Your cart is empty now.
ತೆಲುಗು ಕಥೆಗೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನವಿದೆ. ಅದಕ್ಕೆ ರಾಯಲಸೀಮಾ ಕಥೆಗಾರರ ಕೊಡುಗೆ ಅನನ್ಯ. ಅವರಲ್ಲಿ ಥಟ್ಟನೆ ಹೊಳೆಯುವ ಹೆಸರೆಂದರೆ ನಮ್ಮ ಸನ್ನಿತ್ರ ಡಾ ಮಧುರಾಂತಕಂ ನರೇಂದ್ರ (1957) ಅವರದ್ದು. ನರೇಂದ್ರ ತಮ್ಮ ತಂದೆ ಮಧುರಾಂತಕಂ ರಾಜಾರಾಂ ಅವರಂತೆ ತೆಲುಗು ಕಥೆಯ ಒಳವಿನ್ಯಾಸವನ್ನು ಸಮಾಜಮುಖೀಗೊಳಿಸಿದ ಸೂಕ್ಷ್ಮಸಂವೇದನಾಶೀಲ ಅಪೂರ್ವ ಪ್ರತಿಭಾವಂತರು. ಕಳೆದ ಮೂರಾಲ್ಕು ದಶಕಗಳಲ್ಲಿ ತಮ್ಮ ಕಥೆ ಕಾದಂಬರಿಗಳಿಂದ ತೆಲುಗು ಕಥಾಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ತಮ್ಮ ಮೌಲಿಕ ಕೃತಿಗಳಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಇವರು ಸದ್ಯ ತಿರುಪತಿಯಲ್ಲಿ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಬೋಧಿಸುತ್ತಿದ್ದಾರೆ.
ಅಂಸ್ಟರ್‌ಡಾಂಲೋ ಒಕ ಅದ್ಭುತಂ ಇದು ಇವರ ವಿಭಿನ್ನ ಕಾದಂಬರಿ. ವಿದೇಶಪ್ರಯಾಣದಲ್ಲಿ ಜೊತೆಯಾಗುವ ದಮ್ಮಲಾಲ್ ಛೋಪ್ರಾ ಈ ಕಿರುಕಾದಂಬರಿಯನ್ನು ಆವರಿಸಿರುವ ಕೇಂದ್ರಪಾತ್ರ. ರಾಯಲಸೀಮಾದ ಅನಾವೃಷ್ಠಿ ಬಡತನ ರೈತಾಪಿ ಸಮುದಾಯದ ಸಂಕಟಗಳನ್ನು ತಮ್ಮ ಬಹುಪಾಲು ಕಥೆಕಾದಂಬ-ರಿಗಳಲ್ಲಿ ಅಭಿವ್ಯಕ್ತಿಸುತ್ತಿದ್ದ ನರೇಂದ್ರರ ಈ ಕಾದಂಬರಿ ಬೇರೆ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಅಪರಿಚಿತ ಸ್ಥಳಗಳ ಮುಖಾಮುಖಿ ಹಾಗೂ ಪಾತ್ರಗಳ ಆಕ್ರಮಣ-ಕಾರಿ ಮನೋಭಾವ ನಮ್ಮನ್ನು ಬೆರಗುಗೊಳಿಸುತ್ತದೆ. ತಮ್ಮ ಜಾಯಮಾನಕ್ಕೊಗ್ಗದ ಭಾಷೆಯನ್ನು ನುರಿತ ಕಸುಬುದಾರನಂತೆ ಬಳಸಿ ಕೃತಿಗೆ ಕ್ಲಾಸಿಕ್ ಪ್ರಭಾವಳಿ ಮುಡಿಸಿದ್ದಾರೆ. ಇವರ ಹಲವು ಕಥೆಗಳನ್ನು ಅನುವಾದಿಸಿರುವ ನನ್ನನ್ನು ಈ ಕೃತಿ ಮಂತ್ರಮುಗ್ಧನನ್ನಾಗಿಸಿದೆ. ಆದ್ದರಿಂದ ಸ್ವಸಂತೋಷದಿಂದ ಇದನ್ನು ಕನ್ನಡೀಕರಿಸಿದ್ದೇನೆ. ಇದು ನೇರ ಅನುವಾದವಲ್ಲ, ಆದರೆ ಶ್ವೇಚ್ಛಾನುವಾದ, ಓದಿಸಿಕೊಳ್ಳಲಿ ಎಂಬ ಏಕೈಕ ಕಾರಣದಿಂದ.
- ಕುಂವೀ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.