Free Shipping Charge on Orders above ₹300

Shop Now

Sanna Kathe | Akruti Mattu Ashaya Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 10 left in stock
ಓದುಗರಿಗೆ ಭಾಷೆ, ಸಂಸ್ಕೃತಿ, ಅಸ್ಮಿತೆಗಳ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ಒದಗಿಸುವ ಸಾಹಿತ್ಯ ಪ್ರಕಾರವೆಂದರೆ ಸಣ್ಣಕತೆ, ನಮ್ಮ ಅನುಭವಗಳ ಸರಹದ್ದಿನಾಚೆಗೆ ನಮ್ಮನ್ನು ಕರೆದೊಯ್ಯುವ ಈ ಪ್ರಕಾರ ನಮಗೆ ಕತೆಗಾರರ ಕಣ್ಣುಗಳ ಮೂಲಕ ಜಗತ್ತನ್ನು ನೋಡಲು ನೆರವಾಗುವ ಪ್ರಕಾರ, ಈ ಸಂಕಲನದಲ್ಲಿರುವ ಲೇಖನಗಳಲ್ಲಿ ಸಣ್ಣಕತೆಯ ಆಕೃತಿ, ಆಶಯಗಳನ್ನು ಕುರಿತು ತಮ್ಮ ವಿಚಾರಗಳನ್ನು ಮಂಡಿಸಿರುವ ನಮ್ಮ ಮಹತ್ವದ ಕತೆಗಾರರು ಹಾಗೂ ವಿಮರ್ಶಕರು ಯಾವೆಲ್ಲ ಅಂಶಗಳಿಂದ ಸಣ್ಣಕತೆಯಾಗುತ್ತದೆ ಎಂದು ವಿವರಿಸುತ್ತ ಈ ಪ್ರಕಾರಕ್ಕೆ ಸಂಬಂಧಿಸಿದ ಬಹುಪಾಲು ಅಂಶಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಕಥಾರಚನೆಯ ಪ್ರಕ್ರಿಯೆಗಳನ್ನು ಚರ್ಚಿಸಿದ್ದಾರೆ. ದ.ರಾ. ಬೇಂದ್ರೆ, ರಂ.ಶ್ರೀ, ಮುಗಳಿ, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ಗಿರಡ್ಡಿ ಗೋವಿಂದರಾಜ, ಯಶವಂತ ಚಿತ್ತಾಲ,
ನಟರಾಜ ಹುಳಿಯಾರ್, ಎಂ.ಎಸ್. ಶ್ರೀರಾಂ, ಜಯಂತ ಕಾಯ್ಕಿಣಿ, ಹೀಗೆ ಇಲ್ಲಿರುವ ಲೇಖಕರು ಒಬ್ಬಿಬ್ಬರಲ್ಲ.
ಐದು ಭಾಗಗಳಿರುವ ಈ ಸಂಕಲನ ಇದು. ಮೊದಲಭಾಗದಲ್ಲಿ ಸಣ್ಣಕತೆಯನ್ನು ಹಾಗೂ ಅತಿಸಣ್ಣಕತೆಯನ್ನು ಕುರಿತ ಲೇಖನಗಆದ್ದರೆ ಎರಡನೆಯ ಭಾಗದಲ್ಲಿ ಸಣ್ಣಕತೆ ಬರೆಯುವವರ ಸ್ವಾನುಭವ ವಿಶೇಷಗಳವೆ. ಮೂರನೆಯ ಭಾಗದಲ್ಲಿರುವುದು ಸಣ್ಣಕತೆಯ ಬಗ್ಗೆ ಆಳವಾಗಿವಿಚಾರ ಮಾಡಿದ ಮೂವರು ಪಾಶ್ಚಾತ್ಯ ಕತೆಗಾರರ ಮುಖ್ಯ ಲೇಖನಗಳ ಸಾರಾಂಶ, ನಾಲ್ಕನೆಯ ಭಾಗದಲ್ಲಿ ಕತೆಯನ್ನು ಕುಲಿತ ಕತೆಯೇ ಆಗಿರುವ ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ' ಎಂಬ ಕತೆಯೂ ಅದರ ವಿಮರ್ಶಾತ್ಮಕ ಒಳನೋಟವೂ ಇವೆ. ಐದನೆಯ ಭಾಗ ಕನ್ನಡದ ಹಾಗೂ ವಿದೇಶೀ ಲೇಖಕ ಲೇಖಕಿಯರು ಬೇರೆ ಬೇರೆ ಸಂದರ್ಭಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೀಸಲು.
ಸಣ್ಣಕತೆಯನ್ನು ಕುರಿತು ಇದುವರೆಗೂ ಇದ್ದ ಬಹುದೊಡ್ಡ ಕೊರತೆಯನ್ನು ನೀಗಿಸಿರುವ ಈ ಪುಸ್ತಕ ಸಣ್ಣಕತೆಯ ಪ್ರಕಾರವನ್ನು ಅಧ್ಯಯನ ಮಾಡುವವರಿಗಷ್ಟೇ ಅಲ್ಲ, ಕತೆಗಾರಲಿಗೂ ಉಪಯುಕ್ತ. ಅಷ್ಟೇ ಅಲ್ಲ, ಕಥಾ ಕಮ್ಮಟಗಳಲ್ಲಿ ಮುಖ್ಯ ಪಠ್ಯವಾಗುವುದಕ್ಕೂ ಅತ್ಯಂತ ಸೂಕ್ತ.

Guaranteed safe checkout

Sanna Kathe | Akruti Mattu Ashaya
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading