ಕುಗ್ರಾಮ 'ಪುಣಜ'ದಲ್ಲಿ ಜನಿಸಿದ ಡಾ. ವಿವೇಕ ರೈ ಅವರ ಕಾರ್ಯ ವ್ಯಾಪ್ತಿ ಕರ್ನಾಟಕವನ್ನೂ ಮೀರಿ ಜರ್ಮನಿಯನ್ನೂ ಒಳಗೊಂಡಿದೆ. ಸರಳ ಸಜ್ಜನಿಕೆಯ ರೈ ಅವರು ಎರಡು ವಿಶ್ವವಿದ್ಯಾಲಯಗಳ ಕುಲಪತಿಗಳಾಗಿದ್ದರೂ ಇಂದಿಗೂ ಅದೇ ಸರಳತೆ ಸೌಜನ್ಯವನ್ನು ಉಳಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ತುಳು ಅಕಾಡೆಮಿಯನ್ನು ಕಟ್ಟಿ ಬೆಳಸಿ ಅವುಗಳಿಗೊಂದು ಹೊಸ ರೂಪ ಕೊಟ್ಟಿದ್ದಾರೆ.
ಈ ಕೃತಿಯಲ್ಲಿ ಭಾಷೆ- ಸಾಹಿತ್ಯ-ಸಂಸ್ಕೃತಿ, ಅಗಲಿದವರ ನೆನವರಿಕೆ ಎಂಬ ಎರಡು ಭಾಗಗಳಲ್ಲಿ 39 ಅಪ್ರಕಟಿತ ಬರಹಗಳಿವೆ. ಈ ಬರಹಗಳಲ್ಲಿ ರೈಯವರ ಸಾಂಸ್ಕೃತಿಕ ಕಾಳಜಿ, ವಿನಯ ಎದ್ದು ತೋರುತ್ತದೆ. ದಕ್ಷಿಣ ಕನ್ನಡದ ಬಹುತೇಕ ವ್ಯಕ್ತಿಗಳು ಮೈಸೂರು ಭಾಗದವರಿಗೆ ಅಷ್ಟಾಗಿ ಪರಿಚಯವಿರುವುದಿಲ್ಲ. ಅಂತಹ ಧೀಮಂತ ವ್ಯಕ್ತಿತ್ವಗಳನ್ನು ಕುರಿತ ರೈಯವರ ಬರಹಗಳು ಅವರ ಬಗೆಗೆ ಗೌರವ ಬೆರಗನ್ನು ಉಂಟು ಮಾಡುತ್ತವೆ. ಅತ್ಯಂತ ಆಪ್ತ ಮತ್ತು ಹೃದಯಸ್ಪರ್ಶಿ ವ್ಯಕ್ತಿಚಿತ್ರಗಳಿವು. ಹಲವಾರು ಲೇಖನಗಳು ಕಥೆಯಂತೆ ಓದಿಸಿಕೊಂಡು ಹೋಗುತ್ತವೆ. ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದಾಗ ದಕ್ಷಿಣ ಕನ್ನಡದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಲೋಕವನ್ನೊಮ್ಮೆ ಸುತ್ತು ಹಾಕಿ ಬಂದಂತಾಗುತ್ತದೆ.
ಡಾ. ವಿವೇಕ ರೈ ಅವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾಳಜಿಯ ಚಟುವಟಿಕೆಗಳು ಮುಂದಿನ
ಪೀಳಿಗೆಗೆ ಮಾರ್ಗದರ್ಶಕ
ವಾಗಿರುವಂತದ್ದು.
- ಪ್ರಕಾಶ್ ಕಂಬತ್ತಳ್ಳಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.