರತವನ್ನು ಧಾರಣೆ ಮಾಡಿದರು"
ನಾಗಾಸಾಧುಗಳು ಹಿಂದೂಧರ್ಮಾವಲಂಬಿ ಸಾಧುಗಳು. ನಗ್ನರಾಗಿದ್ದು ಕಾಯಾಚರಣೆಯನ್ನು ನಡೆಸುತ್ತಿದ್ದರು. ಯುದ್ಧ ಕಲೆಯಲ್ಲಿ ನಿಪುಣರು. ಇವರು ಬೇರೆ ಬೇರೆ ಅಖಾಡಗಳಲ್ಲಿರುತ್ತಾರೆ. ಸನ್ಯಾಸ ಜೀವನ ನಡೆಸುವ ಇವರ ಪರಂಪರೆಯಲ್ಲಿ ಸೇರಿಕೊಳ್ಳುವುದು ತುಂಬ ಕಷ್ಟ, ಅಖಾಡದಲ್ಲಿ ಯಾರನ್ನೂ ಸುಲಭವಾಗಿ ಸೇರಿಸಿಕೊಳ್ಳುವುದಿಲ್ಲ. ತಪ, ಬ್ರಹ್ಮಚರ್ಯ, ವೈರಾಗ್ಯ, ಧ್ಯಾನ, ಸನ್ಯಾಸ ಮತ್ತು ಧರ್ಮಕ್ಕೆ ಅನುಸಾರವಾದ ನಿಷ್ಠೆ, ಶ್ರದ್ಧೆ ಇತ್ಯಾದಿ ಅಂಶಗಳನ್ನು ಅನೇಕ ವರ್ಷಗಳವರೆಗೆ ಪರೀಕ್ಷಿಸಲಾಗುವುದು.
"ದೇಶಕ್ಕೆ ಆಪತ್ತು ಬಂದಾಗ, ಸಭ್ಯತೆ ಮತ್ತು ಸಂಸ್ಕೃತಿಗೆ ಧಕ್ಕೆ ಬಂದಾಗ ನಾವು ಅದರ ಉತ್ತಾರಾಧಿಕಾರಿಯಂತೆ ಪಹರೆ ಕಾಯುತ್ತೇವೆ. ಧರ್ಮದ ರಕ್ಷಣೆಗಾಗಿ ಅಂತಿಮವಾಗಿ ಯುದ್ಧವನ್ನು ನಡೆಸಿ ಧರ್ಮದ ಮೇಲೆ ಆವರಿಸಿರುವ ಆಪತ್ತಿನ ಮೋಡವನ್ನು ದೂರ ಸರಿಸುತ್ತೇವೆ ಎನ್ನುತ್ತಾರೆ ನಾಗಾಸಾಧುಗಳು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.