Your cart is empty now.
ನನ್ನ ಬಗ್ಗೆ ನಿಮಗೆ ತಿಳಿದಿರಬಹುದು... ಬಹಳಷ್ಟು ಕಿವಿ ಕತ್ತರಿಸಿ ಕೆಂಪು ದೀಪದ ಬಾಲೆಗೆ ಕೊಟ್ಟದ್ದು. ಬಸಿರು ಹೊತ್ತ ಸಿಡುಬು ಮುಖದ ವೇಶೈಯೊಡನೆ ಸಂಸಾರ ಹೂಡಿದ್ದು, ಇಂದು ಕೋಟಿಗಟ್ಟಲೆ ಡಾಲರ್ಗಳಿಗೆ ಮಾರಾಟವಾಗುವ ನನ್ನ ಚಿತ್ರಗಳು ಒಂದು ಹೊತ್ತಿನ ಊಟಕ್ಕೂ ಒದಗದಿದ್ದದ್ದು. ಅದುಮಿಟ್ಟ ಭಾವನೆಗಳು ಕ್ಯಾನ್ವಾಸ್ ಮೇಲೆ ಭುಗಿಲೆದ್ದ ಬಣ್ಣಗಳಾಗಿ ಸ್ಫೋಟಿಸಿದ್ದು, ದಾರಿದ್ರದ ಅಂಚಿನಲ್ಲಿ ಹುಚ್ಚಾಸ್ಪತ್ರೆಯ ಒಳ ಹೊರಗೆ ಬದುಕು ತಾಕಲಾಡಿದ್ದು. ನನ್ನನ್ನು ನೀವು ಕಂಡಿರುವಿರಿ, ಕೆಂಪು, ಹಸಿರು, ನೀಲಿ ಬಣ್ಣಗಳಲ್ಲಿ, ವರ್ಣಗಳು ಸ್ಫೋಟಿಸುವ ನನ್ನ ಚಿತ್ರಗಳಲ್ಲಿ. ಬಿರಿದ ಹಳದಿ ಸೂರ್ಯಕಾಂತಿಗಳಲ್ಲಿ, ಹೊಲ ಬಯಲುಗಳಲ್ಲಿ, ರಾತ್ರಿ ಆಗಸದ ಮಬ್ಬು ಚುಕ್ಕಿಗಳಲ್ಲಿ, ನೋವಿಗದ್ದಿದ ನನ್ನ ಕುಂಚದಲ್ಲಿ ಇಸವಿ 1985, ನಮ್ಮ ಟಾಟಾ ಇನ್ಸ್ಟಿಟ್ಯೂಟ್ನ ವಿಭಾಗವೊಂದರಲ್ಲಿ ಎರಡು ಚಿತ್ರಗಳನ್ನು ನೋಡಿದ್ದೆ. ಆಕಾಶಕ್ಕೆ ಬೆಂಕಿ ಇಟ್ಟಂತೆ ಕಂಡ ಚಿತ್ರಗಳು - ಕೆಳಗೆ ‘Cypress and Stars by Van Gogh’ ಎಂದಿತ್ತು. ಸುಂದರ ಶಾಂತ ಪ್ರಕೃತಿಯ ಇಂಥಾ ಬಗ್ಗಡದ ಉತ್ಕಟ ಚಿತ್ರ ನನಗೆ ವ್ಯಾನ್ ಗೋನ ಬಗ್ಗೆ ಒಂದಿಷ್ಟು ಕುತೂಹಲ ಹುಟ್ಟಿಸಿತು. ಎಲ್ಲರಂತಿರದ ಈತನ ಚಿತ್ರಗಳು ಆಕರ್ಷಿಸಿದವು. ವ್ಯಾನ್ ಗೋನ ಬದುಕನ್ನು ತಿಳಿಯಹೊರಟಾಗ, ಅಪ್ಪಟ ನೋವಿನ ಅನುಭವವಾಯಿತು. ಆತನ ಚಿತ್ರಗಳ ವಿಮರ್ಶೆ, ಪ್ರಶಂಸೆಗಳನ್ನು ಕಲೆಯ ಬಲ್ಲವರಿಗೆ ಬಿಟ್ಟಿದ್ದೇನೆ. ಆತನ ಬದುಕಿನ ಉತ್ಕಟತೆಯನ್ನು ಮಾತ್ರ ಹಿಡಿಯ ಹೊರಟ ನನ್ನ ಪ್ರಯತ್ನ ಈ ‘ನೋವಿಗದ್ದಿದ ಕುಂಚ’. ಮತ್ತೆ ಮತ್ತೆ ಪ್ರೀತಿಗೆ, ಅದರೊಡನೆಯ ನೋವಿಗೆ ಹಿಂತಿರುಗಿದ ಈ ವ್ಯಕ್ತಿ, ಸತ್ತು ಶತಮಾನವಾದರೂ ತನ್ನ ಪತ್ರಗಳಿಂದ, ಚಿತ್ರಗಳಿಂದ ನನ್ನಂಥಾ ಭಾವುಕರ ಮನಸ್ಸನ್ನು ಕೆದಕುವುದುಂಟು. ಇದು ವ್ಯಾನ್ ಗೋನ ಕತೆ. ಆತನ ಪತ್ರಗಳ, ಚಿತ್ರಗಳ, ಆತನ ನೋವು ಮತ್ತು ಸಾವಿನ ಕತೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.