Your cart is empty now.
ಭಾರತೀಯತೆಯ ಸಾಕ್ಷಿಪ್ರಜ್ಞೆ, ಜಗತ್ತಿನಾದ್ಯಂತ ಅನೇಕ ನಾಯಕರು ಗ್ರಂಥಗಳು ನಾಡಿನ ಸಂಸ್ಕೃತಿಯ ಪ್ರತೀಕ ಮಹಾತ್ಮಾಗಾಂಧಿ ದಾಸ್ಯದಲ್ಲಿ ಸಿಕ್ಕಿಬಿದ್ದ ತಮ್ಮ ನಾಡನ್ನು ಬಿಡುಗಡೆ ಮಾಡಲು ಅನೇಕ ಹೋರಾಟದ ಮಾರ್ಗಗಳನ್ನು ಅನುಸರಿಸಿದ್ದಾರೆ. ಅದರಲ್ಲಿ ಗಾಂಧೀಜಿ
ಯವರು 'ಅಹಿಂಸೆ, ತ್ಯಾಗ, ಶಾಂತಿ, ಸಹನೆ ಮತ್ತು ಸತ್ಯಾಗ್ರಹ'ಗಳೆಂಬ ವಿನೂತನ ಅಸ್ತ್ರಗಳಿಂದ ಈ ನಾಡನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು.
ಆ ಹಾದಿಯಲ್ಲಿನ ಅವರ ಅಖಂಡ ಹೋರಾಟವನ್ನು ದಿನಚರಿ ರೂಪದಲ್ಲಿ ಈ ಕೃತಿಗಳು ಪ್ರತಿಬಿಂಬಿಸುತ್ತವೆ.
ಈ ಕೃತಿಗಳಲ್ಲಿ 1869ರ ಅಕ್ಟೋಬರ್ 2ರಿಂದ ಆರಂಭವಾಗಿ 1948ರ ಜನವರಿ31ರವರೆಗಿನ ಗಾಂಧೀಜಿಯವರ ಬದುಕಿನ ಪುಟಗಳಲ್ಲಿ
ನಡೆದ ಬಹು ಮುಖ್ಯವಾದ ಘಟನಾವಳಿಗಳನ್ನು ಪ್ರತಿ ವರ್ಷದ. ಹನ್ನೆರಡೂ ತಿಂಗಳುಗಳ, ವಿವಿಧ ದಿನಾಂಕಗಳಲ್ಲಿ ದೈನಂದಿನ ದಿನಚರಿ ರೂಪದಲ್ಲಿ ದಾಖಲಿಸಲಾಗಿದೆ.
ಈ ಕೃತಿಗಳಲ್ಲಿ ಗಾಂಧೀಜಿಯವರ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ ವಿವಾಹ, ವೃತ್ತಿ ಶಿಕ್ಷಣ, ಬ್ಯಾರಿಸ್ಟರ್ ಆದ ನಂತರದ ವೃತ್ತಿ ಬದುಕು, ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಅವರ ಹೋರಾಟಗಳು.
ಭಾರತದ ಸ್ವಾತಂತ್ರ್ಯ ಚಳುವಳಿಯ ನೇತೃತ್ವ, ಅಸಹಕಾರ ಚಳುವಳ. ಉಪ್ಪಿನ ಕಾನೂನುಭಂಗ ಚಳುವಳಿ, ವಿದೇಶಿ ವಸ್ತ್ರ ಬಹಿಷ್ಕಾರ ಚಳುವಳಿ.
ಸ್ವದೇಶಿ ಚಳುವಳ, ಚಲೇಜಾವ್ ಚಳುವಳ, ಪೂರ್ಣ ಸ್ವರಾಜ್ಯ ಬೇಡಿಕೆಯಂತಹ ವಿವಿಧ ಚಳುವಳಗಳನ್ನು ಕ್ರಮಬದ್ಧವಾಗಿ ಕಾಲಾನುಗಣನೆ ರೂಪದಲ್ಲಿ ನೀಡಲಾಗಿದೆ. ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಎದುರಿಸಬೇಕಾದ ವಿವಿಧ ಸಮಸ್ಯೆಗಳು.
ದೇಶೀಯ ಸಂಸ್ಥಾನಗಳ ವಿಲೀನ ಪ್ರಕ್ರಿಯೆಗಳು, ದೇಶದೊಳಗಿನ ಕೋಮು ಗಲಭೆಗಳು, ನಿರಾಶ್ರಿತರ ಸಂಕಷ್ಟಗಳ ವಿವರಗಳನ್ನು ಸಹ ದಿನಚರಿ ರೂಪದಲ್ಲಿ ನೀಡಲಾಗಿದೆ. ಗಾಂಧಿಜಿಯ ದಿನಚರಿ ಜಗತ್ತಿಗೆ
ಮಾದರಿಯಾಗಿದೆ ಈ ಕೃತಿಗಳು ಗ್ರಾಮೀಣಾ ಭಾಗದ ವಿದ್ಯಾರ್ಥಿಗಳು. ಶಿಕ್ಷಕರು, ಪತ್ರಕರ್ತರು, ಮಾಧ್ಯಮದವರು, ಸರ್ಕಾರಿ ಸಂಸ್ಥೆಗಳವರು
ಹಾಗೂ ಜನಸಾಮಾನ್ಯರಿಗೂ ಸಹ ಅತ್ಯುತ್ತಮ ಆಕರಗ್ರಂಥಗಳಾಗಿ ರೂಪುಗೊಂಡಿವೆ. ಪುಸ್ತಕ ಸಂಸ್ಕೃತಿ ಬೆಳೆಸಲು ಪ್ರಕಾಶಕರೇ ಪ್ರೇರಣೆ. ಇನ್ನೂ ಹೆಚ್ಚಿನ ಪುಸ್ತಕಗಳು ಪ್ರಕಟವಾಗಲಿ, ಈ ಕೃತಿಯ ಲೇಖಕರಿಗೆ
ಅಭಿನಂದನೆಗಳು.
ಡಾ.ಸತೀಶಕುಮಾರ ಹೊಸಮನಿ
ನಿರ್ದೇಶಕರು
ಸಾರ್ವಜನಿಕ ಗ್ರಂಥಾಲಯ ಇಲಾಖೆ
ಬೆಂಗಳೂರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.