Your cart is empty now.
ಲೇಖಕರು: ಗಣೇಶಯ್ಯ ಕೆ ಎನ್, Ganeshaiah K N
ವಾತಾಪಿ ಗಣಪತಿಂ ಭಜೇ'
ಕ್ರಿಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಆ ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'
ಅಕ್ಕಮಹಾದೇವಿಯ ಪ್ರತಿರೂಪದಂತೆ ಬದುಕಿದ ಕಾಶ್ಮೀರದ ಒಬ್ಬ ಶಿವಭಕ್ತಿಯ ಜೀವನವನ್ನು ಅಧ್ಯಯನ ಮಾಡಲು ಹೋದ ಸಂಶೋಧನಾ ವಿದ್ಯಾರ್ಥಿ ತಾನು ಕಂಡ ಸತ್ಯವನ್ನು ಹೊರಗೆಡಹಲು ಮುಂದಾದಾಗ, ಅದು ಅವಳ ಜೀವನಕ್ಕೆ ಕಂಟಕವಾಗುತ್ತದೆ. ಆ ಮೂಲಕ ಆಕೆ ಬೇರೊಂದು, 'ಪರ್ಯಾಯ' ಸತ್ಯವನ್ನು ಕಾಣತೊಡಗುತ್ತಾಳೆ.
ಶತಮಾನಗಳಿಂದಲೂ ಯೆಹೂದಿಗಳಲ್ಲಿ ದೇಶಪ್ರೇಮ ಮತ್ತು ಹೋರಾಟದ ಸ್ಫೂರ್ತಿ ತುಂಬುತ್ತಿರುವ 'ಮಸಾದ' ಬೆಟ್ಟದ ಮೇಲಿನ ಸಾಮೂಹಿಕ ಹತ್ಯೆಯ ಚಾರಿತ್ರಿಕ ಘಟನೆಯ ಸುತ್ತ ಸಂಶಯದ ಸುಳಿಗಳು ಬೆಳೆದಂತೆ, ಆಕಸ್ಮಿಕವಾಗಿ ದೊರಕಿದ ಮಾಹಿತಿಯಿಂದ ಆ ಚರಿತ್ರೆಯ ಮತ್ತೊಂದು ಮುಖದ ಪರಿಚಯವಾಗುತ್ತದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.