Free Shipping Charge on Orders above ₹300

Shop Now

Braahmanadharmada Digvijaya - Rajahatye athava Pratikrantiya Ugama By Dr. B R Ambedkar
Rs. 100.00
Vendor: BEETLE BOOK SHOP
Type: PRINTED BOOKS
Availability: 41 left in stock
ವರ್ತಮಾನದ ಅಸಮಾನತೆಯ ಹಿಂದೂ ಸಮಾಜ ಕಂಡು ಬೆಚ್ಚಿ ಬಿದ್ದಿದ್ದ ಡಾ॥ ಬಿ.ಆರ್. ಅಂಬೇಡ್ಕರ್, ಈ ಅನ್ಯಾಯಗಳ ಮೂಲ ಶೋಧಿಸಲು ಚರಿತ್ರೆಯೆಂಬ ಕಗ್ಗಾಡು ಹೊಕ್ಕರು. ಜೀವಮಾನವಿಡೀ ತಮ್ಮ ಹೆಸರಿಗೆ ಅನ್ವರ್ಥವಾದ ಭೀಮಶ್ರದ್ದೆ, ವಿದ್ವತ್ತು, ಪ್ರತಿಭೆಗಳಿಂದ ಸತ್ಯಶೋಧನೆಯ ತಪಸ್ಸಿಗೆ ತೊಡಗಿದರು. ಹಿಂದೂ ಚರಿತ್ರೆಯಲ್ಲಿ ಹುದುಗಿರುವ ಭಯಾನಕ ಸತ್ಯಗಳನ್ನು ಒಂದೊಂದಾಗಿ ಸಾಕ್ಷ್ಯಾಧಾರ ಸಮೇತ ಎತ್ತಿ ಬೆಳಕಿಗೊಡ್ಡಿದರು.

ಪ್ರಸ್ತುತ ಬಾಹ್ಮಣಧರ್ಮದ ದಿಗ್ವಿಜಯ!- ಅವರ ಈ ಸಂಶೋಧನೆಯ ಫಲವಾಗಿ ಹೊರಬಂದ ಸ್ಪೋಟಕ ಕೃತಿಗಳಲ್ಲೊಂದು. ಇಲ್ಲಿ ಕ್ರಿಸ್ತಪೂರ್ವ ವಿದ್ಯಮಾನಗಳ ಆಳಕ್ಕಿಳಿಯುವ ಅಂಬೇಡ್ಕರ್, ಈಗಿನ ಎಷ್ಟೋ ಸಂಕಟಗಳ ಬೇರುಗಳನ್ನು ಪತ್ತೆ ಮಾಡುತ್ತಾರೆ. ಇಂದಿಗೂ ಕೊನೆಯಿಲ್ಲದ ವಿವಾದಗಳ ಕೇಂದ್ರವಾಗಿರುವ ಮನುಸ್ಮೃತಿಯ ಅರ್ಥ- ತಥ್ಯವೇನು, ಇತಿಹಾಸದಲ್ಲಿ ಬ್ರಾಹ್ಮಣಧರ್ಮ ಯಾವ ಬಗೆಯ ಏರಿಳಿತಗಳನ್ನು ಕಂಡಿದೆ. ಹಿಂದೂ ಸಮಾಜದಲ್ಲಿ ಶೂದ್ರರು ಮತ್ತು ಸ್ತ್ರೀಯರು ಹೀನಾಯ ಸ್ಥಿತಿ ತಲುಪಿದ್ದು ಹೇಗೆ, ಬೌದ್ಧಧರ್ಮವನ್ನು ಬ್ರಾಹ್ಮಣಧರ್ಮ ಹೇಗೆ ಸಮರದ ನೆಲೆಯಲ್ಲಿ ಎದುರುಗೊಂಡಿತು.- ಇವೇ ಮುಂತಾದ ಜಿಗುಟು ಒಗಟುಗಳನ್ನು ಎದುರಿಸುವ ಅಂಬೇಡ್ಕರರ ಬೆಂಕಿಯಂಥ ನೋಟ. ಎಲ್ಲ ಹುಸಿ ಆವರಣಗಳನ್ನು ಸುಟ್ಟು ಭಸ್ಮ ಮಾಡುತ್ತದೆ. ನಿಚ್ಚಳ ಸತ್ಯಗಳನ್ನು ನಮ್ಮ ಮುಂದಿಡುತ್ತದೆ.

ತಮ್ಮ ಪ್ರತಿಯೊಂದು ಪ್ರತಿಪಾದನೆಗೂ ನಿಸ್ಸಂಧಿಗ್ಧ ಆಧಾರ ಪುರಾವೆ ಒದಗಿಸುವ ಅಂಬೇಡ್ಕರ್ 'ಭಾರತೀಯ ಇತಿಹಾಸವೆಂದರೆ ಬ್ರಾಹ್ಮಣಧರ್ಮ ಹಾಗೂ ಬೌದ್ಧಧರ್ಮಗಳ ಮಾರಕ ಕಾಳಗದ ಚರಿತ್ರೆಯೇ ಆಗಿದೆ' ಎಂಬ ತೀರ್ಮಾನಕ್ಕೆ ಬರುತ್ತಾರೆ. ನಿಸ್ಸಂಶಯವಾಗಿ ನಮ್ಮ ನಾಡಿನ ಸರ್ವಶ್ರೇಷ್ಠ ಸಂಶೋಧಕ- ಇತಿಹಾಸಕಾರರಾದ ಅಂಬೇಡ್ಕರರ ಶೋಧನೆಗಳಿಂದ ಹಿಂದೂ ಸಮಾಜ ಉಪಕೃತವಾಗಿದೆ.

ಅಂಬೇಡ್ಕರರ ಈ ಶಿಖರಸದೃಶ ಸಂಶೋಧನಾ ಕೃತಿಯ ಕನ್ನಡ ಅನುವಾದವನ್ನು ಪ್ರಕಟಿಸುತ್ತಿರುವುದು ಆದಿಮಕ್ಕೆ ಹೆಮ್ಮೆಯ ಸಂಗತಿ

Guaranteed safe checkout

Braahmanadharmada Digvijaya - Rajahatye athava Pratikrantiya Ugama By Dr. B R Ambedkar
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading