'ಒಂದು ಛಂದೋಬದ್ಧ ಪ್ರಕಾರದ ಛಂದಸ್ಸನ್ನು ಸರಿಯಾಗಿ ತಿಳಿದುಕೊಂಡರೆ ಸಾಕು; ಅದರಲ್ಲಿ ಬರೆಯುವವರ ಸೀಮಿತ ಸಂಖ್ಯೆಯಿಂದಾಗಿ ಬೇಗನೆ ಒಂದು ಗುರುತಂತೂ ಸ್ಥಾಪನೆಯಾಗುತ್ತದೆ" ಎಂಬುವವರು- 'ಛಂದಸ್ಸೆಂಬುದು ಒಂದು ಪ್ರಕಾರದ ಹೊರ ಆವರಣ ಮಾತ್ರವೇ ಎಂಬುದನ್ನೂ ಮತ್ತು ನಿಜವಾದ ಒಳಹೂರಣವಾಗಿರುವ ಆತ್ಮವು ಇರಲೇಬೇಕೆಂಬುದನ್ನೂ ಮರೆತುಬಿಡುತ್ತಾರೆ. ಹಾಗಾಗಿ ಅಂಥ ಲೇಖಕರನ್ನೂ ಓದುಗರೂ ಬಲುಬೇಗ ಮರೆತು ಬಿಡುತ್ತಾರೆ. ಗಜಲ್ ಮತ್ತು ಹಾಯ್ಕುಗಳು ಇಂತಹ ಅಪಾಯದ ಬಿರುಗಾಳಿಗೆ ಸಿಲುಕಿ ನಡುಸಮುದ್ರದಲ್ಲಿ ಹೊಯ್ದಾಡುತ್ತಿರುವ ನಾವೆಗಳಂತೆ ಕಾಣಿಸುತ್ತಿರುವ ಎರಡು ಕಾವ್ಯಪ್ರಕಾರಗಳು. ಇಂಥ ಈ ಹಾಯ್ಕು ಪ್ರಕಾರದಲ್ಲಿ ಬರೆಯುವ ಹೊಸಬರಿಗೆ ಸರಿದಾರಿ ತೋರುವ ಕೈಮರದಂತಿದೆ ಈ ಕೃತಿ.
ಬಾಶೋನ ಬದುಕಿನ ವಿವರ, ಕಾವ್ಯದ ದರ್ಶನ ಮತ್ತು ಶೈಲಿಯ ಅನನ್ಯತೆಗಳನ್ನು ತುಂಬಾ ವಿವರವಾಗಿ ಮತ್ತು ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವುದು ಕೂಡ ಈ ಬರೆಹದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಬಾಶೋನ ಈ ನಿಸರ್ಗಕೇಂದ್ರಿತ ನಿಶ್ಯಬ್ದ ಚಿತ್ರಗಳು ಕನ್ನಡ ಹಾಯ್ಕುವಿನ ಮಿತಿಯನ್ನು ಕಣ್ಣಿಗೆ ಕಟ್ಟುವಂತೆ ಎತ್ತಿ ತೋರಿಸುತ್ತಿವೆ. ಇದರ ಹಿಂದೆ ಇರುವ ಕವಿಹೃದಯದ ಕಲಾವಿದ ಡಾ.ಸಿ.ರವೀಂದ್ರನಾಥರ ಅಪಾರ ಶ್ರಮ, ಶ್ರದ್ಧೆ ಮತ್ತು ಅನುವಾದ ಪ್ರತಿಭೆಗಳು ಅಭಿನಂದನಾರ್ಹವಾಗಿವೆ.
ಚಿದಾನಂದ ಸಾಲಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.