Free Shipping Charge on Orders above ₹400

Shop Now

Praacheena-Madhyakaaleena Karnatakadalli Rajyaprabhutva ( Siddantheekaranagala Paraamarshe ) Sale -10%
Rs. 144.00Rs. 160.00
Vendor: BEETLE BOOK SHOP
Type: PRINTED BOOKS
Availability: 9 left in stock

ಅಶೋಕ ಶೆಟ್ಟ‌ರ್ ಅವರ ಈ ಪುಸ್ತಕ ಭಾರತದ ಇತಿಹಾಸದ ಸಂದರ್ಭದಲ್ಲಿ ರಾಜ್ಯ ರಚನೆಯ ಮಾದರಿಗಳು ಮತ್ತು ಪ್ರಭುತ್ವದ ಸ್ವರೂಪದ ಕುರಿತಾಗಿ ನಡೆದಿರುವ ಹಲವು ಚರ್ಚೆಗಳ ಸ್ಥೂಲ ಅವಲೋಕನವನ್ನೂ ವಿಶ್ಲೇಷಣೆಯನ್ನೂ ನೀಡುತ್ತದೆ, ರಾಜ್ಯ ರಚನೆಯ ಕುರಿತ ವಿವಿಧ ಸಿದ್ಧಾಂತಗಳು ಕರ್ನಾಟಕದ ಚರಿತ್ರೆಗೆ ಅನ್ವಯಿಸಲ್ಪಟ್ಟ ಕ್ರಮವನ್ನು ವಿಮರ್ಶಾತ್ಮಕವಾಗಿ ವಾಗಿ ಪರಿಶೀಲಿಸುತ್ತಲೇ ಕರ್ನಾಟಕ ಇತಿಹಾಸದ ಅಧ್ಯಯನದಲ್ಲಿ ಅ ಕುರಿತ ಚರ್ಚೆಯನ್ನು ಗಮನಿಸುವ ಅಗತ್ಯದ ಮೇಲೆ ಈ ಕೃತಿ ಒತ್ತು ನೀಡುತ್ತದೆ. ಈ ಅರ್ಥದಲ್ಲಿ ಇದೊಂದು ಮಹತ್ವದ ಕೃತಿ. ಕನ್ನಡದ ಸಂದರ್ಭದಲ್ಲಿ ಇಂಥ ಚರ್ಚೆಗಳು ಸೀಮಿತವಾಗಿ ಮಾತ್ರ ನಡೆದಿವೆ. ಅಲ್ಲಿಯೂ ಪರಿಚಯಾತ್ಮಕ ಬರಹಗಳದ್ದೇ ಮೇಲುಗೈ ರಾಜಕೀಯ ಸಂರಚನೆ ಹಾಗೂ ಪ್ರಕ್ರಿಯೆಗಳ ಅಧ್ಯಯನ ನಾಡಿನ ಇತಿಹಾಸಕಾರರ ಕಾಳಜಿಯನ್ನು ವಿರಳವಾಗಿ ಮಾತ್ರ ಸೆಳೆದಿದೆ. ಸಂಕೀರ್ಣವಾದ ಚಾರಿತ್ರಿಕ ಬೆಳವಣಿಗೆಗಳನ್ನು ಗ್ರಹಿಸಲು ವಿವಿಧ ಪ್ರಕ್ರಿಯೆಗಳ ಅಂತಕ್ಷಂಬಂಧಗಳನ್ನು ಅರ್ಥೈಸಿಕೊಳ್ಳುವದರ ಮಹತ್ವವನ್ನು ಒತ್ತಿ ಹೇಳಬೇಕಿಲ್ಲ. ಆದರೆ ಇಂದಿಗೂ ಕರ್ನಾಟಕದಲ್ಲಿ ರಾಜಕೀಯ ಪರಿತ್ರೆ ಎಂಬುದು ರಾಜ್ಯ ರಚನೆ, ರಾಜಕೀಯ ಪ್ರಕ್ರಿಯೆಗಳು ಮತ್ತು ಅದಕ್ಕೆ ಸಂವಾದಿಯಾಗಿ ಜರುಗುತ್ತಿದ್ದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಕ್ರಿಯೆಗಳ ನಿರೂಪಣೆಯಾಗಿರದೇ ರಾಜಮನೆತನಗಳ ಇತಿಹಾಸ ಎಂಬಂತಾಗಿದೆ. ಹೀಗಾಗಿ ಅಶೋಕ ಶೆಟ್ಟರ್ ಅವರ ಈ ಹೊತ್ತಿಗೆ ವಿಶಿಷ್ಟವಾಗಿದೆ ಹಾಗೂ ಕನ್ನಡದ ಸಂದರ್ಭದಲ್ಲಿ ಹೊಸ ಪ್ರಯತ್ನವಾಗಿದೆ ಎನ್ನಬಹುದು. ಭಾರತದ ಚರಿತ್ರ ಲೇಖನಕ್ಕೆ ಸಂಬಂಧಿಸಿ ರಾಜ್ಯದ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿರುವ ವಸಾಹತುಶಾಹಿ ಮತ್ತು ರಾಷ್ಟ್ರೀಯವಾದಿ ಚರಿತ್ರ ಲೇಖನ ಪರಂಪರೆಯ ಘಟಕಗಳಿಗೆ ಪೂರಕವಾಗಿ ಆ ಕುರಿತ ವಿವರವಾದ ಚರ್ಚೆಯೂ ಇಲ್ಲದ್ದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದೆ.

Guaranteed safe checkout

Praacheena-Madhyakaaleena Karnatakadalli Rajyaprabhutva ( Siddantheekaranagala Paraamarshe )
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading