Your cart is empty now.
Sarala Pampabharata
by L Basavaraju (Author),
'ನ ಭೂತೋ ನ ಭವಿಷ್ಯತಿ' ಎಂಬ ರೀತಿಯಲ್ಲಿ, ಪ್ರಾಚೀನ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಂತಿರುವ 'ಪಂಪಭಾರತ ಮತ್ತು 'ಆದಿಪುರಾಣ' ಮಹಾಕಾವ್ಯಗಳನ್ನು ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದವನು ಪಂಪ, 'ಇವನಾರವನಿವನಾರವ ನಂದು ಸುಮಾರು ಒಂದು ಸಾವಿರ ವರ್ಷಗಳಷ್ಟು ದೀರ್ಘಕಾಲ ಸೋಟೆ ತಿವಿಸಿಕೊಂಡಿದ್ದು ವಿದ್ವಜ್ಜನರ ಅನಾದರಕ್ಕೊಳಗಾಗಿದ್ದ ಪಂಪನ ಈ ಕೃತಿಗಳನ್ನು, ಅವು ಉತ್ತಮೋತ್ತಮ ಕಾವ್ಯಗಳಾಗಿದ್ದಾಗ್ಯೂ, ಉದ್ದಾಮ ಪಂಡಿತರು ಮತ್ತು ವಿದ್ವಾಂಸರ ಹೊರತಾಗಿ ಇತರ ಸಾಹಿತ್ಯಪ್ರಿಯರು ಓದಲಾಗುತ್ತಿರಲಿಲ್ಲ. ಓದುವದರಿಲ್ಲದೆ ಲೈಬ್ರೆರಿಗಳ ಕಪಾಟುಗಳಲ್ಲೇ ಭದ್ರವಾಗುಳಿದುಬಿಟ್ಟಿದ್ದ ಈ ಪರಿಸ್ಥಿತಿಯನ್ನು ಗಮನಿಸಿದ ಡಾ. ಎಲ್. ಬಸವರಾಜು ಅವರು ಅದಕ್ಕೊಂದು ಪರಿಹಾರ ಮಾರ್ಗವನ್ನು ಶೋಧಿಸಿ, ಹೊಸ ಯುಗದ ಹೊಸ ಪೀಳಿಗೆಯ ಓದುಗರ ಆಪೇಕ್ಷೆ ಹಾಗೂ ನಿರೀಕ್ಷೆಗಳಿಗೆ ಸ್ಪಂದಿಸಿ, ಈ ಮಹಾಕಾವ್ಯಗಳನ್ನು ಸರಳಗೊಳಿಸುವ ಸಹೃದಯ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡುದರ ಫಲಶ್ರುತಿಯೇ 'ಸರಳ ಸಂಪಭಾರತ',
ಪಂಪನ 'ಸಮಸ್ತ ಭಾರತ'-ಪಂಪ ತನ್ನ 'ಭಾರತ'ಕ್ಕೆ ಇಟ್ಟ ಹೆಸರೇ ಇದು-ಸಾವಿರಾರು ವರ್ಷಗಳಷ್ಟು ಹಿಂದಿನ ಹಳಗನ್ನಡದ ಗದ್ಯಪದ್ಯಗಳನ್ನು ಸಂಧಿ ಸಮಾಸ ಬಿಡಿಸಿ, ಅರ್ಥ-ಭಾವ-ಧ್ವನಿಯ ಅನುಸಾರ ಬಗೆಬಗೆಯಾಗಿ ಪದ-ಪಾದ ವಿನ್ಯಾಸದಲ್ಲಿ ಜೋಡಿಸಿಟ್ಟು, ನಮ್ಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ಚಾರಿತ್ರಿಕ ಇತಿಹಾಸವನ್ನೂ ಹೃದಯವಂತಿಕೆಯನ್ನೂ ಸಾಮರಸ್ಯವನ್ನೂ ಕನ್ನಡ ಸಾಹಿತ್ಯಪ್ರಿಯರು ಗ್ರಹಿಸುವಂತೆ ಡಾ. ಬಸವರಾಜು ಅವರು ರಚಿಸಿರುವ ಕೃತಿ 'ಸರಳ
ಪಂಪಭಾರತ'.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.