Your cart is empty now.
ಬಸವರಾಜು ಅವರ ಆಸಕ್ತಿಗಳು ಹಲವಾರು. ಸಾಹಿತ್ಯ, ರಾಜಕೀಯ, ಸಂಸ್ಕೃತಿ, ಸಿನೆಮಾ ಇತ್ಯಾದಿ ಕ್ಷೇತ್ರಗಳಲ್ಲಿ ಅವರ ಕುತೂಹಲ ಹಂಚಿಹೋಗಿದೆ. ಆದರೂ ಯಾವುದೇ ಕ್ಷೇತ್ರವನ್ನು ಬರವಣಿಗೆಗೆ ಆಯ್ದುಕೊಂಡರೂ, ಅದನ್ನು ಸಾಮಾಜಿಕ ಮತ್ತು ಸಮಕಾಲೀನ ಸಂದರ್ಭದಲ್ಲಿ ಒರೆಗೆ ಹಚ್ಚಿ ವಿಶ್ಲೇಷಿಸುವ ಪ್ರತಿಭೆ ಅವರಿಗಿದೆ. ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ರಚಿಸುವಾಗಲೂ, ಅವರ ಬರವಣಿಗೆಯ ಶಿಸ್ತು ಮತ್ತು ಬದ್ಧತೆ ಬದಲಾಗದೇ ಉಳಿದಿರುವುದಕ್ಕೆ ಇಲ್ಲಿನ ಲೇಖನಗಳು ಉದಾಹರಣೆಗಳಾಗಿವೆ.
ಗೊಂದಲಕ್ಕೆ ಆಸ್ಪದವಿಲ್ಲದೆ, ನೇರ ಮತ್ತು ಸರಳವಾದ ನಿರೂಪಣೆಯ ಮೂಲಕ ಅವರು ಕಟ್ಟಿರುವ ವ್ಯಕ್ತಿಚಿತ್ರಗಳು ಓದುಗನ ಜೊತೆ ನೇರ ಸಂಭಾಷಣೆಗಿಳಿದು ಅನುಭವವಾಗಿಸುವಷ್ಟು ಸಶಕ್ತವಾಗಿವೆ.
ತಾವು ಆರಿಸಿಕೊಂಡಿರುವ ಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ನಿಕಷಕ್ಕೆ ಒಡ್ಡುತ್ತಾರೆ. ಚಿತ್ರಗಳ ಅನನ್ಯತೆಯನ್ನು ಗುರುತಿಸುತ್ತಲೇ ಅವುಗಳ ಸೌಂದರ್ಯದ ಸೊಬಗನ್ನೂ ಅನಾವರಣ ಮಾಡುತ್ತಾರೆ. ಅವರ ವಿಶ್ಲೇಷಣೆಯಲ್ಲಿ ಗಂಭೀರ ಮೀಮಾಂಸಕನೊಬ್ಬ ಬಳಸುವ ಪಾರಿಭಾಷಿಕ ಶಬ್ದಗಳ ದಾಳಿಯಿಲ್ಲ. ಬದಲಾಗಿ ತಮಗೆ ಕಂಡದ್ದನ್ನು ಜನಪ್ರಿಯ ಶೈಲಿಯಲ್ಲಿ, ಹೃದ್ಯವಾಗಿ ಹೇಳುತ್ತಾ ಸಿನೆಮಾ ಲಕ್ಷಣಗಳನ್ನು ತೋರಿಸುತ್ತಾರೆ.
ಜಗತ್ತಿನ ಹಲವಾರು ಸಿನೆಮಾಗಳ ವಿಶೇಷತೆಯನ್ನು ಅವಲೋಕಿಸಿರುವ ಲೇಖಕರು ಅನುಷಂಗಿಕವಾಗಿ ಸಿನೆಮಾ ಸೌಂದರ್ಯ ಮೀಮಾಂಸೆಯೊಂದನ್ನು ಕಟ್ಟಿದ್ದಾರೆ.
ಬಸವರಾಜು ಅವರ ಇಲ್ಲಿನ ಬಹುತೇಕ ಲೇಖನಗಳಲ್ಲಿ ಸಿನೆಮಾ ಅಭಿರುಚಿಯನ್ನು ಬೆಳೆಸುವ ಕಸುವಿದೆ ಎಂದು ನಂಬಿದ್ದೇನೆ.
-ಡಾ. ಕೆ. ಪುಟ್ಟಸ್ವಾಮಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.