Your cart is empty now.
ಸಾರಾಂಶವನ್ನು ತಿಳಿಯಿರಿ! ಮಿತಿಮೀರಿದ ಹೊರೆಯಲ್ಲ
1 ಕಡಿಮೆಯೇ ಹೆಚ್ಚೆಂದು ನಂಬುವರಿಗಾಗಿ ಇತಿಹಾಸವನ್ನು ಅತ್ಯಾಕರ್ಷಕವಾಗಿಸುವ ಒಂದು ವಿಶಿಷ್ಟ ಪುಸ್ತಕ ಇದೋ ಇಲ್ಲಿದೆ. ಮೂಲಭೂತ ಮತ್ತು ಆಸಕ್ತಿದಾಯಕ ಅಂಶಗಳತ್ತ ಕೇಂದ್ರೀಕರಿಸಲ್ಪಟ್ಟು ಪ್ರತಿಯೊಂದು ವಿಷಯವನ್ನೂ ಮೂರು ಚುರುಕಾದ ತುಣುಕುಗಳ ಮೂಸೆಯಲ್ಲಿ ಹಿಡಿದಿಡಲಾಗಿದ್ದು ಪ್ರತಿ ಸಂಗತಿಯನ್ನು ಸುಲಭವಾಗಿ ಮೆಲುಕು ಹಾಕಬಹುದಾದ ಒಂದು ಪ್ರಧಾನ ವಾಕ್ಯದೊಂದಿಗೆ ಎತ್ತಿತೋರಿಸಲಾಗಿದೆ.
2. ಈಜಿಪ್ಟ್‌ನಿಂದ ಸಾಮ್ರಾಜ್ಯಶಾಹಿ ಚೀನಾದವರೆಗೆ, ಚಾಣಕ್ಕನಿಂದ ಮ್ಯಾಕ್ಸ್ ವೆಬರ್‌ವರೆಗೆ, ಕತ್ತಲೆ ಯುಗದಿಂದ ಕೈಗಾರಿಕಾ ಕ್ರಾಂತಿಗಳವರೆಗೆ, ಅಲೆಗ್ಸಾಂಡರ್‌ನಿಂದ ಅಶೋಕನವರೆಗೆ ಮತ್ತು ಧರ್ಮಯುದ್ಧಗಳಿಂದ ಇರಾನ್ ಕ್ರಾಂತಿಯವರೆಗೆ 101 ವಿಷಯಗಳನ್ನು ಒಳಗೊಂಡ ಈ ಕೃತಿಯು ಪ್ರಮುಖ ವಿದ್ಯಮಾನಗಳು, ವ್ಯಕ್ತಿತ್ವಗಳು, ಜಗತ್ತಿನ ಇತಿಹಾಸವು ದಾಟಿಬಂದ ಮೈಲಿಗಲ್ಲುಗಳು. ಮತ್ತು ತಿರುವುಗಳನ್ನು ನಿಮ್ಮ ಮುಂದಿಡುತ್ತದೆ.
3. ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ. ಅಥವಾ ಇತಿಹಾಸದ ಕುರಿತು ಕುತೂಹಲವಿರುವ ವ್ಯಕ್ತಿಯಾಗಿದ್ದರೆ, ಪರೀಕ್ಷೆ ಅಥವಾ ರಸ ಪ್ರಶ್ನೆ ಸ್ಪರ್ಧೆಗೆ ಸಂಶೋಧನೆ ನಡೆಸುತ್ತಿರುವಿರಾದರೆ ಅಥವಾ ನಿಮ್ಮ ಜ್ಞಾನವನ್ನು ಪುಸರ್‌ಮನನ ಮಾಡಿಕೊಳ್ಳಬಯಸಿದ್ದರೆ ನೀವು ಯಾವುದೇ ಅಧ್ಯಾಯವನ್ನು ತೆರೆದು ನೋಡಿ ಒಂದು ಸಂಪೂರ್ಣ ಚಿತ್ರಣವನ್ನು ಪಡೆಯಬಹುದು. ಸ್ಪಷ್ಟ. ಸಂಕ್ಷಿಪ ಹಾಗೂ. ಸಮಗ್ರವಾದ ಜಾಗತ್ತಿನ ಇತಿಹಾಸ ಮೂರು ಹೆಜ್ಜೆಗಳಲ್ಲಿ. ಕೃತಿ ನೀವು ಹೆಚ್ಚು ತಿಳಿದಷ್ಟೂ ನೀವು ಮತ್ತಷ್ಟು ತಿಳಿಯಲು ಬಯಸುವಂತೆ ಮಾಡಲು ಸಹಾಯಕವಾಗಲಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.