Your cart is empty now.
ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳಿಯನ್ನು ಬಿಗಿದು ಮರಕ್ಕೆ ಕಟ್ಟಿಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಹಲವು ಪ್ರಯತ್ನ ಮಾಡುತ್ತದೆ, ಅದರಲ್ಲಿ ವಿಫಲವಾಗುತ್ತದೆ. ಸಮಯ ಕಳೆಯುತ್ತದೆ.
ಆನೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದೇ ಮರಕ್ಕೆ, ಅದೇ ಸರಪಳಿಯಲ್ಲಿ ಆನೆಯನ್ನು ಬಂಧಿಸಿ ಇಡಲಾಗಿದೆ. ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತು ಬಿಸಾಡಬಹುದು. ಆದರೂ ಅದು ಏನೂ ಮಾಡದೆ ಸರಪಳಿ ಕಟ್ಟನ್ನು ಒಪ್ಪಿಕೊಂಡು ಬಂಧಿಯಾಗಿದೆ. ಈ ಕಥೆಯನ್ನು ನಾವೆಲ್ಲರೂ ಸ್ವಲ್ಪ ನಮ್ಮ ಬದುಕಿಗೆ, ವೆಲ್ತ್ ಕ್ರಿಯೇಷನ್ ಬಗ್ಗೆ ತಳುಕು ಹಾಕಿ ನೋಡೋಣವೇ?
ನಮ್ಮಲ್ಲಿನ ವ್ಯವಸ್ಥೆ, ಹಣಕಾಸು ಬಗೆಗಿನ ಭಾವನೆಗಳು ಸದಾ ನಮ್ಮನ್ನು ಬಡತನದಲ್ಲಿರಿಸುವ ಅಂಶಗಳನ್ನು ಹೊಂದಿವೆ. ನಮ್ಮನ್ನು ಬಡವರನ್ನಾಗೇ ಉಳಿಸಲು ನಡೆದಿದೆ ಹುನ್ನಾರ! ಶ್ರೀಮಂತರಾಗಲು ಈ ಪುಸ್ತಕದಲ್ಲಿದೆ ಪರಿಹಾರ!! ಹೌದು, ನೀವು ನಿಜಕ್ಕೂ ಇಲ್ಲಿನ ಅಂಶಗಳನ್ನು ಓದಿ, ಅಳವಡಿಸಿಕೊಂಡಿದ್ದೇ ಆದರೆ, ಚಿಂತನೆಗಳನ್ನು ಬದಲಿಸಿಕೊಂಡಿದ್ದೇ ಆದರೆ, ನಮ್ಮ ಹಣೆಬರಹವನ್ನು ಕೂಡ ಬದಲಿಸಿಕೊಳ್ಳಬಹುದು. ಆನೆಗೆ ಮರವನ್ನು ಕಿತ್ತೊಗೆಯುವ ಶಕ್ತಿ ಇದ್ದರೂ ಅದು ತನ್ನ ಶಕ್ತಿಯನ್ನು ಬಳಸಿಕೊಳ್ಳದ ಹಾಗೆ ನಾವು ಕೂಡ ಬಡತನವನ್ನು ಕಿತ್ತೋಡಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಪ್ರಯತ್ನ ಬೇಕು ಅಷ್ಟೆ.
ಜಗತ್ತಿನಲ್ಲಿ ಹೆಚ್ಚು ಜನರು ಬಡವರಾಗೇ ಉಳಿಯಲು ಇನ್ನೊಂದು ಪ್ರಮುಖ ಕಾರಣವೇನು ಗೊತ್ತೇ? ಹಣವನ್ನು ನಾವು ಸಬ್ ಜೀರೋ ಸಂ ಗೇಮ್ ಎನ್ನುವಂತೆ ನೋಡುತ್ತೇವೆ. ಅಂದರೆ ಒಬ್ಬ ಲಾಭಗಳಿಸಲು, ಇನ್ನೊಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವುದು ಸಬ್ ಜೀರೋ ಸಂ ಗೇಮ್ ಎನ್ನಿಸಿಕೊಳ್ಳುತ್ತದೆ. ವಾಣಿಜ್ಯ ಕಲಿತವರಲ್ಲೂ ಇದರ ಬಗ್ಗೆ ನಿಖರತೆ, ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಹಣ, ವೆಲ್ತ್ ನಾವು ಸೃಷ್ಟಿಸಬಹುದು. ಅದಕ್ಕೆ ಒಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ ಎಳವೆಯಿಂದ ನಮ್ಮಲ್ಲಿ ಈ ಅಂಶವನ್ನು ತುಂಬಲಾಗಿದೆ. ಅದರಿಂದ ನಾವು ಪ್ರಜ್ಞಾಪೂರ್ವಕವಾಗಿ ಹೊರಬರಬೇಕಿದೆ.
ನೆನಪಿರಲಿ: ಹಣವೆನ್ನುವುದು ಸಬ್ ಜೀರೋ ಸಂ ಗೇಮ್ ಅಲ್ಲವೇ ಅಲ್ಲ. ಹಣ, ವೆಲ್ ಸೃಷ್ಟಿಸಬಹುದು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.