Your cart is empty now.
ರಾಷ್ಟ್ರ ರಾಜಕಾರಣದಲ್ಲಿ ಒಬ್ಬ ಜನಪ್ರತಿನಿಧಿ ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕೆಂದು ತೋರಿಸಿಕೊಟ್ಟವರಲ್ಲಿ ಶ್ರೀ ಎಸ್.ಎಂ.ಕೃಷ್ಣರವರು ಪ್ರಮುಖರು. ತಾವು ನಂಬಿದ ತತ್ವ, ಸಿದ್ಧಾಂತಗಳ ಕುರಿತಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಎದುರಾಳಿ ಪಕ್ಷಗಳ ನಾಯಕರ ಜೊತೆ ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಕರ್ನಾಟಕ ರಾಜಕಾರಣದಲ್ಲಿ ಎಸ್.ನಿಜಲಿಂಗಪ್ಪ ಮಾದರಿಯಾಗಿದ್ದರು. ಅವರ ಮಾರ್ಗದಲ್ಲಿ ನಡೆದ ರಾಜ್ಯದ ಮಹನೀಯರಲ್ಲಿ ಕೃಷ್ಣರವರು ಸಹ ಮುಖ್ಯರಾಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಸಾಮಾಜಿಕ ಸೇವೆಯನ್ನು ಮೂಲ ಗುರಿಯಾಗಿಸಿಕೊಂಡು ಬಾಳಿದ ಭವ್ಯ ಇತಿಹಾಸವಿರುವ ಕುಟುಂಬದಿಂದ ಬಂದ ಕೃಷ್ಣರವರು ಬಾಲ್ಯದಿಂದಲೂ ಪಡೆದ ಒಳ್ಳೆಯ ಶಿಕ್ಷಣ, ಸಂಗೀತ, ಕ್ರೀಡೆ, ಸಾಹಿತ್ಯ ಇವುಗಳ ಕುರಿತಾದ ಅಭಿರುಚಿಗಳಿಂದಾಗಿ ನಾಡಿನ ಶ್ರೇಷ್ಠ ರಾಜಕಾರಣಿಯಾಗಿ ಗುರುತಿಸಿಕೊಂಡರು. ಸುದೀರ್ಘ ಅರವತ್ತು ವರ್ಷಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಎಸ್.ಎಂ.ಕೃಷ ಅವರು ಎಂದಿಗೂ ತುಟಿ ಮೀರಿದ ಮಾತು ಅಥವಾ ಹದ್ದುಮೀರಿದ ವರ್ತನೆಗಳಿಂದ ಎಂದಿಗೂ ಗುರುತಿಸಿಕೊಂಡವರಲ್ಲ. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.
ಕಳೆದ ಐವತ್ತೈದು ವರ್ಷಗಳಿಂದ ಅಂದರೆ ನನ್ನ ಹನ್ನೆರೆಡನೆಯ ವಯಸ್ಸಿನಿಂದ ಅವರನ್ನು ಹತ್ತಿರದಿಂದ ನೋಡಿಕೊಂಡು ಬಂದ ನಾನು ಕೃಷ್ಣರವರು ತೊಂಬತ್ತೆರೆಡು ವರ್ಷಗಳನ್ನು ಮುಗಿಸಿದ ಸಂದರ್ಭದಲ್ಲಿ ಈ ಕೃತಿಯ ಮೂಲಕ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೀನಿ.
- ಡಾ.ಎನ್.ಜಗದೀಶ್ ಕೊಪ್ಪ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.