Your cart is empty now.
ಒಂದು ಮಸಾಜ್ ಪಾರ್ಲರ್ ಕಥೆ ' ಪ್ರೇಮಕಥೆ ಮಾತ್ರವಲ್ಲ, ಅದು ನಿತ್ಯದ ಸಂಬಂಧಗಳ ಕಥೆಯಾಗಿದೆ. ಅದು ಆಧುನಿಕ ಸಭ್ಯತೆಯಲ್ಲಿರುವ ಕುಟುಂಬಗಳಿಗೆ ಒಂದು ಎಚ್ಚರಿಕೆಯ ಗಂಟೆಯೂ ಆಗಿದೆ. ಎಚ್ಚರಿಕೆ ಎಂದರೆ, ನ್ಯಾನ್ಸಿ ಮೂವರು ಪತಿಯರನ್ನು ಬದಲಿಸಿದರೂ,ಅವಳಿಗೆ ಯಾರಲ್ಲೂ ಸಂತಸ ಲಭಿಸುವುದಿಲ್ಲ; ಪ್ರತಿ ಬಾರಿ ತನ್ನ ಹೊಸ ಪತಿಯ ಹೋಲಿಕೆಯಲ್ಲಿ ತನ್ನ ಮೊದಲ ಪತಿಯೇ ಲೇಸೆಂದು ಅನಿಸುತ್ತದೆ. ಮೂವರನ್ನು ಬದಲಿಸಿದ ನಂತರ, ತನ್ನ ಅಹಂಕಾರವೇ ಈ ಅಗಲಿಕೆಗೆ ಕಾರಣವೆಂಬ ಅರಿವಾಗುತ್ತದೆ. ತಾನು ತನ್ನ ಮೊದಲ ಪತಿಯೊಂದಿಗೇ, ಅಲ್ಪ-ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ,ಮೂವರನ್ನು ಬದಲಿಸಬೇಕಿರಲಿಲ್ಲ ಹಾಗೂ ಪದೇ - ಪದೇ ವಿಚ್ಚೇದನದ ದುರಂತದಿಂದ ಸಾಗಬೇಕಿರಲಿಲ್ಲ ಎಂದೂ ಮನಗಾಣುತ್ತಾಳೆ. 'ಒಂದು ಮಸಾಜ್ ಪಾರ್ಲರ್ ಕಥೆ' ಭಾರತೀಯ ಮಹಿಳೆಯೊಬ್ಬಳ ಸೋಲಿನ ಕಥೆಯಷ್ಟೇ ಆಗದೆ ಗೆಲುವಿನ ಕತೆಯೂ ಆಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.