Your cart is empty now.
ಕನ್ನಡಕ್ಕೆ : ಓ ಎಲ್ ನಾಗಭೂಷಣ್ ಸ್ವಾಮಿ
ಫಾದರ್ ಸೆರ್ಗಿಯಸ್
ಈ ಕಥೆ ಕೌಂಟ್ ಲಿಯೊ ಟಾಲ್ಸಾಯ್‌ನ ಕೊನೆಯ ಬರಹಗಳಲ್ಲೊಂದು. ಈ ಕಥೆಯ ರಚನೆ ೧೮೯೮ರಲ್ಲೇ ಮುಗಿದರೂ ಪ್ರಕಟಗೊಂಡದ್ದು ಮಾತ್ರ ಟಾಲ್ಪಾಯ್‌ನ ಮರಣಾನಂತರ, ೧೯೧೧ರಲ್ಲಿ, ಧರ್ಮದತ್ತ ಒಲವು ಬೆಳೆಸಿಕೊಂಡು ಬದುಕಿನ ನೀತಿಯನ್ನು ಅರಸಲು ತೊಡಗಿದಾಗ ಟಾಲ್ಪಾಯ್ ಬರೆದ ಕಥೆಗಳಲ್ಲಿ ಇದೂ ಒಂದು. ಡೆತ್ ಆಫ್ ಇವಾನ್ ಇಲಿಚ್ ಕಥೆ ಸಾವಿನ ತೊಡಕನ್ನು ಕ್ರೂಟ್ಸರ್ ಸೊನಾಟ ಕಥೆಯು ಕಾಮ ಮತ್ತು ಮದುವೆಯ ತೊಡಕನ್ನು ಕೆದಕಿ ನೋಡಿದರೆ ಈ ಕಥೆಯು ವಿರಕ್ಕಿ ಅಹಂಕಾರ ಮತ್ತು ವಿನಯದ ಸಮಸ್ಯೆಗಳನ್ನು ಪರೀಕ್ಷಿಸುತ್ತದೆ. ಅತ್ಯಂತ ಅಭಿಮಾನಿ, ಅಹಂಕಾರಿ ಯುವಕನೊಬ್ಬ ಸಮಾಜದಲ್ಲಿ ಉನ್ನತ ಸ್ಥಾನ ಪಡೆದು, ಪ್ರೀತಿಸಿದ ಹೆಣ್ಣಿನಿಂದ ಭ್ರಮನಿರಸನಗೊಂಡು ಸಂನ್ಯಾಸಿಯಾಗಿ, ಕಾಮವನ್ನು ಗೆದ್ದೆನೆಂದು, ಜನರ ಮಾರ್ಗದರ್ಶಕನೆಂದು ಹೆಮ್ಮೆಪಡುತ್ತಾ ಮತ್ತೆ ಎಡವಿ ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ ತೊಡಗಿ ಅನಾಮಧೇಯನಾಗಿ ಬದುಕು ಸಾಗಿಸುತ್ತಾನೆ. ಈ ಕಥೆಯನ್ನು ಟಾನ್ಸಾಯ್‌ನ ಬದುಕಿನ ಹೋರಾಟಗಳ ಪ್ರತಿಫಲನವೆಂದೂ ನೋಡಬಹುದು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.