ತಿಚ್ ನಾತ್ ಹಾನ್ ಅವರ ಮಾತು, ಪ್ರವಚನ, ಉಪದೇಶಗಳನ್ನು ಆಧರಿಸಿದ 'ಮಿರಾಕಲ್ ಆಫ್ ಮೈಂಡ್ ಫುಲ್‌ನೆಸ್' ಕೃತಿಯ ಅನುವಾದವಾಗಿರುವ ಈ ಪುಸ್ತಕವು ಆಧುನಿಕ ಮನುಷ್ಯನ ಕೆಲವು ಆಧ್ಯಾತ್ಮಿಕ ಗೊಂದಲಗಳಿಗೆ ಸರಳ ಉತ್ತರವನ್ನು ನೀಡಬಲ್ಲುದು. 'ಮೈಂಡ್ ಫುಲ್‌ನೆಸ್" ಎಂಬ ಪದವನ್ನು ರಾಜಮಾನೆ 'ಮನೋಮಗ್ನತೆ' ಎಂದು ಟಂಕಿಸಿದ್ದಾರೆ. ಈ ಶಬ್ದದ ಮೂಲಕವೇ ಕೃತಿಯಲ್ಲಿನ ಅನುವಾದದ ಗುಣಾತ್ಮಕತೆ ತಿಳಿಯುತ್ತದೆ. ಇಲ್ಲಿನ ಭಾಷೆ ಸರಳವಾಗಿದೆ. ಓದುಗರು ಕೃತಿಯಲ್ಲಿ ಕಣ್ಣಾಡಿಸತೊಡಗಿದ್ದೇ ತಲ್ಲೀನರಾಗುವ ಗುಣವನ್ನು ಪಡೆದಿದೆ.
ಕ್ಷುದ್ರ ವಿಚಾರಗಳಲ್ಲಿ ತಲ್ಲೀನವಾಗಿರುವ ಮನಸ್ಸಿಗೆ ಸಂವೇದನಾಶೀಲತೆ ತುಂಬಿ ಎಚ್ಚರಗೊಳಿಸುವುದು, ಕ್ಷುಲ್ಲಕ ಕೆಲಸವನ್ನು ದೈವಿಕತೆಗೇರಿಸಿ ಅದನ್ನು ಸಾರ್ಥಕಗೊಳಿಸುವ ವಿಧಾನವನ್ನು ಹುಡುಕುವುದು, ಎಲ್ಲ ಇಂದ್ರಿಯಗಳನ್ನು ನಿಧಾನ ಹುರಿಗೊಳಿಸಿ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು ಹಾನ್‌ರ ವಿಧಾನ. ಅಂದರೆ, ಅವರ ಆಧ್ಯಾತ್ಮಿಕ ಚಿಕಿತ್ಸಾ ವಿಧಾನದಲ್ಲಿ ನಡೆ-ನುಡಿ, ಕಾಯ-ಕ್ರಿಯೆ, ಎಚ್ಚರ-ನಿದ್ರೆ ಇತ್ಯಾದಿಗಳು ಬೇರೆ ಬೇರೆಯಲ್ಲ.
-ಕೇಶವ ಮಳಗಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.