Free Shipping Above ₹500 | COD available

Kudiva Kanneeru ( Poems ) - Beetle Book Shop Sale -10%
Rs. 99.00Rs. 110.00
Vendor: BEETLE BOOK SHOP
Type: PRINTED BOOKS
Availability: 8 left in stock

ದಲಿತ ಕಾವ್ಯಕ್ಕೆ ಐದು ದಶಕಗಳ ಇತಿಹಾಸವಿದೆ. ದನಿ ಇಲ್ಲದವರಿಗೆ ದನಿಯಾದದ್ದು ಇದರ ಹೆಗ್ಗಳಿಕೆ. ಆರಂಭದಲ್ಲಿ ಸಿಟ್ಟು, ಆಕ್ರೋಶಗಳು ಹೊರಬಂದವು. ಅದುವರೆವಿಗೂ ಕೇಳಿರದಿದ್ದ ಭಾಷೆ, ನುಡಿಗಟ್ಟುಗಳು ಕನ್ನಡ ಕಾವ್ಯವನ್ನು ಹೊಕ್ಕವು ಗ್ರಾಮೀಣ ಭಾರತದ ತಳಸಮುದಾಯಗಳ ನೋವು, ಹಸಿವು, ಬಡತನ, ಶೋಷಣೆ ಕನ್ನಡಿಗರಿಗೆ ಪರಿಚಯವಾಯಿತು. ನಂತರದ ದಶಕಗಳಲ್ಲಿ ಕಾವ್ಯ ತನ್ನ ಮಗ್ಗಲು ಬದಲಿಸಿ ದಟ್ಟ ಅನುಭವಗಳೊಂದಿಗೆ ತೆರಕೊಂಡಿತು. ಕಾವ್ಯದ ಸೂಕ್ಷ್ಮತೆಯ ಕಡೆಗೆ ಗಮನ ಹರಿಸಿತು. ಅಲ್ಲಿಯವರೆಗೂ ಪಾರ್ಶ್ಚಿಕವಾಗಿದ್ದ ಕನ್ನಡ ಸಾಹಿತ್ಯಕ್ಕೆ ದಲಿತ-ಬಂಡಾಯ ಸಾಹಿತ್ಯ ಪೂರ್ಣತ್ವವನ್ನು ದೊರಕಿಸಿಕೊಟ್ಟಿತು ಎಂದು ನಾನು ನಂಬುತ್ತೇನೆ. ಕಾಲದೊಡ್ಡಿಗೆ ಕಾವ್ಯದ ಓಘವೂ ಬದಲಾಗುತ್ತಿರುತ್ತದೆ. ಈ ಯಾಂಬು (ಯಾಂತ್ರಿಕ ಬುದ್ಧಿಮತ್ತೆ) ಕಾಲದಲ್ಲಿ ಬದಲಾವಣೆ ಅತೀವ ವೇಗವನ್ನು ಪಡೆದುಕೊಂಡಿದೆ. ಆದರೆ ಭಾರತದ ಸಂದರ್ಭದಲ್ಲಿ 'ಜಾತಿಪದ್ಧತಿ' ಸ್ಥಗಿತಗೊಂಡ ನೆಲೆಯಲ್ಲಿಯೆ ನಿಂತಿದೆ. ಅದಕ್ಕೆ ಜ್ಞಾನದ ಸೋಂಕು ತಗಲುವುದೇ ಇಲ್ಲ. ಅದರ ಪರಿಣಾಮವೇ 'ಕುದಿವ ಕಣ್ಣೀರು' ಕವಿತೆಗಳು.

ವಿಕಾಸ್ ಆರ್.ಮೌಲ್ಯ ಈಗಾಗಲೇ ಭರವಸೆ ಮೂಡಿಸಿರುವ ಲೇಖಕರಾಗಿದ್ದಾರೆ. ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇದು ಅವರ ಮೊದಲ ಕವಿತಾ ಸಂಕಲನವಾದ್ದರಿಂದ ಕೆಲವು ಮಿತಿಗಳಿವೆ. ಕಾವ್ಯ ಮೂಲದಲ್ಲಿ ಜೀವನ ವಿಮರ್ಶೆಯೆ. ಆದ್ದರಿಂದ ಆತ್ಮಾನುಸಂಧಾನದ ಕವಿತೆಗಳು ಇಲ್ಲಿ ಹೆಚ್ಚಾಗಿವೆ. ಪ್ರಯೋಗಶೀಲ ಕವಿ ಎಂದು ಹೇಳಬಹುದು. 'ಕನ್ನಡ ಎಂದರೆ ಹೊರಬಾಡು ಇದ್ದಂಗೆ' ಎಂದು ಬರೆಯಬಲ್ಲರು, ಬುದ್ಧರ ಕರುಣೆಯನ್ನು ರೂಢಿಸಿಕೊಂಡವರು. ಅಲ್ಲಿ ನಡುರಾತ್ರಿಯಲ್ಲಿ ಹಾರಿ ಬಿಡುವ/ ಬಾಂಬುಗಳಿಗೆ ರೆಕ್ಕೆ ಬಂದಿದ್ದರೆ/ಹಾರುತ್ತಲೇ ಜೀವ/ ಬಿಡುತ್ತಿದ್ದವೇನೋ.. ಎಂಬ ಸಳಿಲುಗಳಿವೆ. ಇವರ ಕಾವ್ಯಕ್ಕೆ ರೆಕ್ಕೆಗಳು ಮೂಡಿ ಎತ್ತರಕ್ಕೆ ಹಾರಲಿ ಎಂದು ಹಾರೈಸುತ್ತೇನೆ.

-ಡಾ.ಮೂಡ್ನಾಕೂಡು ಚಿನ್ನಸ್ವಾಮಿ

Guaranteed safe checkout

Kudiva Kanneeru ( Poems )
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.