Your cart is empty now.
ಗ್ರೀಸ್ ದೇಶದಲ್ಲಿ ಜನಿಸಿದ್ದ ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟೀಸನ ಕುರಿತ ಕೃತಿ-'ಸಾಕ್ರೆಟೀಸನ ಕೊನೆಯ ದಿನಗಳು’ ಸಾಕ್ರೆಟೀಸನ ತಂದೆ ಒಬ್ಬ ಶಿಲ್ಪಿ ಹೆಸರು ಸಾಫ್ರೋನಿಸ್ಕಸ್, ಅವನ ತಾಯಿ ಫೀನಾರಿಟಿ. ಇವಳು ಸೂಲಗಿತ್ತಿ. ಸಾಕ್ರೆಟೀಸನು ಸ್ವಲ್ಪ ದಿನ ಶಿಲ್ಪವೃತ್ತಿಯನ್ನು ಅಭ್ಯಾಸ ಮಾಡಿದ್ದನು. ಕ್ರಿ.ಪೂ. 432ರಿಂದ ಈಚೆಗೆ ಪೊಟಿಡಿಯ, ಡೀಲಿಯಂ, ಆಂಫಿಪೊಲಿಸ್ ಎಂಬ ಸ್ಥಳಗಳಲ್ಲಿ ನಡೆದ ಯುದ್ಧಗಳಲ್ಲಿ ಸಾಕ್ರಟೀಸನು ಸೈನಿಕನಾಗಿ ಯುದ್ಧ ಮಾಡಿದ್ದನು. ಆಗ ಅವನು ಅಸಾಧಾರಣವಾದ ಧೈರ್ಯ ಪರಾಕ್ರಮಗಳನ್ನೂ ಕಷ್ಟಸಹಿಷ್ಣುತೆಯನ್ನೂ ತೋರಿದ್ದಲ್ಲದೆ, ಪೊಟಿಡಿಯ ಯುದ್ಧದಲ್ಲಿ ಗಾಯಪಟ್ಟು ಶತ್ರುಗಳ ಕೈಯಿಂದ ಹತನಾಗುವುದರಲ್ಲಿದ್ದ ಆಲ್ಕಿಬಿಯೆಡೀಸನ ಪ್ರಾಣವನ್ನುಳಿಸಿದನು. ಸುಮಾರು ಇದೇ ಕಾಲದಲ್ಲಿ ಅರಿಸ್ಟೋಫೆನೀಸನು ’ಮೇಘಗಳ” ಎಂಬ ಹಾಸ್ಯ ನಾಟಕ ಬರೆದು ಅದರಲ್ಲಿ ಸಾಕ್ರೆಟೀಸನನ್ನು ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿಮಾಡಿದನು. ಆ ನಾಟಕದಲ್ಲಿ ಬರುವ ಸಾಕ್ರೆಟೀಸನು ಒಬ್ಬ ಭೌತಶಾಸ್ತ್ರಾಭ್ಯಾಸಿ. ಸ್ಯೂಸ್ ಮೊದಲಾದ ದೇವತೆಗಳು ಸ್ವರ್ಗಚ್ಯುತರಾದರೆಂದೂ, ಅವರ ಸ್ಥಾನದಲ್ಲಿ ಮೇಘ, ಈಥರ್ ಮೊದಲಾದ ದೇವತೆಗಳು ಆಳುತ್ತಿರುವರೆಂದೂ, ಅವನು ಜನರಿಗೆ ತಿಳಿಸುತ್ತಾನೆ. ಆದರೆ, ನಿಜವಾದ ಸಾಕ್ರೆಟೀಸನಿಗೆ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಪ್ರಕೃತಿಯ ಮತ್ತು ವಿಶ್ವದ ಸ್ವರೂಪವನ್ನು ತಿಳಿಯುವುದು ಹಾಗಿರಲಿ. ’ನಿನ್ನನ್ನು ನೀನು ತಿಳಿದಿ ಕೋ” ಎಂದು ಅವನು ಬೋಧಿಸುತ್ತಿದ್ದನು. ಇಂತಹ ತತ್ವಜ್ಞಾನಿ ಸಾಕ್ರೆಟೀಸನ ಕೊನೆಯ ದಿನಗಳ ಕುರಿತು ಈ ಕೃತಿ ರಚಿತವಾಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.