Your cart is empty now.
ನಾ ದೈವದೊಳಗೋ
ನನ್ನೊಳು ದೈವವೋ
(ಅನುಭವ ಕಥನ)
ಲೇ : ವನಮಾಲಾ ಕಟ್ಟೇಗೌಡರ್
ಈ ಅನುಭವ ಕಥನದ ಕುರಿತು ಪುರುಷೋತ್ತಮ ಬಿಳಿಮಲೆ ಅವರ ಬೆನ್ನುಡಿಯ ಆಯ್ದ ಮಾತುಗಳು ಇಲ್ಲಿವೆ : “ಪ್ರಸ್ತುತ ಅನುಭವ ಕಥನದಲ್ಲಿ ಅವರು ಮನುಷ್ಯ ಮತ್ತು ದೈವಗಳ ನಡುವಣ ಸಂಬಂಧವನ್ನು ಅತ್ಯಂತ ಮಾನವೀಯ ನೆಲೆಯಲ್ಲಿ ಪರಿಶೀಲಿಸುತ್ತಾರೆ. ಇಲ್ಲಿ ಕಾಣುವ ದೈವಗಳು ಮತ್ತು ಅವುಗಳು ಹುಟ್ಟಿಸುವ ಭಕ್ತಿಗೆ ಭಿನ್ನ ಆಯಾಮಗಳಿವೆ. ಭಕ್ತಿಯ ಅಮೂರ್ತತೆಯು ಹಾಡು, ಮಂತ್ರ, ಕುಣಿತ, ಬಲಿ, ನಟನೆ, ಮೊದಲಾದವುಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತ ಮೂರ್ತವಾಗುತ್ತದೆ. ಈ ಆಚರಣೆಗಳು ಸಾಮಾನ್ಯ ಜನರನ್ನು ದೈವಗಳೊಂದಿಗೆ ಜೋಡಿಸುತ್ತವೆ. ನಾವು ಬದುಕುತ್ತಿರುವ ಸಮಾಜವು ಭಕ್ತಿ ಮತ್ತು ಅದಕ್ಕೆ ಸೇರಿಕೊಂಡಿರುವ ಇತರ ಸಂಸ್ಥೆಗಳನ್ನು ರಕ್ಷಿಸಿ ಪೋಷಿಸುತ್ತವೆ. ಕಾಲಾಂತರದಲ್ಲಿ ಅದು ತನ್ನದೇ ಆದ ಒಂದು ಪರಂಪರೆಯನ್ನು ಸೃಷ್ಟಿಸಿಕೊಳ್ಳುತ್ತದೆ. ಈ ಪರಂಪರೆಯು ನಿಗದಿ ಪಡಿಸಿದ ರೀತಿನೀತಿಗಳಿಗೆ ಅನುಗುಣವಾಗಿ ಭಕ್ತಿಯು ಆಚರಣಾರೂಪದಲ್ಲಿ ಕಾಣಿಸಿಕೊಳ್ಳುವಾಗ ಅದು ಅದೇ ಹೊತ್ತಿಗೆ ಭಕ್ತರನ್ನು ಒಳಗೊಳ್ಳುತ್ತಾ ಸಮಾಜವನ್ನೂ ವ್ಯಾಖ್ಯಾನಿಸುತ್ತದೆ. ಈ ಅರ್ಥದಲ್ಲಿ ಪುಸ್ತಕದ ಶೀರ್ಷಿಕೆ ‘ನಾ ದೈವದೊಳಗೋ ನನ್ನೊಳು ದೈವವೋ’ ಎಂಬುದು ಸಾಂಕೇತಿಕವೂ ಸಮರ್ಪಕವೂ ಆಗಿದೆ.”-
-ಪುರುಷೋತ್ತಮ ಬಿಳಿಮಲೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.