Your cart is empty now.
ರಹಮತ್ ತರೀಕೆರೆ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಈ ಗ್ರಂಥದಲ್ಲಿ ಸಂಕಲಿಸಲಾಗಿದೆ. ನೇತು ಬಿದ್ದ ನವಿಲು ಪುಸ್ತಕದ ಬರಹಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆ ಭಾಗ ‘ವಿಚಾರ’ದಲ್ಲಿ ಹತ್ತು ಲೇಖನಗಳಿವೆ. ಸದ್ಯದ ಇಕ್ಕಟ್ಟುಗಳಲ್ಲಿ ಶ್ರೀಯವರ ನೆನಪು, ಕನ್ನಡ ಸಾಹಿತ್ಯ: ನಾಡು ಮತ್ತು ಅಧಿಕಾರದ ಕಲ್ಪನೆ, ಬ್ರಿಟಿಷ್ ಸ್ತುತಿ ಗೀತೆಗಳು: ಭಾಷೆ ಮತ್ತು ಓಲೈಕೆ, ಹೊಸ ಮನುಷ್ಯರ ಹುಡುಕಾಟ, ಹೊಸ ತಲೆಮಾರಿಗೆ ಹೊಸ ಚಳುವಳಿ, ಈಚಿನ ಕನ್ನಡ ಸಾಹಿತ್ಯ; ಕೆಲವು ಹೊಳಹುಗಳು, ಆತ್ಮಕಥೆ: ಕನ್ನಡ ಗದ್ಯದ ಅಧೋಲೋಕ, ದಲಿತ ಚಳುವಳಿ ಮತ್ತು ನೇತು ಬಿದ್ದ ನವಿಲು, ಕರ್ನಾಟಕ ಸಂಸ್ಕೃತಿ ಮತ್ತು ಲೋಹಿಯಾವಾದ, ಸಂಶೋಧನೆ ಮತ್ತು ಮತೀಯತೆ ಎಂಬ ಲೇಖನಗಳಿವೆ. ಎರಡನೇ ಭಾಗ ‘ವಿದ್ಯಮಾನ’ದಲ್ಲಿ ಏಳು ಲೇಖನಗಳಿವೆ. ದೇವರಾಜ ಅಸರಸೂ ಲಂಕೇಶರ ಗದ್ಯವೂ, ಆಹಾರದ ಮೇಲೆ ಹಲ್ಲೆಗಳೇಕೆ?, ಧರ್ಮ ಪರಿವರ್ತನೆ: ಕೆಲವು ಪ್ರಶ್ನೆಗಳು, ಸಂಸ್ಕೃತ ವಿಶ್ವವಿದ್ಯಾಲಯ ಕುರಿತು, ಕವಲು ಹಾದಿಯಲ್ಲಿ ಮುಸ್ಲಿಮರು, ಮಹಿಳೆ-ವೈಧವ್ಯ ಮತ್ತು ರಾಜಕಾರಣ, ಬಳ್ಳಾರಿ ಸೀಮೆಯಲ್ಲಿ ಚುನಾವಣೆ ಮತ್ತು ರೊಕ್ಕ. ಮೂರನೇ ಭಾಗ ‘ಕೃತಿ’ಯಲ್ಲಿ ಬದಲಿ ರಾಜಕೀಯ ಚಿಂತನೆ, ಫೈಜ್ ಕಾವ್ಯ, ಮಲೆನಾಡನ್ನು ಕಾಣಲು ಹೊಸ ದಿಟ್ಟಿ, ನುಗಡೋಣಿ ಕತೆಗಳಿ, ಅಪಮಾನ-ಅಭಿಮಾನದ ಎರಡು ನೆಲೆಗಳು ಬರಹಗಳಿವೆ. ನಾಲ್ಕನೆಯ ಭಾಗ ’ತಿರುಗಾಟ’ದಲ್ಲಿ ಪೂರ್ವಜರ ಊರು ಸಂಗನಕಲ್ಲಿ, ಶಿವನೂ ಬುದ್ಧನೂ ಕೂಡುವ ನಾಡು, ಚಿರಾಪುಂಜಿಯ ನೆನಪು, ಅಂತರಗಟ್ಟೆ ಜಾತ್ರೆಯ ಟಿಪ್ಪಣಿ, ಹಾದಿ ಬೀದಿಯಲ್ಲಿ ಖಂಡಾಂತರ ವಾಸ್ತುಕಲೆ ಲೇಖನಗಳಿವೆ ಐದನೆಯ ’ಜನ’ ಭಾಗದಲ್ಲಿ ಬೆಳಗಲ್ ವೀರಣ್ಣ, ಪಿಬಿ ಶ್ರೀನಿವಾಸ್, ಗುರು ನೊಸಂತಿ, ಮರೆಯಾದ ಹನುಮಂತಯ್ಯ ಲೇಖನಗಳಿವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.