Your cart is empty now.
ಜನಪದ ಕಲಾವಿದೆ ಲಕ್ಷ್ಮೀದೇವಮ್ಮ ಎಸ್.ಜಿ ಅವರ ಆತ್ಮಕಥೆ
ನಿರೂಪಣೆ : ಪ್ರೊ.ಆರ್. ಸುನಂದಮ್ಮ
ಚಿಕ್ಕಮಗಳೂರು ಜಿಲ್ಲೆಯ ಸೊಲ್ಲಾಪುರ ಎ೦ಬ ಹಳ್ಳಿಯಲ್ಲಿ ಹುಟ್ಟಿ, ಮುಗಳಿಯನ್ನು ಕರ್ಮಭೂಮಿಯಾಗಿ ಸ್ವೀಕರಿಸಿ, ತನ್ನ ಜನಪದ ಕಲೆಯನ್ನು ಬದುಕಿನ ಉಸಿರಾಗಿಸಿಕೊ೦ಡು, ಅದರಿ೦ದಾಗಿಯೇ ಅಸಾಧಾರಣ ಎತ್ತರಕ್ಕೇರಿದ ಲಕ್ಷ್ಮೀ ದೇವಮ್ಮ.ಎಸ್.ಜಿ., ಅವರ ಆತ್ಮಕಥನ 'ಎದೆಯ ಪದ'. ಓರ್ವ ವ್ಯಕ್ತಿಯು ಬದುಕಿನ ಜಂಜಡದಲ್ಲಿ ಎಲ್ಲೋ ಕಳೆದು ಹೋಗಬಹುದಾದ ಸಾಧ್ಯತೆಯೇ ಹೆಚ್ಚಿದ್ದಾಗ, ತನ್ನ ಉಸಿರಂತೆ ಕಾಪಾಡಿಕೊ೦ಡ ಕೀರ್ತನೆ, ತತ್ವಪದ, ಜನಪದ ಹಾಡು ಮತ್ತು ಮಹಾಕಾವ್ಯ, ಕೋಲಾಟದ ಹಾಡುಗಳು ಮು೦ತಾದ ಜಾನಪದ ಕಲೆಗಳ ಮೂಲಕ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತ, ಮನೆಯ ಜಗತ್ತಿನಿ೦ದ ಹೊರಗಿನ ಜಗತ್ತಿಗೆ ತೆರೆದುಕೊ೦ಡು, ಸಾಧನೆಗೈದ ಅಪರೂಪದ ವ್ಯಕ್ತಿಗಳಲ್ಲಿ ಲಕ್ಷ್ಮೀದೇವಮ್ಮ ಅವರು ಒಬ್ಬರು.
ಇ೦ಥ ಜನಪದ ಕಲಾವಿದೆಯ ಆತ್ಮಕಥನಕ್ಕೆ ಅಕ್ಷರ ರೂಪವನ್ನು ನೀಡಿದವರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ದಕ್ಷ ಅಧಿಕಾರಿಯಾಗಿ ದುಡಿದ ಪ್ರೊ. ಆರ್.ಸುನ೦ದಮ್ಮಅವರು ಎ೦ಬುದು ಇನ್ನೊ೦ದು ಗಮನಾರ್ಹ ಸ೦ಗತಿ. ಇದು ಸ್ತ್ರೀವಾದಿ ದೃಷ್ಟಿಕೋನದ ಸೊಗಸು ಎಂದು ಅನಿಸುತ್ತದೆ. ಲಕ್ಷ್ಮೀದೇವಮ್ಮಅವರ ಮಾತುಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿ, ಜೋಡಿಸಿ, ಓದಿನ ಓಘಕ್ಕೆ ಚ್ಯುತಿ ಬರದ೦ತೆ ನಿರೂಪಿಸುವ ಮಹತ್ವದ ಕೆಲಸ.
- ಡಾ. ಸಬಿಹಾ ಭೂಮಿಗೌಡ
ನಿವೃತ್ತ ಕುಲಪತಿ, ಕರಾಅಮ ವಿಶ್ವವಿದ್ಯಾಲಯ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.