Your cart is empty now.
ಎಸ್.ಎಲ್. ಭೈರಪ್ಪನವರು ಇದ್ದ ಕಾಲದಲ್ಲೂ ಅವರ ಯಶಸ್ಸು ಮತ್ತು ಜನಪ್ರಿಯತೆಯನ್ನು ಸಹಿಸದ ವಿರೋಧಿಗಳು ಅವರು ಆಗಲಿದ ಅನಂತರವೂ ಅವರ ಬಗ್ಗೆ ಇಲ್ಲಸಲ್ಲದ್ದು ಬರೆದರು. ಅಪಪ್ರಚಾರ ಮಾಡಿದರು. ಅವರು ಸಾಹಿತಿಯೇ ಅಲ್ಲ ಎಂದರು. ಅವರಿಗೆ ಜಾತಿವಾದಿ ಹಣೆಪಟ್ಟಿ ಅಂಟಿಸಿದರು. ಸ್ವಯಂಘೋಷಿತ ಘನ ಪಂಡಿತರಂತೆ ಭೈರಪ್ಪನವರ ಕಾದಂಬರಿಗಳನ್ನು ಸರಣಿಯಾಗಿ ಟೀಕಿಸಿದರು. ಹುಳುಕು ಹುಡುಕುವ ವ್ಯರ್ಥ ಪ್ರಯತ್ನ ಮಾಡಿದರು. ಗತಿಸಿದವರ ಬಗ್ಗೆ ಅಪದ್ಧ ಮಾತನಾಡಬಾರದು ಎಂಬುದನ್ನೂ ಮರೆತು ನಿಂದಿಸಿದರು. ಅದು ಅವರ ಎತ್ತರಕ್ಕೆ ಏರಲಾರದವನೊಬ್ಬನ ಪ್ರಲಾಪದಂತಿತ್ತು. ಭೈರಪ್ಪನವರ ಕೀರ್ತಿ ಯಾವ ಮಟ್ಟದ್ದು ಎಂಬುದು ಅವರು ಬದುಕಿದ್ದಾಗಲೇ ಸಾಬೀತಾಗಿತ್ತು. ಅವರು ಗತಿಸಿದ ಮೇಲಂತೂ ಅವರ ಸಾಹಿತ್ಯ ಮತ್ತು ಖಾಸಗಿ ಬದುಕಿನ ವಿರಾಟ ದರ್ಶನವೇ ಆಗಿ ಹೋಯಿತು. ಭೈರಪ್ಪ ಅತಿಹೆಚ್ಚು ಓದಿಸಿಕೊಂಡ ಮತ್ತು ಅಪಾರ ಓದುಗರನ್ನು ಸಂಪಾದಿಸಿದ ಅಪರೂಪದ ಲೇಖಕ. ಅವರ ಹಾಗೆ ಬರೆದ ಮತ್ತು ಜಗತ್ತನ್ನು ಸುತ್ತಿದ ಲೇಖಕ ಕನ್ನಡದ ಮಟ್ಟಿಗಂತೂ ಇಲ್ಲವೇ ಇಲ್ಲ. ಅವರು ಅಖಿಲ ಭಾರತೀಯ ಸ್ತರದ ಲೇಖಕ. ಅಷ್ಟೇ ಅಲ್ಲ; ವಿಶ್ವಮಾನ್ಯ ಲೇಖಕರೂ ಹೌದು. ಅವರ ಕೃತಿಗಳು ನಲವತ್ತಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳಿಗೆ ಅನುವಾದಗೊಂಡಿವೆ.
ಈ ಕೃತಿಯಲ್ಲಿ ಡಾ. ಎಸ್.ಎಲ್. ಭೈರಪ್ಪನವರ ಬದುಕಿನ ಅಪರೂಪದ ಪ್ರಸಂಗಗಳಿವೆ. ಹೆಚ್ಚಿನವರಿಗೆ ಗೊತ್ತಿರದ ಸಂಗತಿಗಳಿವೆ. ವಿರೋಧಿಗಳೂ ಮೆಚ್ಚಿಕೊಳ್ಳುವಂಥ ಭೈರಪ್ಪನವರ ಖಾಸಗಿ ಬದುಕಿನ ವಿಷಯಗಳನ್ನು ಇಲ್ಲಿ ದಾಖಲಿಸಲಾಗಿದೆ. ಇದು 'ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು!' ಇಲ್ಲಿ ದಾಖಲಾಗಿರುವ ಯಾವ ಪ್ರಸಂಗವೂ ಕಪೋಲಕಲ್ಪಿತವಲ್ಲ. ದಂತಕತೆಯೂ ಅಲ್ಲ. ನೋಡಿ-ಕೇಳಿ-ಓದಿ ಅರಿತ ಮತ್ತು ಕಂಡವರಿಂದ ತಿಳಿದು ಹೆಕ್ಕಿ ಅಕ್ಷರ ರೂಪಕ್ಕಿಳಿಸಿದ ಪ್ರಸಂಗಗಳು. ಇದು 'ಗ್ಲೋಬಲ್ ಸ್ಟಾರ್' ಲೇಖಕನೊಬ್ಬನ ಕುರಿತಾದ ಬೊಗಸೆ ಗಾತ್ರದ ಕೈಪಿಡಿ. ಒಂದಂತೂ ಸತ್ಯ. ಮುಂದಿನ ನೂರು ವರ್ಷಗಳವರೆಗೂ ಭೈರಪ್ಪನವರು ಓದಿಸಿಕೊಳ್ಳುತ್ತಾರೆ. ಅವರ ಖ್ಯಾತಿ ಬೆಳೆಯುತ್ತಲೇ ಇರುತ್ತದೆ. ಅವರು ಮಾನ್ಯ; ನಾವು ಧನ್ಯ ಅಷ್ಟೇ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.