Your cart is empty now.
ಪರಶುರಾಮ' - ಹರಿಯ ದಶಾವತಾರದಲ್ಲಿ ಆರನೆಯ ಅವತಾರ. ಮುನಿಕುಮಾರನಾಗಿ ಜನಿಸಿ, ಕ್ಷತ್ರಿಯಾಂತಕನಾಗಿ ಕ್ಷಾತ್ರವನ್ನು ಮೆರೆದು, ನೂತನ ಸೃಷ್ಟಿಯನ್ನೂ ಮಾಡಿದ ಪುರಾಣ ಲೋಕದ ಅಸೀಮ ಸಾಹಸಿ. ಆದರೂ ನಮ್ಮ ಜನಮಾನಸದಲ್ಲಿ ಈತ ಶ್ರೀರಾಮ ಶ್ರೀಕೃಷ್ಣ ರಷ್ಟು ಪ್ರಸಿದ್ಧನೂ ಜನಪ್ರಿಯನೂ ಅಲ್ಲವೆಂಬುದೂ ಗಮನಾರ್ಹ ವಿಚಾರ, ಮಾನವೀಯ ವ್ಯವಹಾರವೆಂದು ಪರಿಗಣಿಸುವುದಾದರೆ ತಂದೆಯ ಮರಣಕ್ಕೆ ಪ್ರತೀಕಾರವಾಗಿ ಒಂದು ಜನಾಂಗದ ಸಂಹಾರ ಕಾರ್ಯ ನಡೆಸಿದ ವಿಕ್ಷಿಪ್ತ ಪುರಾಣಗಳಲ್ಲಿ ಈತನ ಚಿತ್ರಣ ವಿಸ್ತಾರ ವಾಗಿಯೇ ಇದ್ದರೂ ಅದು ಲೋಕಮುಖಕ್ಕೆ ಪರಿಚಯವಾದುದು ತೀರಾ ಕಡಿಮೆ. ಜಮ ದಗ್ನಿಯ ಮರಣದ ಪ್ರತೀಕಾರ ಮುಖ್ಯವಾಗಿ ಉಳಿದ ಚರಿತ್ರೆಗಳು ಮರೆಯಾಗಿವೆ. ಈತನ ಸಾಹಸವು ಕೃತಯುಗದ ಉತ್ತರಭಾಗದ ಅದ್ಭುತಚರಿತ್ರೆ, ತ್ರೇತೆಯಲ್ಲಿ ಹೊಣೆಯನ್ನು ರಾಮನಿ ಗೊಪ್ಪಿಸಿ ತಪಸ್ವಿಯಾದ. ಮತ್ತೆ ದ್ವಾಪರದಲ್ಲಿ ಭೀಷ್ಮ, ದ್ರೋಣ, ಕರ್ಣ ಈ ಮೂವರು ಮಹಾ ಭಾರತದ ಯೋಧರಿಗೆ ಗುರುವಾಗಿ, ಮುಂದೆ ಒಂದು ಪ್ರಳಯಾಂತಕ ಯುದ್ಧದ ಘೋರಕ್ಕೆ ಈತನ ದಿವ್ಯಾಯುಧಗಳೇ ಬಳಕೆಯಾದವು ಎಂಬುದನ್ನು ಗಮನಿಸಿದರೆ ಪರಶುರಾಮ ಪುರಾಣಯುಗದ ಅವಿಜ್ಞಾನಿ ಎನ್ನಬಹುದೇನೋ, ಇದನ್ನು ಆತ ಸಾಧಿಸಲು ಮಾಡಿದ ಪ್ರಯತ್ನ, ಗಳಿಸಿದ ಯಶಸ್ಸು ಅದ್ಭುತವೇ. ಮಹಾದೇವನನ್ನು ಒಲಿಸಿ ಮಹಾಸ್ತ್ರಗಳನ್ನು ಸಾಧಿಸಿ ಕೊಂಡದ್ದು, ದೇವಾಸುರ ಯುದ್ಧದಲ್ಲಿ ಭಾಗಿಯಾಗಿ ಸುರರಿಗೆ ಧುರವಿಜಯವನ್ನು ತಂದು ಕೊಟ್ಟದ್ದು, ಈ ಸಂದರ್ಭದಲ್ಲಿ ಶಂಕರನಿಂದ ದೊರೆತ ಪರಶುವೆಂಬ ಆಯುಧ ಅವನ ಹೆಸರಿನ ಜೊತೆಗೆ ವಿಲೀನಗೊಂಡದ್ದು - ಎಲ್ಲವೂ ಮಹಾಸಾಹಸವೇ ಸರಿ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.