Your cart is empty now.
ಬಾಬಾ ಸಾಹೇಬರು ತಮ್ಮ ಹಲವು ಕೃತಿಗಳ ಬರವಣಿಗೆಯ ಕೆಲಸವನ್ನು ಒಮ್ಮೆಗೆ ಕೈಗೆತ್ತಿಕೊಂಡಿದ್ದರು. 'ಬುದ್ಧ ಮತ್ತು ಆತನ ಉಪದೇಶ' (ಮುಂದೆ ಇದರ ಶೀರ್ಷಿಕೆಯನ್ನು 'ಬುದ್ಧ ಮತ್ತು ಧರ್ಮ' ಎಂದು ಬದಲಾಯಿಸಿದರು) ಕ್ಕೆ ಮೊದಲ ಆದ್ಯತೆ ಕೊಟ್ಟಿದ್ದರು. ಇದಲ್ಲದೇ 'ಬುದ್ಧ ಮತ್ತು ಕಾರ್ಲ್ಮಾರ್ಕ್ಸ್', 'ಪುರಾತನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' ಹಾಗೂ 'ಹಿಂದೂ ಧರ್ಮದ ಒಗಟುಗಳು' ಹೀಗೆ ಹಲವು ಕೃತಿಗಳ ಬರವಣಿಗೆಗೆ ಬೇಕಾದ ಅಧ್ಯಯನ ಸಿದ್ಧತೆ ಮತ್ತು ಬರವಣಿಗೆ ಎರಡನ್ನೂ ಒಟ್ಟಿಗೆ ನಡೆಸುತ್ತಿದ್ದರು. ಬುದ್ಧನ ಧರ್ಮವನ್ನು ಸೂಕ್ತವಾಗಿ ಅರ್ಥೈಸುವುದು ಬಹುಮುಖ್ಯವೆಂದು ಅವರು ಭಾವಿಸಿದ್ದರು. ಈ ಎಲ್ಲಾ ಕೃತಿಗಳನ್ನು ಆದಷ್ಟು ಬೇಗ ಬರೆದು ಮುಗಿಸಲೇಬೇಕೆಂದು ಅವರು ನಿರ್ಣಯಿಸಿದ್ದರು. ಅದೊಂದು ಕಠಿಣ ಹಾಗೂ ದೀರ್ಘ ಪರಿಶ್ರಮ ಬೇಡುವ ಕೆಲಸವಾಗಿತ್ತು. ಇದಕ್ಕಾಗಿ ನಾನು ಐದು ವರ್ಷಗಳ ದೀರ್ಘ ಕಾಲ ಹಲವು ಎಡರು ತೊಡರುಗಳ ನಡುವೆ ಎಡಬಿಡದೆ ಪರಿಶ್ರಮಿಸಬೇಕಾಯಿತು. ನಾನು ಕೆಲಸ ಮಾಡುತ್ತಿದ್ದ ಸರ್ಕಾರಿ ಕಛೇರಿಯ ವೇಳೆ ಮುಗಿದ ಕೂಡಲೆ ನೌಕರರೆಲ್ಲಾ ತಮ್ಮ ತಮ್ಮ ಮನೆಗಳತ್ತ ದೌಡಾಯಿಸುತ್ತಿದ್ದರು. ಭಾನುವಾರ ಮತ್ತು ರಜಾ ದಿನಗಳಲ್ಲಿ ತಮ್ಮ ಹೆಂಡತಿ ಮಕ್ಕಳ ಜೊತೆ ಆನಂದವಾಗಿ ಕಾಲ ಕಳೆಯುತ್ತಿದ್ದರು. ಆದರೆ ನಾನು ಮಾತ್ರ ಸಂಜೆ ಕಛೇರಿ ಕೆಲಸ ಮುಗಿದ ಕೂಡಲೇ ಸಮಯಕ್ಕೆ ಸರಿಯಾಗಿ ಬಾಬಾ ಸಾಹೇಬರ 26, ಆಲಿಪುರ ರಸ್ತೆಯ ಬಂಗಲೆಗೆ ಹೋಗುತ್ತಿದ್ದೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.