Your cart is empty now.
Free Shipping Charge on Orders above ₹500. COD available
ಮೊಗಲ್ ಭಾರತದ ಇತಿಹಾಸದಲ್ಲಿ ದಾರಾಶಿಖೋ(ಕ್ರಿ.ಶ.೧೬೧೫-೧೬೫೯) ನಂತಹ ರಾಜಕುಮಾರ ಇನ್ನೊಬ್ಬನಿಲ್ಲ. ಅವನ ಇಡೀ ಜೀವನ ದಾರುಣ ಘಟನೆಗಳಿಂದ ಕೂಡಿದ್ದರೂ, ಅದಕ್ಕೊಂದು ಆಧ್ಯಾತ್ಮಿಕ ವರ್ಚನ್ನೂ ಇದೆ. ಹಿಂದೂ-ಮುಸ್ಲಿಮ್ ಐಕ್ಯತೆಯನ್ನು ತನ್ನ ಜೀವನದ ಪರಮ ಆದರ್ಶವನ್ನಾಗಿ ಸ್ವೀಕರಿಸಿದ್ದ ದಾರ್ಶನಿಕ ಈತ. ಈತನ ಜೀವನ ಮತ್ತು ಚಿಂತನೆ ಮತೀಯ ಹಿಂಸೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಮಾತ್ರವಲ್ಲ; ನೆರೆಯ ರಾಷ್ಟ್ರಗಳಿಗೂ ಅತ್ಯಂತ ಉಪಯುಕ್ತ.
ಈ ಕೃತಿಯಲ್ಲಿ ದಾರಾಶಿಖೋನ ಅಭಿಜಾತ ಕೃತಿ 'ಮಜ್ಜ-ಉಲ್-ಬಹರೈನ್'ನ ಅನುವಾದ(ಸಮುದ್ರ ಸಂಗಮ) ಇದೆ ಮತ್ತು ಅವನ ಜೀವನ ಕಥನವಿದೆ. ಧಾರ್ಮಿಕ ಸಾಮರಸ್ಯಕ್ಕೆ ಇದೊಂದು ಉಪಯುಕ್ತ ಕೃತಿ. ಡಾ. ಡಿ. ಆರ್. ನಾಗರಾಜ್ ಬರೆದ ಭಾರತೀಯ ಸೂಫೀಗಳನ್ನು ಕುರಿತ ಚರ್ಚೆಯೊಂದನ್ನು ಈ ಕೃತಿ ಒಳಗೊಂಡಿದೆ. ದಾರಾನನ್ನು ಕನ್ನಡಕ್ಕೆ ಪರಿಚಯಿಸಿದ, ಅವನ ಕೃತಿಯನ್ನು ಅನುವಾದಿಸಿದ ಅಗ್ರಹಾರ ಕೃಷ್ಣಮೂರ್ತಿ ಅಭಿನಂದನಾರ್ಹರು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.