Your cart is empty now.
'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮರುಳಮುನಿಯನ ಕಗ್ಗ' ಯುಗದಕವಿ ಡಿವಿಜಿಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು, ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು, ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ.
ಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಕೈಗಿಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು.
ಅದನ್ನು ಸಕಾಲಕ್ಕೆ ಸಾಕಾರಗೊಳಿಸಿಕೊಟ್ಟವರು ಖ್ಯಾತ ಕವಿಗಳಾದ ಶ್ರೀ ಕವಿತಾಕೃಷ್ಣ ಅವರು.
- ಪ್ರಕಾಶಕರು
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.