Your cart is empty now.
ಲೇಖಕರು: ಶಿವಕುಮಾರ್ ಮಾವಲಿ, Shivakumar Mavali
ಇಲ್ಲ ಪ್ರೇಮಪತ್ರಗಳನ್ನು ಬರೆದು ಕೊಡಲಾಗುತ್ತದೆ
ಎಂದು ಬೋರ್ಡ್ ನೇತು ಹಾಕಿಕೊಂಡು ಕೂತವನ
ಬಳಿ ಯಾರೊಬ್ಬರೂ ಸುಆಯಅಲ್ಲ. ಲೋಕದಲ್ಲಿ
ಎಷ್ಟೊಂದು ಪ್ರೇಮವಿದೆ, ಎಷ್ಟೊಂದು ಪ್ರೇಮಿಗಳಿದ್ದಾರೆ,
ಹಾಗಿದ್ದೂ ಯಾಕೆ ಯಾರೂ ತನ್ನ ಬಳಿ ಬರುತ್ತಿಲ್ಲ?
ಎಲ್ಲರಿಗೂ ಖುದ್ದಾಗಿ ಪ್ರೇಮಪತ್ರಗಳನ್ನು
ಬರೆಯುವಷ್ಟು ಸಮಯ ಮತ್ತು ಸಂಯಮ
ಇರುವುದಾದರೂ ಸಾಧ್ಯವೆ? ಎಂದು ಯೋಚಿಸಿ ತನ್ನ
ಲೆಕ್ಕಾಚಾರ ಬುಡಮೇಲಾಗುತ್ತದೇನೋ ಅನ್ನಿಸಿ,
ಇನ್ನೇನು ಈ ಆಫೀಸು ಮುಚ್ಚುವುದೇ ಒಳ್ಳೆಯದೇನೋ
ಎಂಬ ತೀರ್ಮಾನಕ್ಕೆ ಬರುವವನಿದ್ದ. ಅಷ್ಟರಲ್ಲಿ,
ಮೂವತ್ತರ ಆಸುಪಾಸಿನ ಯುವತಿಯೊಬ್ಬಳು ಆ
ಆಫೀಸಿಗೆ ಬಂದು, ಒಂದು ಪ್ರೇಮ ಪತ್ರ ಬರೆದು
ಕೊಡಬೇಕೆಂದು ಬೇಡಿಕೆಯಿಟ್ಟು...
***
'ಪ್ರೇಮಕವಿಗೆ ನಮಸ್ತಾರ' ಎಂದೆ.
'ಕವಿಗೆ ನಮಸ್ಕಾರ ಎಂದರೆ ಸಾಕು, ಪ್ರೇಮವಿಲ್ಲದವನು
ಕವಿ ಹೇಗಾಗುತ್ತಾನೆ?' ಎಂಬ ದೃಢವಾದ ಉತ್ತರ
ಬಂತು. ನಾನದನ್ನು 'ಪ್ರೇಮವಿಲ್ಲದವನು ಮನುಷ್ಯ
ಹೇಗಾಗುತ್ತಾನೆ?” ಎಂದೇ ಕೇಳಿಸಿಕೊಂಡೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.