Your cart is empty now.
* ಮಕ್ಕಳ ಸಾಹಿತ್ಯ ಕ್ಷೇತ್ರದ ನಾಡಿ ಎಂದೇ ಹೆಸರಾದವರು ದಿ. ನಾ.ಡಿಸೋಜಾ “ಹಾರುವ ಹಕ್ಕಿಗೆ ಹಸಿರೆಲೆ ತೋರಣ" ಅವರ ಮಿನಿಕಾದಂಬರಿಯ ಗುಚ್ಛ. ಈ ಕಾಂದಬರಿ ಮಕ್ಕಳ ಮನಸನ್ನು ಚುಂಬಕದಂತೆ ಸೆಳೆಯುವ ಕೃತಿಯಾಗಿದೆ.
* ನಾ.ಡಿಯವರ ಸಾಹಿತ್ಯದಲ್ಲಿ ಊರಿಗೊಂದು ಹೆಸರು ತುಂಬಾ ಕುತೂಹಲಕಾರಿಯಾದುದು. ಆ ಊರಿನ ಹೆಸರು ಗೀಜುಗಾ, ಒಮ್ಮೆ ಮಕ್ಕಳು ತಮ್ಮ ತಮ್ಮಲ್ಲಿಯೇ ನಮ್ಮೂರಿನ ಹೆಸರು ಗೀಜುಗಾ ಎಂದಿದೆ ಆದರೆ ಊರಲ್ಲಿ ಒಂದು ಗಿಜುಗ ಹಕ್ಕಿ ಅಥವಾ ಗಿಜುಗನ ಗೂಡು ಇಲ್ಲವಲ್ಲ ಎಂದು ಚರ್ಚಿಸುತ್ತಾರೆ. ಹಿರಿಯರಿಗೂ ಕೆಲವು ಪ್ರಶ್ನೆಗಳನ್ನು ಪ್ರಶ್ನಿಸಿರುತ್ತಾರೆ. ಹಿರಿಯರಿಗೆ ತಮ್ಮ ತಪ್ಪಿನ ಅರಿವಾಗಿ ತಲೆ ಬಗ್ಗಿಸುತ್ತಾರೆ. ಊರ ಹತ್ತಿರ ಒಂದು ಹಳ್ಳ ಇತ್ತು. ಅದರ ಹೆಸರು ಮಜ್ಜಿಗೆ ಹಳ್ಳ ಅದರ ದಡದ ಎಲ್ಲಾ ಮರಗಳನ್ನು ಊರಿನವರು ಕಡಿದು ಹಾಕಿದ್ದರು, ಆಗ ಹಕ್ಕಿಗಳು ಕಣ್ಮರೆಯಾಗಿದ್ದವು. ಗೀಜುಗನ ಗೂಡು ಕಣ್ಮರೆಯಾಗಿದ್ದವು.
* ಆ ಹಳ್ಳಿಗೆ ಅರಣ್ಯಾಧಿಕಾರಿಯೊಬ್ಬರು ಬಂದರು. ಮಕ್ಕಳು ಅವರನ್ನು ಭೇಟಿ ಮಾಡಿ ಸಸಿಗಳನ್ನು ತಂದು ಕೊಡಲು ಎಲ್ಲರೂ ಸೇರಿ ಮಜ್ಜಿಗೆ ಹಳ್ಳದ ದಡದಲ್ಲಿ ಸಸಿನೆಟ್ಟರು, ಸಸಿಗಳು ಹೆಮ್ಮರವಾದವು.ಅಲ್ಲಿ ಗೀಜುಗಾ ಹಕ್ಕಿಗಳು ಗೂಡು ಕಟ್ಟಿದವು ಊರಿಗೆ ಮತ್ತೆ ಕಳೆ ಬಂತು. ಜನರು ಮಕ್ಕಳ ಹೆಸರನ್ನು ಕೊಂಡಾಡಿದರು.
* ಮಲೆನಾಡಿನ ಹಕ್ಕಿ ಪ್ರಾಣಿಗಳ ಬದುಕನ್ನು ಚಿತ್ರಿಸುವ ಕತೆಗಳನ್ನು ಡಿಸೋಜರವರು ಇಲ್ಲಿ ನೀಡಿದ್ದಾರೆ. ಈ ಕತೆಗಳು ಕೇವಲ ಮಕ್ಕಳ ಕತೆಗಳು ಮಾತ್ರ ಅಲ್ಲ. ನಮ್ಮ ನಿಮ್ಮೆಲ್ಲರ ಬಾಲ್ಯದ ಕತೆಗಳು ಹೌದು. ಈ ಕಾರಣದಿಂದಾಗಿ ಈ ಕೃತಿ ಹಿರಿ ಕಿರಿಯರಿಗೆ ಓದಲರ್ಹವಾದದ್ದು ಅನ್ನುವುದರಲ್ಲಿ ಸಂದೇಹವಿಲ್ಲ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.