Free Shipping Above ₹500 | COD available

Anna Karenina (Set of 2 Books) Sale -10%
Rs. 1,440.00Rs. 1,600.00
Vendor: BEETLE BOOK SHOP
Type: PRINTED BOOKS
Availability: 8 left in stock

ಟಾಲ್ಟಾಯ್ ಬರೆದಂತಹ ಅನ್ನಾ ಕರೆನಿನ 1877 ರಲ್ಲಿ ಪ್ರಕಟಗೊಂಡಿತು, ಅದನ್ನು ಆ ಕಾಲದಲ್ಲಿ ಎಂದೂ ಬರೆಯದೇ ಇದ್ದಂತಹ ಶ್ರೇಷ್ಠ ಕಾದಂಬರಿ ಎಂದು ಪರಿಗಣಿಸಲಾಗಿತ್ತು. ಅದೊಂದು ಸಂಕಿರ್ಣತೆಯಿಂದ ಕೂಡಿದ ಪರಸ್ಪರವಾಗಿ ಹೆಣೆದಂತಹ ಪ್ರೀತಿಯ, ದಾಂಪತ್ಯ ದ್ರೋಹದ, ಕುಟುಂಬದ ಮತ್ತು ಸಮಾಜದ ಸಂಗತಿಗಳನ್ನು ಹೊಂದಿದ ಕಥಾನಕವಾಗಿದೆ. ಇದೊಂದು ಹತ್ತೊಂಭತ್ತನೆ ಶತಮಾನದ ಶ್ರೀಮಂತ ವರ್ಗದಲ್ಲಿನ ಘಟನೆಗಳನ್ನು ಒಳಗೊಂಡಿದೆ. ಈ ಕಥಾನಕದ ಹೃದಯದಲ್ಲಿ ಇರುವುದು ಎರಡು ಕಥೆಗಳು. ಒಂದು ಭಾವೋದ್ರಿಕ್ತ ಅಘನಾಶಿನಿ(ಅನ್ನಾ ಕರೆನಿನ) ಮತ್ತು ಭಗವಾನ್ (ಟ್ರಾನ್ಸಕಿ) ರನ್ನು ಒಳಗೊಂಡಿರುವುದು, ಇನ್ನೊಂದು ತೇಜಸ್ವಿಯ (ಲೆವಿನ್) ನೈತಿಕವಾದಂತಹ ಮತ್ತು ಆಧ್ಯಾತ್ಮಿಕವಾದ ಪಯಣವನ್ನು ಒಳಗೊಂಡಿರುವುದು. ಕಡೆಯದಾಗಿ, ಅಘನಾಶಿನಿಯು (ಅನ್ನಾ ಕರೆನಿನ) ಮಾನವೀಯ ಭಾವನೆಗಳ ಸಂಕೀರ್ಣತೆಯಿಂದ ಕೂಡಿದ ಆಯಾಮಗಳ ಬಗ್ಗೆ ಮತ್ತು ಆಯ್ಕೆಗಳ ಕಾರಣಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಪ್ರಸ್ತುತ ಪಡಿಸುವ ಕಾದಂಬರಿಯು ಇದಾಗಿದೆ. ಈ ಕಾದಂಬರಿಯು ಸ್ಪಷ್ಟವಾದ ಮತ್ತು ಎರಡು ಮಾತಿಲ್ಲದಂತಹ ಪ್ರೀತಿಯನ್ನು ಉತ್ಕರ್ಷಗೊಳಿಸುವ ಅಥವ ವಿನಾಶಗೊಳಿಸುವುದನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಅದು ಸಂತೋಷದ ಆಯಾಮಗಳ, ನೈತಿಕ ಜವಾಬ್ದಾರಿಗಳ ಮತ್ತು ನಮ್ಮ ಜೀವನಕ್ಕೆ ರೂಪವೊಂದನ್ನು ಕೊಡುವ ಸಾಮಾಜಿಕ ಒತ್ತಡಗಳ ಬಗ್ಗೆ ಗಾಢವಾದ ಒಳನೋಟಗಳನ್ನು ಸವಿಸ್ತಾರವಾಗಿ ಬಿಂಬಿಸುತ್ತದೆ. ಟಾಲ್ಮಾಯ್ನ ಈ ಮೇರು ಕೃತಿಯು ಎಲ್ಲಾ ವೈರುಧ್ಯಗಳ ಮತ್ತು ಸಂಕೀರ್ಣತೆಗಳ ನಡುವೆಯೂ ಮಾನವೀಯತೆಯನ್ನು ಉಳಿಸಿಕೊಳ್ಳುವುದು ಎಂದರೆ ಏನು ಎನ್ನುವುದರ ಬಗ್ಗೆ ಗಾಢವಾಗಿ ಅನ್ವೇಷಿಸುತ್ತದೆ. ಅನ್ನಾ ಕರೆನಿನವನ್ನು ನಾನು ಓದಿದ ನಂತರ ಮನುಷ್ಯ ಸಹಜವಾದ ಸ್ಪಂದನೆಗಳು, ಭಾವಲಹರಿ, ನೈತಿಕತೆಯ ಬಗ್ಗೆಗಿನ ಮಾನವ ಸಹಜವಾದಂತಹ ಧೋರಣೆ ಮತ್ತು ಅದಲ್ಲದೇ ನೈತಿಕತೆಯ ಬಗ್ಗೆಗಿನ ವ್ಯಾಖ್ಯಾನ, ಇವೆಲ್ಲವೂ ಎಲ್ಲ ಮನುಷ್ಯ ಜೀವಿಗಳಲ್ಲಿಯೂ ಒಂದೇ ನಮೂನೆಯಲ್ಲಿ ಇರುವುದರ ಬಗ್ಗೆಗಿನ ಅರಿವು ನನಗಾಯಿತು. ಅದೇ ಕಾರಣಕ್ಕೆ ಈ ಕಾದಂಬರಿಯ ಭಾವಾನುವಾದವನ್ನು ನಮ್ಮ ಪರಿಸರಕ್ಕೆ ಅಳವಡಿಸಿಕೊಂಡು ಮಾಡಬೇಕೆಂದು ನಿರ್ಧರಿಸಿದೆ. ನದಿಗಳು ಮನುಷ್ಯನ ಕೊಳಕನ್ನೆಲ್ಲಾ ಹೊತ್ತುಕೊಂಡು ಸಮುದ್ರವನ್ನು ತಲುಪುವಾಗ ತನ್ನ ಪರಿಶುದ್ಧತೆ ಮತ್ತು ನಿರ್ಮಲತ್ವದಿಂದಲೇ ಸಾಗರವನ್ನು ಸೇರುವುದು ಮತ್ತು ಅದೇ ಸಮುದ್ರದ ಅವಿ ಪುನಃ ಮಳೆ ಸುರಿಸಿ ಸಮೃದ್ಧಿಯನ್ನು ಪುನಃಸ್ಥಾಪಿಸುವುದು. ಹೊರ ನೋಟಕ್ಕೆ ಅನ್ನ ಕರೆವಿನ ನೈತಿಕತೆಯ ಹಾದಿಯಿಂದ ಸ್ವಲ್ಪ ದೂರ ಸರಿದಳು ಎಂದಾದರೂ ಕೂಡ ತನ್ನ ಪರಿಶುದ್ಧ ಆಲೋಚನೆಗಳನ್ನು ಕಾಪಾಡಿಕೊಂಡು ಬಂದಳು. ಅದೇ ಕಾರಣಕ್ಕೆ ಅತ್ಯಂತ ಪರಿಶುದ್ಧವಾದ ನದಿಯಾದ ಅಘನಾಶಿನಿಯ ಹೆಸರನ್ನು ಈ ಕಾದಂಬರಿಗೆ ನಾನು ಇಟ್ಟಿದ್ದು.

Guaranteed safe checkout

Anna Karenina (Set of 2 Books)
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.