Free Shipping Charge on Orders above ₹400

Shop Now

Mahakala Sale -10%
Rs. 112.00Rs. 125.00
Vendor: Beetle Book Shop
Type: PRINTED BOOKS
Availability: 9 left in stock

ನನ್ನ ‘ಮಹಾಕಾಲ’ ಕವಿತೆಗಳ ಗುಚ್ಛಕ್ಕೆ ಒಂದೆರಡು ಮಾತುಗಳನ್ನು ಬರೆಯಬೇಕೆಂದು ಗೆಳೆಯರಾದ ಕೇಶವ ಮಳಗಿಯವರು ಸೂಚಿಸಿದ್ದಾರೆ. ಹಾಗವರು ಹೇಳದಿದ್ದರೆ ಈ ಮಾತುಗಳನ್ನು ಬರೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಆದರೆ ನಾಕು ದಶಕಗಳಿಂದ ನನ್ನ ಕಾವ್ಯವನ್ನು ಗಂಭೀರವಾಗಿ ಮತ್ತು ಪ್ರೀತಿಯಿಂದ ಗಮನಿಸುತ್ತಾ ಬಂದಿರುವ ಅವರ ಸೂಚನೆಯನ್ನು ತೆಗೆದು ಹಾಕಲು ನನಗೆ ಸಾಧ್ಯವಾಗುವುದಿಲ್ಲ.

ಕವಿತೆಗಳ ಬಗ್ಗೆ ಮಾತಾಡುವುದು ಈ ಹಿಂದೆಯೂ ಸುಲಭವಾಗಿರಲಿಲ್ಲ. ಆದರೆ ಇಂದು ಈ ಕವಿತೆಗಳ ಬಗ್ಗೆ ಮಾತಾಡುವುದು ಎಂದಿಗಿಂತಲೂ ಕಷ್ಟವಾಗುತ್ತಿದೆ ಯಾಕೆಂದರೆ-ನನಗನಿಸುತ್ತದೆ- ಈ ಕವಿತೆಗಳು ಬಹುಮಟ್ಟಿಗೆ ಮಾತಿನಾಚೆಗಿನ ಮೌನದಲ್ಲಿನ ಅರ್ಥಗಳನ್ನು ಹುಡುಕಹೊರಟಿವೆ.

ಆಧುನಿಕ ಯುಗದ ಸಾಹಿತ್ಯ ಚಿಂತನೆಯಲ್ಲಾದ ತಳಹತ್ತ ಮಾರ್ಪಾಟನ್ನು ಥಾಮಸ್ ಮಾನ್ ಹೀಗೆ ಗುರುತಿಸಿದ: ‘ನಮ್ಮ ಯುಗದಲ್ಲಿ ಮಾನವ ತಥ್ಯನೆಂಬುದು ಇತಿಹಾಸವಾಗಿದೆ’ ಕ್ರಮಕ್ರಮೇಣ ಆಧುನಿಕತೆ ಬೆಳೆದಂತೆ ಈ ತೆರನ ಐತಿಹಾಸಿಕ ಪ್ರಜ್ಞೆ ಸಾಹಿತ್ಯ ರಚನೆ ಮತ್ತು ವಿಮರ್ಶೆಯಲ್ಲಿ ಹಾಸುಹೊಕ್ಕಾಯಿತು. ಆದರೆ ಐತಿಹಾಸಿಕ ಪ್ರಜ್ಞೆಗೆ ಸೆಡ್ಡು ಹೊಡೆಯುವ ಹಲವು ಸಾಹಿತ್ಯ ಪಂಥಗಳು ಈ ಸಂದರ್ಭದ ಮೊಟ್ಟೆಯೊಡೆದು ಹೊರಬಂದವು:ಶಸಂಕೇತವಾದ, ಪ್ರತಿಮಾವಾದ, ತಳವಾಸ್ತವವಾದ, ಅಭಿವ್ಯಕ್ತಿವಾದ ಇತ್ಯಾದಿಯಾಗಿ.

ಆದರೆ ಇವೂ ಕೂಡ ಇತಿಹಾಸದಿಂದ ಪೂರ್ತಿ ಬಿಡುಗಡೆ ಹೊಂದಲಿಲ್ಲ. ಇಲ್ಲಿನ ದೃಷ್ಟಿ ಇತಿಹಾಸದ ಭಿತ್ತಿಯನ್ನು ಮನೋವಿಜ್ಞಾನಕ್ಕೆ ವರ್ಗಾಯಿಸಿದವು ಅಷ್ಟೆ. ಮಾಮೂಲಿ ಇತಿಹಾಸದ ಆಗುಹೋಗುಗಳ ಕಥನಕ್ಕೆ ಮೊದಲು, ನಡು-ಕೊನೆಗಳು ಭೌತಿಕ ಕಾಲದಲ್ಲಿದ್ದರೆ ಸಂಕೇತವಾದ ಇತ್ಯಾದಿಗಳ ಮಿತಿಗಳಿರುವುದು ಸುಪ್ತಪ್ರಜ್ಞೆಯ ಇತಿಹಾಸದಲ್ಲಿ. ಈ ಎರಡೂ ಕಣ್ಣೋಟಗಳನ್ನು ಅರೆಬರೆ ನಂಬುತ್ತಾ ಕೃತಿರಚನೆ ಮಾಡುತ್ತಾ ಬಂದ ನನಗೆ ಕರೋನಾದ ಕರಾಳ ಕಾಲದಲ್ಲಿ 

ಈ ಎರಡು ಚೌಕಟ್ಟುಗಳಾಚೆಗಿನ ಅನುಭವವಾಯಿತು. ಬಹುಶಃ ಹೀಗಾದದ್ದು ನನಗೊಬ್ಬನಿಗೇ ಅಲ್ಲ. 

ಅದ್ಯಾವುದೆಂದರೆ: ಎರಡೂ ಬಗೆಯ ಐತಿಹಾಸಿಕತೆಗೆ ಹೊರತಾದ ಕಾಲದೇಶದ ಸ್ತಂಭನದ ಅನುಭವ. ಮನೆಯ ಗೋಡೆಗಳೇ ಜಗತ್ತಾಗಿ ಕೋಣೆಗಳೇ ದೇಶಗಳಾಗಿ ಏಕತಾನತೆಯ ಯಾಂತ್ರಿಕ ಚಕ್ರಗತಿಯೇ ಕಾಲವಾಗಿ ಅರ್ಥಗಳೆಲ್ಲವೂ ನಿರರ್ಥಕವಾಗುವ ಘೋರ ಅನುಭವ. 

ಈ ತೆರನ ಅಸ್ತಿತ್ವವಾದೀ ಜೈಲಿನಿಂದ ಕತ್ತಲಿನಾಚೆಗೆ ಬಿಡುಗಡೆಯಾಗಿ ನನಗೆ ತೋರಿದ್ದು ಕತ್ತಲನ್ನೂ ಮೀರಿದ ಮಹಾಕತ್ತಲು. ಅದಕ್ಕಿತ್ತು ಮಹಾಕಾಲ ಮಹಾಕಾಲಿಯ ಬೆಳಕಿನ ಕಾವಲು. 

ಮಹಾಕಾಲನ ಪ್ರಜ್ಞಪ್ತಿ ನನ್ನನ್ನು ಕಾಡತೊಡಗಿದ ಆ ಏಕಾಕಿತನದ ನಿಶ್ಚಲ ಪಾತಾಳಗಳಲ್ಲಿ ಇಲ್ಲಿನ ಬಹುತೇಕ ಕವಿತೆಗಳು ಹುಟ್ಟಿದವು. ಆ ಕತ್ತಲಿನ ಕತ್ತಲಿನಲ್ಲಿ ಹುದುಗಿದ್ದ ಅಲೌಕಿಕ ಅಡಗು ಬೆಳಗುಗಳಾಗಿ.

ಆ ಮಹಾಕಾಲ ಮಹಾಕಾಲಿಯರು ಈ ಸಂಕಲನದ ಬಹತೇಕ ಕವಿತೆಗಳ ಭಿತ್ತಿ, ಭೂಮಿತೆ. ಇಲ್ಲಿ ಮಹಾಕಾಲ ಮಹಾಕಾಲಿಯರು ದೇವರುಗಳು ಅನ್ನುವುದಕ್ಕಿಂತ ಹೆಚ್ಚಾಗಿ ಕಾಲದೇಶಾನುಭವಗಳ ಹೊರ ಆಯಾಮಗಳು ಸಾಧ್ಯತೆಗಳು.

ಈ ಬಗೆಯ ಅನುಭವ, ಅನುಭಾವ ಕರೋನಾದ ಕರಾಳ ಇರುಳುಗಳಲ್ಲಿ ಆವಿರ್ಭವಿಸಿದರೂ ಅದರಾಚೆಗಿನ ಸಾಧಾರಣೀಕತೆಯೂ ಅದಕ್ಕಿದೆ ಅಂದುಕೊಂಡಿದ್ದೇನೆ. ಕಾಲದೇಶಗಳ ಗತಿಶೀಲತೆಯ ಯಾದೃಚ್ಛಿಕತೆಯ ಅನುಭವ ತೀವ್ರ ಅನುಭವಗಳ ಸಂದರ್ಭದಲ್ಲಿ ಎಲ್ಲರಿಗೂ ಆಗುತ್ತದೆ. ಆಗ ಜಗವೇ ಅನಂತ, ಇಲ್ಲಿ ಎಂಬುದೇ ಎಲ್ಲೆಲ್ಲೂ.

Guaranteed safe checkout

Mahakala
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading