Your cart is empty now.
ಮಕ್ಕಳಿಗಾಗಿ ಬರೆಯುವುದೆಂದರೆ... ಮಕ್ಕಳ ಲೋಕದಲ್ಲಿ ಓಡಾಡುವುದು, ಮಕ್ಕಳ ಧ್ವನಿಯನ್ನು ಕೇಳುವುದು, ಮಕ್ಕಳ ಜಗತ್ತಿನಲ್ಲಿ ಮಕ್ಕಳ `ಕಣೋಟದಿಂದಲೇ ನೋಡುವುದು, ಮಕ್ಕಳ ಖುಷಿಯನ್ನು ಹಿಗ್ಗಿಸುತ್ತ ಅವರನ್ನು ಅರಿವಿಲ್ಲದೆಯೇ ಒಳ್ಳೆಯದರ ಕಡೆಗೆ ಕೊಂಡೊಯ್ಯುವುದಕ್ಕೆ ಏನೆಲ್ಲಾ ಸಿದ್ಧತೆಗಳೊಂದಿಗೆ ಮಕ್ಕಳ ಪ್ರೀತಿಯಲ್ಲಿ ಅರಳುವುದೇ ಆಗಿರುತ್ತದೆ. ಡಾ. ನಾಗ ಎಚ್. ಹುಬ್ಬಿಯವರು ನನಗೆ ಅಂತರ್ಜಾಲದ ಮೂಲಕವೇ ಪರಿಚಿತರಾದ ಆತ್ಮೀಯ ಸ್ನೇಹಿತರು. ಅವರು ಮಕ್ಕಳಿಗಾಗಿಯೂ ಕಥೆ ಬರೆಯುತ್ತಾರೆ ಎನ್ನುವುದು ನನಗೆ ಖುಷಿಯ ಸಂಗತಿ. ಇರಲಿ...ಡಿಪ್ಲೊಮಾ ಪದವೀಧರರಾಗಿದ್ದಲ್ಲದೇ ಕನ್ನಡದಲ್ಲಿ ৯০.৯. ಪತ್ರಿಕೋದ್ಯಮದಲ್ಲಿ ಎಂ.ಎ. ಪಿಎಚ್.ಡಿಯನ್ನು ಮಾಡಿರುವ ಇವರು ದೂರದ ರಾಂಚಿಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ. ವಿವಿಧ ರಾಜ್ಯಗಳ ಆದಿವಾಸಿಗಳ ತಾಂಡಾಗಳಿಗೆ ಭೆಟ್ಟಿ ಕೊಟ್ಟು ಅವರ ಕುರಿತಾಗಿ ಅಧ್ಯಯನ ಮಾಡುವ ಹವ್ಯಾಸ ಹೊಂದಿರುವ ಇವರು ಅನುವಾದಕರಾಗಿ, ಟಿವಿ ವಾಹಿನಿ, ಪತ್ರಿಕೆ ಮುಂತಾದವುಗಳ ಉಪ ಸಂಪಾದಕರಾಗಿ, ಪ್ರಮುಖ ವರದಿಗಾರರಾಗಿ ಅಪಾರ ಅನುಭವ ಉಳ್ಳವರೂ ಆಗಿದ್ದಾರೆ. ಕೆಲವು ಅನುವಾದಿತ ಹಾಗೂ ಸ್ವಂತ ಕೃತಿಗಳನ್ನು ಪ್ರಕಟಿಸಿ ಓದುಗರಿಗೆ ಪರಿಚಿತರಾಗಿದ್ದಾರೆ. ದೂರದ ಝಾರ್ಖಂಡ್ ರಾಜ್ಯದಲ್ಲಿದ್ದೂ ಕನ್ನಡದ ಪ್ರೀತಿಯನ್ನು ಹೃದಯದಲ್ಲಿಟ್ಟುಕೊಂಡಿರುವ ನಾಗ ಅವರು ಈಗ ಮಕ್ಕಳ ಕಥಾ ಸಂಕಲನವೊಂದನ್ನು ರೂಪಿಸಿದ್ದಾರೆ.
ಸ್ನೇಹಿತರೆ, ಈ ಕಥಾಸಂಕಲನ ಕನ್ನಡದ ಮಕ್ಕಳ ಒಲವನ್ನು ಪಡೆಯಲಿ ಹಾಗೂ ನಾಗ ಅವರಿಂದ ಮತ್ತಷ್ಟು ಕಥೆಗಳು ಬಂದು ನಮ್ಮೆಲ್ಲರ ಖುಷಿ
ಹೆಚ್ಚಿಸಲಿ ಎಂದು ಆತ್ಮೀಯವಾಗಿ ಹಾರೈಸುತ್ತೇನೆ.
ತಮ್ಮಣ್ಣ ಬೀಗಾರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.